ವೇಶ್ಯಾವಾಟಿಕೆ ದಂಧೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ ಮತ್ತು ರೂಪದರ್ಶಿ

Published : May 14, 2023, 03:06 PM IST
ವೇಶ್ಯಾವಾಟಿಕೆ ದಂಧೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ ಮತ್ತು ರೂಪದರ್ಶಿ

ಸಾರಾಂಶ

ವೇಶ್ಯಾವಾಟಿಕೆ ಅಡ್ಡಾ ಮೇಲೆ ದಾಳಿ. ನಟಿ ಮತ್ತು ರೂಪದರ್ಶಿ ಇಬ್ಬರೂ ರೆಡ್‌ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 

ವೇಶ್ಯಾವಾಟಿಕೆ ದಂಧೆ ಮೇಲೆ ನಡೆದ ದಾಳಿಯಲ್ಲಿ ಓರ್ವ ಖ್ಯಾತ ನಟಿ ಮತ್ತು ರೂಪದರ್ಶಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಪುಣೆಯ ವಕಾಡ್ ಪ್ರದೇಶದ ಪಂಚತಾರಾ ಹೋಟೆಲ್‌ನಲ್ಲಿ ಸೆಕ್ಸ್ ರ್ಯಾಕೆಟ್ ಬಗ್ಗೆ ಮಾಹಿತಿ ಪಡೆದ ಪಿಂಪ್ರಿ ಚಿಂಚ್‌ವಾಡ್ ಕ್ರೈಂ ಬ್ರಾಂಚ್ ತಂಡ ದಿಢೀರ್ ದಾಳಿ ನಡೆಸಿದೆ. ದಾಳಿಯಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಆರೋಪದ ಮೇಲೆ ಪೊಲೀಸರು ಭೋಜ್‌ಪುರಿ ನಟಿ ಮತ್ತು ರೂಪದರ್ಶಿ ಹಾಗೂ ಏಜೆಂಟ್‌ರನ್ನ ಬಂಧಿಸಿದ್ದಾರೆ.

ಅಕ್ರಮ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಸಂಜೆ ಹೊಟೇಲ್ ಮೇಲೆ ದಾಳಿ ನಡೆಸಿದೆ. ಬಂಧಿತರಾಗಿರುವ ಆರೋಪಿಗಳು ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರತಿ ಗ್ರಾಹಕರಿಂದ ಒಂದು ರಾತ್ರಿಗೆ 25 ಸಾವಿರ ಹಾಗೂ ಮಧ್ಯಾಹ್ನ 15 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದರು ಎನ್ನಲಾಗಿದೆ. 

ಈ ಬಗ್ಗೆ ಪಿಂಪ್ರಿ ಚಿಂಚ್‌ವಾಡ್ ಕ್ರೈಂ ಬ್ರಾಂಚ್ ಪ್ರತಿಕ್ರಿಯೆ ನೀಡಿದ್ದು,'ನಗರದಲ್ಲಿ ವೇಶ್ಯಾವಾಟಿಕೆ ಮತ್ತು ಅಕ್ರಮ ಕಳ್ಳಸಾಗಣೆಯಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಮತ್ತು ಅಂತಹ ಅಪರಾಧಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಬಲವಾದ ಸಂದೇಶವನ್ನು ರವಾನಿಸಿದೆ. 

ವೇಶ್ಯಾವಾಟಿಕೆ ದಂಧೆ; ರೆಡ್‌ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಿರುತೆರೆ ನಟಿ ಆರತಿ

ಪೊಲೀಸ್ ಇನ್ಸ್‌ಪೆಕ್ಟರ್ ದೇವೇಂದ್ರ ಚವಾಣ್ ಪ್ರತಿಕ್ರಿಯೆ ನೀಡಿ, 'ಭೋಜ್‌ಪುರಿ ನಟಿ ಮತ್ತು ರೂಪದರ್ಶಿಯೊಬ್ಬರು ಪಂಚತಾರಾ ಹೋಟೆಲ್‌ನಲ್ಲಿ ಏಜೆಂಟ್‌ನೊಂದಿಗೆ ಸೆಕ್ಸ್ ರ್ಯಾಕೆಟ್ ನಡೆಸುತ್ತಿರುವ ಬಗ್ಗೆ ಸಿಕ್ಕ ಸುಳಿವಿನ ಆಧಾರ ಮೇಲೆ ತನಿಖೆ ಮಾಡಲು ನಕಲಿ ಗ್ರಾಹಕರನ್ನು ಕಳುಹಿಸಿದ್ದರು. ಏಜೆಂಟ್ ಅನ್ನು ಆನ್‌ಲೈನ್‌ನಲ್ಲಿ ಸಂಪರ್ಕಿಸಿ, ಪಂಚತಾರಾ ಹೋಟೆಲ್‌ನಲ್ಲಿ ರೂಂ ಬುಕ್ ಮಾಡುವಂತೆ ಏಜೆಂಟ್ ಡಮ್ಮಿ ಗ್ರಾಹಕರಿಗೆ ಸೂಚಿಸಿದ್ದಲ್ಲದೆ, ನಟಿ ಮತ್ತು ಮಾಡೆಲ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ

ಡಮ್ಮಿ ಗ್ರಾಹಕರನ್ನು ಬುಕ್ ಮಾಡಿದ ನಂತರ ಏಜೆಂಟ್ ಮತ್ತು ಇಬ್ಬರು ಮಹಿಳೆಯರು ಸೆಕ್ಸ್ ರಾಕೆಟ್‌ನಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರು ಪಂಚತಾರಾ ಹೋಟೆಲ್ ಮೇಲೆ ದಾಳಿ ನಡೆಸಿ ಏಜೆಂಟ್, ನಟಿ ಮತ್ತು ರೂಪದರ್ಶಿ ಸೇರಿದಂತೆ ಇಬ್ಬರು ಮಹಿಳೆಯರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಬಂಧಿಸಲಾಗಿದೆ. ಸದ್ಯ ವಿಚಾರಣೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mahesh Babu ಮಾಡಬೇಕಿದ್ದ ಸಿನಿಮಾ ನಾಗಾರ್ಜುನ ಪಾಲು: ಅಪ್ಪ ಕೃಷ್ಣ ಅಡ್ಡಬರದಿದ್ರೆ ಏನಾಗ್ತಿತ್ತು!
ರಶ್ಮಿಕಾ ಪರ ನಿಂತ Gen Z ಪಾರ್ಟಿ.. ರಶ್ಮಿಕಾ ಈಸ್ ಗ್ರೇಟ್.. ಕರ್ನಾಟಕ ಕ್ರಶ್ ಟು 'ನ್ಯಾಷನಲ್ ಕ್ರಶ್' ಆಗಿದ್ದು ಸಣ್ಣ ಸಾಧನೆಯಲ್ಲ!