ಅಂಬಾನಿ ಪಾರ್ಟಿ: ರಶ್ಮಿಕಾ ಮಂದಣ್ಣರನ್ನು ಇಗ್ನೋರ್ ಮಾಡಿದ ಶ್ರದ್ಧಾ ಕಪೂರ್, ದೀಪಿಕಾ!

Published : Sep 20, 2023, 01:09 PM ISTUpdated : Sep 20, 2023, 01:10 PM IST
ಅಂಬಾನಿ ಪಾರ್ಟಿ: ರಶ್ಮಿಕಾ ಮಂದಣ್ಣರನ್ನು ಇಗ್ನೋರ್ ಮಾಡಿದ ಶ್ರದ್ಧಾ ಕಪೂರ್, ದೀಪಿಕಾ!

ಸಾರಾಂಶ

ಅಂಬಾನಿ ಮನೆಯ ಗಣೇಶೋತ್ಸವದಲ್ಲಿ ನಟ-ನಟಿಯರ ದಂಡೇ ಹರಿದು ಬಂದಿತ್ತು. ಆದರೆ ಫಂಕ್ಷನ್​ಗೆ ಹಾಜರಾದ ನಟಿ ರಶ್ಮಿಕಾ ಮಂದಣ್ಣ ಅವರನ್ನು ಎಲ್ಲರೂ ಇಗ್ನೋರ್​ ಮಾಡಿರುವುದು ಹೈಲೈಟ್​ ಆಗ್ತಿದೆ.

ದೇಶದೆಲ್ಲೆಡೆ ಗೌರಿ ಹಬ್ಬದ ಸಡಗರ ಮುಗಿದಿದ್ದು, ಗಣೇಶ ಹಬ್ಬ ಇನ್ನೂ ಭರ್ಜರಿಯಾಗಿಯೇ ನಡೆಯುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ಕೆಲವು ವಿದೇಶಿಗರೂ ಈ ಹಬ್ಬವನ್ನು ಆಚರಿಸುವುದು ಉಂಟು. ಕೆಲವು ಕಡೆಗಳಲ್ಲಿ ತಿಂಗಳುಗಟ್ಟಲೆ ಗಣೇಶನನ್ನು ಕುಳ್ಳರಿಸಿ, ಸಡಗರ ಆಚರಿಸುತ್ತಾರೆ. ಹಲವಾರು ಸೆಲೆಬ್ರಿಟಿಗಳ ಮನೆಯಲ್ಲಿ ಅವರ ಘನತೆಗೆ ತಕ್ಕಂತೆ ಅದ್ಧೂರಿಯಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ. ನಿನ್ನೆ ವಿಶ್ವದ ಶ್ರೀಮಂತ ಉದ್ಯಮಿ ಎನಿಸಿಕೊಂಡಿರುವ  ರಿಲಯನ್ಸ್​ ಗ್ರೂಪ್​ ಚೇರ್ಮನ್​ ಮುಕೇಶ್​ ಅಂಬಾನಿಯ ಅಂಟಿಲಿಯಾ ಮನೆಯಲ್ಲೂ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹೇಳಿ ಕೇಳಿ ಅವರು ಅಂಬಾನಿ. ಇವರ ಕುಟುಂಬದವರ ಫಂಕ್ಷನ್​ ಎಂದರೆ ಹೇಳುವುದೇ ಬೇಡವಲ್ಲ. ಬಹುತೇಕ ಸೆಲೆಬ್ರಿಟಿಗಳು ಇವರು ಮನೆಗೆ ಆಗಮಿಸಿದ್ದರು. ವಿವಿಧ ಕ್ಷೇತ್ರದ ಗಣ್ಯರ ಜೊತೆ ನಟ-ನಟಿಯರ ದಂಡೇ ಬಂದಿತ್ತು.
 
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಭಾರತ ತಂಡದ ಆಟಗಾರ ಕೆಎಲ್ ರಾಹುಲ್ ಸೇರಿದಂತೆ ಬಾಲಿವುಡ್ ಸ್ಟಾರ್​ಗಳಾದ  ಶಾರುಖ್ ಖಾನ್ ಕುಟುಂಬ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಿರ್ದೇಶಕ ಅಯಾನ್ ಮುಖರ್ಜಿ, ಐಶ್ವರ್ಯ ರೈ, ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ವಿಕ್ಕಿ ಕೌಶಲ್, ಅಜಯ್ ದೇವಗನ್, ರೋಹಿತ್ ಶೆಟ್ಟಿ, ಶ್ರದ್ಧಾ ಕಪೂರ್, ಮೌನಿ ರಾಯ್, ದಿಶಾ ಪಡೋರ್, ಹೇಮಾ ಮಾಲಿನಿ, ಅನನ್ಯಾ ಪಾಂಡೆ, ರಶ್ಮಿಕಾ ಮಂದನಾ, ಜವಾನ್​ ಸಿನಿಮಾ ನಿರ್ದೇಶಕ ಆಟ್ಲೀ ದಂಪತಿ ಹಾಗೂ ರೇಖಾ ಮತ್ತಿತರರು ಈ ಕಾರ್ಯಕ್ರಮಕ್ಕೆ ಬಂದಿದ್ದರು. 

ಅಳುವ ಬಗ್ಗೆ ರಶ್ಮಿಕಾಗೆ ಅಮ್ಮನ ಪಾಠ: ಇಲ್ಲಸಲ್ಲದ ಅಡ್ವೈಸ್​ ಕೊಟ್ಟು ಜನರ ತಲೆಕೆಡಿಸಬೇಡಿ ಎಂದ ಫ್ಯಾನ್ಸ್​!
 
 ಸ್ಟಾರ್ ನಟಿಯರು ಸೀರೆಯುಟ್ಟು ಮಿಂಚಿದ್ರು. ಕಿಯಾರಾ ಅಡ್ವಾಣಿ , ಅನನ್ಯಾ ಪಾಂಡೆ, ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ರೇಖಾ ಸೇರಿದಂತೆ ಅನೇಕ ನಟಿಯರು ಸೀರೆಯುಟ್ಟು ಮಿಂಚಿದರೆ, ಕೆಲವು ನಟಿಯರು ದುಬಾರಿ ಬಟ್ಟೆ ತೊಟ್ಟು ಫೋಟೋಗೆ ಪೋಸ್​ ಕೊಟ್ಟರು.   ಶಾರುಖ್ ಖಾನ್  ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು. ಇವರು,  ನೀತಾ ಅಂಬಾನಿ ಮೊಮ್ಮಗಳ ಜೊತೆ ಫೋಟೋ ತೆಗೆಸಿಕೊಂಡ್ರು. 

ಈಗ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಎಲ್ಲರ ಗಮನ ಸೆಳೆದಿರುವುದು ರಶ್ಮಿಕಾ ಮಂದಣ್ಣ. ಇದಕ್ಕೆ ಕಾರಣ, ರಶ್ಮಿಕಾ ಮಂದಣ್ಣ ಕ್ರೀಮ್ ಕಲರ್ ಸೀರೆಯಲ್ಲಿ ಸಿಂಪಲ್​ ಬ್ಯೂಟಿಯಾಗಿ ಮಿಂಚುತ್ತಿದ್ದರೂ, ಇವರನ್ನು ಪಾರ್ಟಿಯಲ್ಲಿ ಯಾರೂ ಕ್ಯಾರೇ ಮಾಡಲಿಲ್ಲ. ಇದು ಹೈಲೈಟ್​ ಆಗುತ್ತಿತ್ತು, ಸಕತ್​ ಟ್ರೋಲ್​ಗೂ ಒಳಗಾಗುತ್ತಿದ್ದಾರೆ ನಟಿ. ಬಹುತೇಕ ನಟಿಯರು ಅದಾಗಲೇ ಫಂಕ್ಷನ್​ನಲ್ಲಿ ಬಿಜಿ ಇರುವಾಗ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟರು. ಈ ಸಮಯದಲ್ಲಿ ಅಲ್ಲಿದ್ದ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಮುಂದೆ ಬಂದದ್ದು ಬಿಟ್ಟರೆ ಅವರನ್ನು ಅಲ್ಲಿ ಎಲ್ಲರೂ ಇಗ್ನೋರ್​ ಮಾಡುತ್ತಿದ್ದುದು ಕಂಡು ಬಂತು. ಆರಂಭದಲ್ಲಿ, ಶ್ರದ್ಧಾ ಕಪೂರ್​ ಎದುರಾದರೂ ಅವರು ಕೇರೇ ಮಾಡಲಿಲ್ಲ. ಫೋಟೋ ಸೆಷನ್​ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೂ ಅವರೂ ರಶ್ಮಿಕಾ ಅವರನ್ನು ನೋಡಿಯೂ ಇಗ್ನೋರ್​  ಮಾಡಿದರು. ನ್ಯಾಷನಲ್​  ಕ್ರಷ್​ ಎಂದು ಬಿರುದು ಪಡೆದುಕೊಂಡಿರುವಾಕೆಯನ್ನು ಕಂಡರೆ ಏಕೆ ಎಲ್ಲರೂ ಹೀಗೆ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ. 

ಶೀಘ್ರವೇ ಗುಡ್​ ನ್ಯೂಸ್​ ಎಂದ ವಿಜಯ್​ ದೇವಕೊಂಡ: ಇದು ರಶ್ಮಿಕಾ ಕೈ ಅಲ್ವಲ್ಲಾ ಅಂತಿದ್ದಾರೆ ಫ್ಯಾನ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?