
ಖ್ಯಾತ ತಮಿಳು ನಟ ವಿಜಯ್ ಆಂಟೊನಿ ಪುತ್ರಿ ಮೀರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳು ಚಿತ್ರರಂಗ ಈ ಸುದ್ದಿಯಿಂದ ಆಘಾತಕ್ಕೊಳಗಾಗಿದೆ. ಚೆನ್ನೈಆಳ್ವಾರಪೇಟೆಯ ಟಿಡಿಕೆ ರಸ್ತೆಯಲ್ಲಿರುವ ವಿಜಯ್ ಮನೆಯಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 19ರ ಮುಂಜಾನೆ 3ರ ಸಮಯದಲ್ಲಿಈ ಘಟನೆ ನಡೆದಿದ್ದು ನಟ ವಿಜಯ್ ಮಗಳ ಕೋಣೆಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದ ಮೀರಾ ಕಾಣಿಸಿದ್ದು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರು ಅಷ್ಟೊತ್ತಿಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ವಿಜಯ್ ಪುತ್ರಿ ಮೀರಾ ಚೆನ್ನೈನ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಳು. 16 ವರ್ಷ ವಯಸ್ಸಿನಾಕೆ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇನ್ನು ಮೀರಾ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ ಎಂದು ಹೇಳಲಾಗ್ತಿದೆ. ಮೀರಾ ಖಿನ್ನತೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರೆನ್ನಲಾಗಿದೆ. ನಟ ವಿಜಯ್ ಆಂಟೋನಿ 7ನೇ ವಯಸ್ಸಿನಲ್ಲಿರಬೇಕಾದರೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆದರೀಗ 16 ವರ್ಷದ ಮಗಳನ್ನು ಸಹ ಕಳೆದುಕೊಂಡಿದ್ದಾರೆ. ಮೀರಾ ಆತ್ಮಹತ್ಯೆ ಸಂಬಂದ ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಬಂತು ಬಂದಿಲ್ಲ ಉಪ್ಪಿಯ 'UI' ಫಸ್ಟ್ ಟೀಸರ್: ತಲೆಗೆ ಹುಳ ಬಿಡೋದ್ರಲ್ಲಿ ಏನ್ ಒನ್ ಬುದ್ದಿವಂತ
ವಿಜಯ್ ಆಂಟೋನಿ ಫಾತಿಮಾ ಅವರನ್ನು ವಿವಾಹವಾಗಿದ್ದಾರೆ. ಫಾತಿಮಾ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳುತ್ತಾರೆ. ವಿಜಯ್ ಮತ್ತು ಫಾತಿಮಾ ಅವರಿಗೆ ಮೀರಾ ಮತ್ತು ಲಾರಾ ಎಂಬ ಹೆಣ್ಣು ಮಕ್ಕಳಿದ್ದು, ಈಗ ಎರಡನೇ ಮಗಳು ಮೀರಾ ಸೂಸೈಡ್ ಮಾಡಿಕೊಂಡಿದ್ದಾಳೆ ಇನ್ನು ವಿಜಯ್ ಆಂಟೋನಿ ತಮಿಳಿನ ಜನಪ್ರಿಯ ಸಂಗೀತ ಸಂಯೋಜಕ, ಹಾಡುಗಾರ, ನಟ, ನಿರ್ದೇಶಕರಾಗಿ ಗುರುತಿಸಿಕೊಂಡವರು. ಹಲವು ವರ್ಷಗಳಿಂದ ಇಂಡಸ್ಟ್ರಿರುವ ವಿಜಯ್ ಆಂಟೋನಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪಿಚ್ಚಕಾರನ್, ಪಿಚ್ಚಕಾರನ್ 2, ಸೈತಾನ್, ಕಾಳಿ, ಕೊಲೆಗಾರನ್, ಕುಡಿ ಒರುವನ್, ತಮಿಳ್ ಅರಸನ್ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.