ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?

ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?

Published : Apr 22, 2026, 12:40 PM IST

ಮೊನ್ನೆಯಷ್ಟೇ ಮದುವೆ ಮುಗಿಸಿಕೊಂಡು ಹನಿಮೂನ್​ಗೆ ತೆರಳಿದ್ದ ರಶ್ಮಿಕಾ ವಿಜಯ್, ಕೊಡಗಿಗೆ ಬಂದು ತವರಿನ ಆತಿಥ್ಯ ಸವಿದಿದ್ರು. ಅಲ್ಲಿಂದ ಸೀದಾ ರಣಬಾಲಿ ಸೆಟ್​ನಲ್ಲಿ ಪ್ರತ್ಯಕ್ಷ ಆಗಿದ್ರು. ಸ್ವಾತಂತ್ರ ಪೂರ್ವದ ಕಥೆಯಾಗಿರೋ ರಣಬಾಲಿಯಲ್ಲಿ ಈ ರಿಯಲ್ ಜೋಡಿ ಸತಿಪತಿಯರಾಗಿ ನಟಿಸ್ತಾ ಇದ್ದಾರೆ.

ಇತ್ತೀಚಿಗಷ್ಟೇ ವೈವಾಹಿಕ ಬದುಕಿಗೆ ಕಾಲಿಟ್ಟಿರೋ ರಶ್ಮಿಕಾ ಮಂದಣ್ಣ (Rashmika Mandanna), ಮದುವೆ ಸಡಗರ ಮುಗಿಸಿಕೊಂಡು ರಣಬಾಲಿ ಸೆಟ್​​ಗೆ ಹಾಜರಾಗಿದ್ರು. ರಣಬಾಲಿ ಶೂಟ್ ಮುಗಿಸಿ ಬ್ಯಾಂಕಾಕ್​ಗೆ ಹಾರಿರೋ ಕಿರಿಕ್ ಬ್ಯೂಟಿ ಅಲ್ಲಿ ಸಾಹಸ ಕಲೆಯೊಂದನ್ನ ಕಲೀತಾ ಇದ್ದಾರೆ. ಪ್ರತಿದಿನ 8 ಗಂಟೆ ಟ್ರೈನಿಂಗ್ ಪಡೀತಿರೋ ರಶ್ಮಿಕಾ ಸ್ಕ್ರೀನ್ ಮೇಲೂ ಸಾಹಸ ಪ್ರದರ್ಶನ ಮಾಡಲಿದ್ದಾರೆ.

ರಣಬಾಲಿ ಶೂಟ್ ಮುಗಿಸಿ ಬ್ಯಾಂಕಾಂಕ್​ಗೆ ಹಾರಿದ ಶ್ರೀವಲ್ಲಿ; ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್ ಕಲಿಯುತ್ತಿರುವ ರಶ್ಮಿಕಾ..!
ಯೆಸ್ ಮೊನ್ನೆಯಷ್ಟೇ ಮದುವೆ ಮುಗಿಸಿಕೊಂಡು ಹನಿಮೂನ್​ಗೆ ತೆರಳಿದ್ದ ರಶ್ಮಿಕಾ ವಿಜಯ್, ಕೊಡಗಿಗೆ ಬಂದು ತವರಿನ ಆತಿಥ್ಯ ಸವಿದಿದ್ರು. ಅಲ್ಲಿಂದ ಸೀದಾ ರಣಬಾಲಿ ಸೆಟ್​ನಲ್ಲಿ ಪ್ರತ್ಯಕ್ಷ ಆಗಿದ್ರು. ಸ್ವಾತಂತ್ರ ಪೂರ್ವದ ಕಥೆಯಾಗಿರೋ ರಣಬಾಲಿಯಲ್ಲಿ ಈ ರಿಯಲ್ ಜೋಡಿ ಸತಿಪತಿಯರಾಗಿ ನಟಿಸ್ತಾ ಇದ್ದಾರೆ.

ರಣಬಾಲಿ ಸೆಟ್​​ನಲ್ಲಿ ಜಯಮ್ಮನಾಗಿ ಌಕ್ಟ್ ಮಾಡ್ತಾ ಇದ್ದ, ರಶ್ಮಿಕಾ ಈಗ ನೋಡಿದ್ರೆ ಬ್ಯಾಂಕಾಂಕ್​ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ಸಾಹಸ ಕಲೆಯೊಂದನ್ನ ಕಲೀತಾ ಇದ್ದಾರೆ. ದಿನದ 8 ಗಂಟೆ ಅವಧಿ ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್ ಕಲೀತಾ ಇದ್ದಾರೆ ರಶ್ಮಿಕಾ.

ಮೈಸಾ ಚಿತ್ರಕ್ಕಾಗಿ ಕಿರಿಕ್ ಬ್ಯೂಟಿ ಮಹಾ ಸಾಹಸ; ಆಕ್ಷನ್ ಕ್ವೀನ್ ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ..?
ಹೌದು ರಶ್ಮಿಕಾ ಇಂಥದ್ದೊಂದು ಸಾಹಸ ಕಲೀತಾ ಇರೋದು ಮೈಸಾ ಸಿನಿಮಾಕ್ಕಾಗಿ. ಮೈಸಾ ರಶ್ಮಿಕಾ ಪಾಲಿನ ಮಹತ್ವಾಕಾಂಕ್ಷೆಯ ಸಿನಿಮಾ. ಫಾರ್ ಧಿ ಫಸ್ಟ್ ಟೈಂ ಈ ನಾಯಕಿ ಪ್ರದಾನ ಚಿತ್ರದಲ್ಲಿ ಌಕ್ಷನ್ ಸಿಕ್ವೆನ್ಸ್​​ಗಳಲ್ಲಿ ರಶ್ಮಿಕಾ ಮಿಂಚ್ತಾ ಇದ್ದಾರೆ.

ಇಷ್ಟು ದಿನ ಗ್ಲಾಮರ್ ಗೊಂಬೆಯಾಗಿ ಮಿಂಚಿದ ಚೆಲುವೆ ಈಗ ಌಕ್ಷನ್ ಕ್ವೀನ್ ಆಗೋದಕ್ಕೆ ಸಜ್ಜಾದಂತೆ ಕಾಣ್ತಾ ಇದೆ. ಈ ಸಿನಿಮಾಗಾಗಿ ಸದ್ಯ ಬ್ಯಾಂಕಾಂಕ್​ನಲ್ಲಿ ಕಂಬಾಟ್  ತರಬೇತಿ ಪಡೀತಾ ಇದ್ದಾರೆ. ಸಾಮಾನ್ಯವಾಗಿ ಮಿಲಿಟರಿ ಸೇವೆಗಳಲ್ಲಿ ಆತ್ಮರಕ್ಷಣೆಗಾಗಿ , ಶಸ್ತ್ರಾಸ್ತ್ರಗಳಿಲ್ಲದೆ ನಡೆಯುವ ಕೈಯಿಂದ ಕೈಗೆ ಮಾಡುವ ಕಸರತ್ತು ಇದಾಗಿದ್ದು, ರಶ್ಮಿಕಾ ಮೈಸಾಗಾಗಿ ಇದನ್ನ ಕಲೀತಾ ಇದ್ದಾರೆ.

ಮದುವೆ ಬಳಿಕ ರಶ್ಮಿಕಾ ರಣಬಾಲಿ ಮತ್ತು ಮೈಸಾ ಎರಡೂ ಸಿನಿಮಾಗಳಿಗೆ  ಡೇಟ್ ಕೊಟ್ಟಿದ್ದಾರೆ. ಒಂದರ ನಂತರ ಒಂದು ಸಿನಿಮಾಗಳಲ್ಲಿ ತೊಡಗಿಗೊಳ್ತಾ ಇದ್ದಾರೆ. ಒಂದು ವಾರ ಆ ಸೆಟ್​ನಲ್ಲಿದ್ರೆ ಇನ್ನೊಂದು ವಾರ ಈ ಸೆಟ್​ನಲ್ಲಿ ಇರ್ತಾರೆ.

ಇನ್ನೂ ರಶ್ಮಿಕಾ ನಟನೆಯ ಬಾಲಿವುಡ್ ಮೂವಿ ಕಾಕ್​ಟೇಲ್ 2 ರಿಲೀಸ್ ಸಜ್ಜಾಗಿದ್ದು, ಅದರ ಪ್ರಚಾರಕ್ಕೂ ರಶ್ಮಿಕಾ ಸಮಯ ಮೀಸಲಿಟ್ಟಾರೆ. ಮದುವೆ ನಂತರ ಹಾಯಾಗಿ ಎಂಜಾಯ್ ಮಾಡಿಕೊಂಡಿರದೇ ಭಿನ್ನ ವಿಭಿನ್ನ ಪಾತ್ರಗಳು, ಚಿತ್ರಗಳಿಗಾಗಿ ಕಸರತ್ತು ಮಾಡ್ತಾ ಇರೋ ರಶ್ಮಿಕಾನ ನೋಡಿ ಫ್ಯಾನ್ಸ್, ಈಕೆಯನ್ನ ಬಹಾದ್ದೂರ್ ಹೆಣ್ಣು ಅಂತಿದ್ದಾರೆ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
Read more