ಒಂದೆರಡು ಲಕ್ಷ ಅಲ್ಲ 45 ಲಕ್ಷ ಕೊಟ್ಟು ಚಿರಂಜೀವಿ ನನ್ನ ಪ್ರಾಣ ಉಳಿಸಿದರು: ಭಾವುಕರಾದ ಖಳನಟ ಪೊನ್ನಾಂಬಳಂ

Published : Mar 16, 2023, 11:29 AM IST
ಒಂದೆರಡು ಲಕ್ಷ ಅಲ್ಲ 45 ಲಕ್ಷ ಕೊಟ್ಟು ಚಿರಂಜೀವಿ ನನ್ನ ಪ್ರಾಣ ಉಳಿಸಿದರು: ಭಾವುಕರಾದ ಖಳನಟ ಪೊನ್ನಾಂಬಳಂ

ಸಾರಾಂಶ

 ಮೆಗಾ ಸ್ಟಾರ್ ಮಾಡಿದ ಹಣ ಸಹಾಯದ ಬಗ್ಗೆ ರಿವೀಲ್ ಮಾಡಿದ ಪೊನ್ನಾಂಬಳಂ. ಒಂದೆರಡು ಲಕ್ಷ ಕೇಳಿದರೆ 45 ಲಕ್ಷ ಕೊಟ್ಟರು...

ತೆಲುಗು ಚಿತ್ರರಂಗದ ಖ್ಯಾತ ಖಳನಟ ಪೊನ್ನಾಂಬಳಂ ಕೆಲವು ತಿಂಗಳುಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅರ್ಥಿಕ ಸಹಾಯದ ಅಗತ್ಯವಿದೆ ಎಂದು ಅನೇಕರ ಬಳಿ ಮನವಿ ಮಾಡಿಕೊಂಡಿದ್ದರು. ಸಂಗ್ರಹಿಸಿದ ಹಣದಿಂದ ವೈದ್ಯಕೀಯ ವೆಚ್ಚಕ್ಕೆ ಸಾಕಾಗಿದ ಕಾರಣ ಸ್ನೇಹಿತರ ಸಹಾಯದಿಂದ ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಸಂಪರ್ಕ ಮಾಡಿದರಂತೆ. ಅಬ್ಬಬ್ಬಾ ಅಂದ್ರೆ ಒಂದೆರಡು ಲಕ್ಷ ಕೊಡಬಹುದು ಎಂದುಕೊಂಡು ಪೊನ್ನಾಂಬಳಂ ಮೆಸೇಜ್ ಮಾಡಿದರಂತೆ ಆದರೆ ಅಲ್ಲಿ ನಡೆದದ್ದೇ ಬೇರೆ ಎನ್ನಹುದು.... 

ಹೌದು! ಚಿಕಿತ್ಸೆಗೆ ಸಹಾಯ ಬೇಕು ಎಂದು ಪೊನ್ನಾಂಬಳಂ ಚಿರಂಜೀವಿ ಮೊಬೈಲ್ ನಂಬರ್‌ಗೆ ಮೆಸೇಜ್ ಮಾಡಿದರಂತೆ. ಮೆಸೇಜ್ ಮಾಡಿದ 10 ನಿಮಿಷದಲ್ಲಿ ಚಿರಂಜೀವಿ ಫೋನ್ ಕಾಲ್ ಮಾಡಿದ್ದಾರೆ. ನೀವು ಈ ಕೂಡಲೆ ಹೈದರಾಬಾದ್‌ಗೆ ಬನ್ನಿ ಚಿಕಿತ್ಸೆ ಸಹಾಯ ಮಾಡುವುದಾಗಿ ಮೆಗಾ ಸ್ಟಾರ್ ಹೇಳಿದ್ದಾರೆ ಆದರೆ ಆಸ್ಪತ್ರೆ ಹಾಸಿಗೆಯಿಂದ ಎದ್ದೇಳುವಷ್ಟು ಶಕ್ತಿ ಇಲ್ಲ ಎಂದು ತಿಳಿಸಿದಾಗ ತಕ್ಷಣವೇ ಹತ್ತಿರದಲ್ಲಿದ್ದ ಅಪೋಲೋ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ವ್ಯವಸ್ಥೆ ಆಗಿರುತ್ತೆ ಎಂದು ಹೇಳಿದರಂತೆ. ಕೆಲವು ನಿಮಿಷಗಳಲ್ಲಿ ಪೊನ್ನಾಂಬಳಂ ಅಪೋಲೋ ಆಸ್ಪತ್ರೆ ತಲುಪಿ ಸಂಪೂರ್ಣ ಚಿಕಿತ್ಸೆ ಪಡೆದರಂತೆ.

'ಅಣ್ಣಯ್ಯ ನಾನು ಪೊನ್ನಾಂಬಳಂ ನನ್ನ ಆರೋಗ್ಯ ಚೆನ್ನಾಗಿಲ್ಲ ಕೈಲಾದಷ್ಟು ಸಹಾಯ ಮಾಡಿ' ಎಂದು ಮೆಸೇಜ್ ಮಾಡಿ ರಿಕ್ವೆಸ್ಟ್‌ ಮಾಡಿದ್ದೆ. ಹತ್ತು ನಿಮಿಷಗಳ ನಂತರ ನನಗೆ ಅಣ್ಣಯ್ಯ ಕರೆ ಬಂತು. ಹಾಯ್ ಪೊನ್ನಾಂಬಳಂ ಏನಾಯಿತ್ತು? ಆರೋಗ್ಯ ಸರಿ ಇಲ್ಲವೇ? ಹೈದರಾಬಾದ್‌ಗೆ ಬರೋಕೆ ಸಾಧ್ಯವೇ ಚಿಕಿತ್ಸೆ ಕೊಡಿಸುತ್ತೇನೆ ಎಂದು ಕೇಳಿದರು. ನಾನು ಬರಲಾಗದ ಪರಿಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿದೆ. ಹಾಗಾದರೆ ಕೊಡಲೇ ಚೆನ್ನೈ ಅಫೋಲೋ ಆಸ್ಪತ್ರೆಗೆ ಹೋಗು ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದರು. ನಾನು 1 ಲಕ್ಷ ಅಥವಾ 2 ಲಕ್ಷ ಹಣ ಸಹಾಯ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಇಷ್ಟು ನನಗೆ ಮರುಜನ್ಮ ಕೊಡುತ್ತಾರೆ ಎಂದುಕೊಂಡಿರಲಿಲ್ಲ' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಪೊನ್ನಾಂಬಳಂ ಮಾತನಾಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್; ಕುತೂಹಲ ಮೂಡಿಸಿದ ದಿಢೀರ್ ಭೇಟಿ

'ನಾನು ಆಸ್ಪತ್ರೆಗೆ ಹೋದರೆ ಅಲ್ಲಿ ಕನಿಷ್ಠ ನನ್ನ ಪ್ರವೇಶ ಶುಲ್ಕ ಕೂಡ ಕೇಳಲಿಲ್ಲ. ಎಲ್ಲವನ್ನು ಅವರೇ ನೋಡಿಕೊಂಡು ಚಿಕಿತ್ಸೆ ನೀಡಿದರು. ನನ್ನ ಚಿಕಿತ್ಸೆ 45 ಲಕ್ಷ ರೂ ವೆಚ್ಚವಾಯಿತು. ಅಷ್ಟೋ ಮೊತ್ತವನ್ನು ಚಿರಂಜೀವಿ ಅಣ್ಣಯ್ಯ ಭರಿಸಿದರು ಎನ್ನುತ್ತಾ ಪೊನ್ನಾಂಬಳಂ ಭಾವುಕರಾಗಿದ್ದಾರೆ. ಆ ಆಸ್ಪತ್ರೆ ರಾಮ್‌ಚರಣ್ ಅವರ ಪತ್ನಿ ಉಪಾಸನಾ ಅವರದ್ದು. ಹಾಗಾಗ ಬಹಳ ಚೆನ್ನಾಗಿ ನೋಡಿಕೊಂಡರು' ಎಂದು ಪೊನ್ನಾಂಬಳಂ ವಿವರಿಸಿದ್ದಾರೆ. 

ಕೋಟಿ ಆಸ್ತಿ ಒಡತಿ; ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಇವ್ರೇ ನೋಡಿ....

ಚಿರಂಜೀವಿ ಜೊತೆ ಮುಗ್ಗುರು ಮೊನಗಾಳ್ಳು, ಘರಾನಾ ಮೊಗುಡು, ಮೆಕಾನಿಕ್‌ ಅಲ್ಲುಡು, ಹಿಟ್ಲರ್‌ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. 90ರ ದಶಕದಲ್ಲಿ ಬಹಳ ಕ್ರೂರವಾಗಿ ಕಾಣುತ್ತಿದ್ದ ಖಳನಟರ ಪಾತ್ರದಲ್ಲಿ ಪೊನ್ನಾಂಬಳಂ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!