ಫೇಮಸ್ ರ‍್ಯಾಪರ್‌ನ ಸೋಷಿಯಲ್ ಮೀಡಿಯಾ ಹಗರಣ..! 72 ಲಕ್ಷ ಕೊಟ್ಟು 7.2 ಕೋಟಿ ವ್ಯೂಸ್ ಖರೀದಿ

Suvarna News   | Asianet News
Published : Aug 09, 2020, 09:56 AM ISTUpdated : Aug 09, 2020, 10:44 AM IST
ಫೇಮಸ್ ರ‍್ಯಾಪರ್‌ನ ಸೋಷಿಯಲ್ ಮೀಡಿಯಾ ಹಗರಣ..! 72 ಲಕ್ಷ ಕೊಟ್ಟು 7.2 ಕೋಟಿ ವ್ಯೂಸ್ ಖರೀದಿ

ಸಾರಾಂಶ

ರ‍್ಯಾಪರ್‌ಗಳಿಗೆ ಆದಾಯ ಬರುವುದೇ ಹಾಡಿನ ಖ್ಯಾತಿ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಹಾಡು ಹಿಟ್ ಆದಷ್ಟು ಬೊಕ್ಕಸವೂ ತುಂಬುತ್ತದೆ. ತನ್ನ ಲೇಟೆಸ್ಟ್ ಹಾಡು ಹಿಟ್ ಆಗುವುದಕ್ಕೆ ಈ ರ‍್ಯಾಪರ್ ಮಾಡಿದ್ದೇನು ನೋಡಿ..!

ರ‍್ಯಾಪರ್‌ಗಳಿಗೆ ಆದಾಯ ಬರುವುದೇ ಹಾಡಿನ ಖ್ಯಾತಿ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಹಾಡು ಹಿಟ್ ಆದಷ್ಟು ಬೊಕ್ಕಸವೂ ತುಂಬುತ್ತದೆ. ತನ್ನ ಲೇಟೆಸ್ಟ್ ಹಾಡು ಹಿಟ್ ಆಗುವುದಕ್ಕೆ ಈ ರ‍್ಯಾಪರ್ ಮಾಡಿದ್ದೇನು ನೋಡಿ..!

ಬಾಲಿವುಡ್‌ ಫೇಮ್ಸ್ ರ‍್ಯಾಪರ್ ಬಾದ್ ಶಾ ಎಲ್ಲರಿಗೂ ಗೊತ್ತು. ಹಿಟ್‌ ಸಾಂಗ್‌ಗಳ ಮೂಲಕ ಯುವಜನರ ನೆಚ್ಚಿನ ರ‍್ಯಾಪರ್ ಆಗಿರುವ ಬಾದ್‌ಶಾ ಅವರನ್ನು ಸದ್ಯ ಪೊಲೀಸ್‌ ವಿಚಾರಣೆ ನಡೆಸುತ್ತಿದ್ದಾರೆ.

ಬಾಲಿವುಡ್ ನಟ ಸಂಜಯ್ ದತ್ ಆರೋಗ್ಯದಲ್ಲಿ ಏರುಪೇರು; ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ!

ಬಾದ್‌ ಶಾ ಲೇಟೆಸ್ಟ್ ಸಾಂಗ್ ಯೇ ಲಡ್‌ಕೀ ಪಾಗಲ್ ಹೇ ಭಾರೀ ಸದ್ದು ಮಾಡಿದ ಆಲ್ಬಂ. ಈ ಹಾಡಿಗೆ ವಲ್ರ್ಡ್‌ ರೆಕಾರ್ಡ್‌ ಸಿಗಬೇಕೆಂದು ಬಾದ್‌ ಶಾ ಮಾಡಿದ ಎಡವಟ್ಟಿನಿಂದ ಇದೀಗ ಪಶ್ಚಾತಪಿಸುವಂತಾಗಿದೆ.

ಮುಂಬೈ ಕ್ರೈಂ ಬ್ರಾಂಚ್ ಈ ಸಂಬಂಧ ತನಿಖೆ ನಡೆಸುತ್ತಿದ್ದು, ಮೂರನೇ ದಿನ ಫೇಮಸ್‌ ರ‍್ಯಾಪರ್‌ನ್ನು ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ಖಾತೆ, ನಕಲಿ ವ್ಯೂಸ್, ನಕಲಿ ಲೈಕ್‌ಗಳನ್ನು ಪಡೆದಿರುವ ಬಾದ್‌ಶಾನನ್ನು ಶನಿವಾರವೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಜಾಕ್ವೆಲಿನ್‌ ಫರ್ನಾಂಡೀಸ್‌ಗೆ 44 ಮಿಲಿಯನ್ ಫಾಲೋವರ್ಸ್: ಹೀಗೂ ನೋಡೋಕೆ ಏನಿದೆ ಜಾಕಿ ಎಕೌಂಟ್‌ನಲ್ಲಿ..?

7.2 ಕೋಟಿ ವ್ಯೂಗಳನ್ನು 72 ಲಕ್ಷ ವೆಚ್ಚದಲ್ಲಿ ಖರೀದಿಸುವುದಾಗಿ ಬಾದ್‌ ಶಾ ವಿಚಾರಣೆ ಸಂದರ್ಭ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪಾಗಲ್ ಹೇ ಹಾಡನ್ನು ಹಿಟ್ ಮಾಡುವುದಕ್ಕಾಗಿ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ರಿಲೀಸ್ ಆದ ಈ ಹಾಡು ರಿಲೀಸ್ ಆದ 24 ಗಂಟೆಯಲ್ಲಿ ಯೂಟ್ಯೂಬ್‌ನಲ್ಲಿ 75 ಮಿಲಿಯನ್ ವ್ಯೂಸ್ ಪಡೆದಿತ್ತು ಎಂದು ಬಾದ್‌ ಶಾ ಹೇಳಿದ್ದರು. ಇದು ಸುಳ್ಳು ಎಂದು ಯೂಟ್ಯೂಬ್ ಹಾಗೂ ಗೂಗಲ್ ಒಡೆತನದ ಆಲ್ಫಬೆಟ್ ತಿಳಿಸಿದೆ.

ಆರಾಧ್ಯ ಕಾಪಿ ಮಾಡಿದ್ಲು ಅಮ್ಮನ ಪೋಸ್, ಅಭಿಷೇಕ್ ಬಚ್ಚನ್ ಫುಲ್ ಖುಷ್

ಇದೀಗ ಕ್ರೈಂ ಬ್ರಾಂಚ್‌ ಅಧಿಕಾರಿಗಳು ಬಾದ್‌ ಶಾ ವಿಚಾರಣೆಗೆ 250ಕ್ಕೂ ಹೆಚ್ಚು ಪ್ರಶ್ನೆಯ ಲಿಸ್ಟ್ ತಯಾರಿಸಿದ್ದು, ಬಾದ್ ಶಾ ನಿಜವಾದ ಹೆಸರು ಆದಿತ್ಯ ಸಿಂಗ್. ಕಂಪನಿಗೆ 18 ಶೇ. ಸೇವಾ ತೆರಿಗೆ ಸೇರಿಸಿ 72 ಲಕ್ಷ ಪಾವತಿಸಿರುವುದಾಗಿ ಬಾದ್‌ ಶಾ ಒಪ್ಪಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತಲೈವಾ 75ನೇ ಹುಟ್ಟುಹಬ್ಬಕ್ಕೆ ಪಡೆಯಪ್ಪ ರೀ-ರಿಲೀಸ್; ಸೀಕ್ವೆಲ್ ಕಥೆಯೂ ರೆಡಿಯಾಗ್ತಿದೆ..!
ಈ ಪುಟಾಣಿಗಳು ಈಗ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು… ಯಾರು ಗೆಸ್ ಮಾಡಿ