ದೇಶ ಭಕ್ತಿ ಮೆರೆವ ಸಿನಿಮಾ ಫೈಟರ್‌ನಲ್ಲಿ ದೀಪಿಕಾ ಮತ್ತು ಹೃತಿಕ್ ರೋಷನ್ ನಡುವಿನ ಹಸಿಬಿಸಿ ದೃಶ್ಯ ನೋಡಿ ದೀಪಿಕಾ ಪತಿ ರಣಬೀರ್ ಸಿಂಗ್ ಹೇಳಿದ್ದೇನು?
ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣನವರ ಅರೆ ಬೆತ್ತಲೆ, ನಟಿ ತೃಪ್ತಿ ಡಿಮ್ರಿಯ ಪೂರ್ಣ ಬೆತ್ತಲೆಯ ವಿಷಯ ಇನ್ನು ಚರ್ಚೆಗೆ ಗ್ರಾಸವಾಗುತ್ತಿರುವ ನಡುವೆಯೇ, ಅನಿಮಲ್ ಭರ್ಜರಿ ಯಶಸ್ಸಿನತ್ತ ಸಾಗಿದೆ. ಆದರೆ ನಟಿಯರು ಪೈಪೋಟಿಗೆ ಬಿತ್ತವರಂತೆ ಬೆತ್ತಲಾಗುತ್ತಿದ್ದಾರಾ ಎನ್ನುವ ಪ್ರಶ್ನೆಯೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೇಳುತ್ತಿದ್ದಾರೆ. ಇದಕ್ಕೆ ಕಾರಣ, ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆಯವರ ಫೈಟರ್ ಚಿತ್ರದ ಟೀಸರ್. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್‌ಫೋರ್ಸ್ ಆಫೀಸರ್ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ.
ನಿನ್ನೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದರಲ್ಲಿ ವಿಮಾನಗಳ ಫೈಟಿಂಗ್ ದೃಶ್ಯಗಳನ್ನು ರೋಚಕವಾಗಿ ತೋರಿಸಲಾಗಿದೆ. ಪಾಕಿಸ್ತಾನದ ವಿರುದ್ಧ ಸಾರಿರುವ ಸಮರದ ಬಗ್ಗೆಯೂ ತೋರಿಸಲಾಗಿದೆ. ಪುಲ್ವಾಮಾ ದಾಳಿಯ ಬಳಿಕ ಶಾಂತಿ ಕದಡಿದಾಗ ಶಂಷೇರ್ ಪಠಾನಿಯಾ ಮತ್ತವನ ತಂಡವನ್ನು ಜೀವಮಾನದ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ. ದೇಶದ ಗಡಿಯಲ್ಲಿ ಏರ್‌ಸ್ಟ್ರೈಕ್ ನಡೆಸುವ ಮೂಲಕ ಶಂಷೇರ್ ದೇಶವನ್ನು ದುಷ್ಟರಿಂದ ಕಾಪಾಡುವ ಕಥೆಯನ್ನು ಹೇಳಲಾಗಿದೆ. ವೈಮಾನಿಕ ದಾಳಿಯ ರೋಚಕ ಸನ್ನಿವೇಶಗಳಿಂದ ಟ್ರೈಲರ್ ಗಮನ ಸೆಳೆಯುತ್ತದೆ.
ಸುಸ್ಸಾನೆ ಖಾನ್- ಹೃತಿಕ್ ಆಲಿಂಗನ! ಸಿನಿಮಾ ತಾರೆಯರಿಗೆ ಡಿವೋರ್ಸ್ ಆದ್ಮೇಲೆ ಲವ್ ಜಾಸ್ತಿಯಾಗೋದ್ಯಾಕೆ?
ಆದರೆ ಇಂಥ ದೇಶಭಕ್ತಿ ಮೆರೆವ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅವರ ರೊಮ್ಯಾನ್ಸ್ ಸೀನ್ ಹೇರಳವಾಗಿದೆ. ಫೈಟರ್ ಜೆಟ್‌ನ ಸಾಹಸವೇನೋ ರೋಮಾಂಚನಗೊಳಿಸುವಂತಿದೆ. ಹೃತಿಕ್, ದೀಪಿಕಾ ಮತ್ತು ಅನಿಲ್ ಕಪೂರ್ ಸರತಿಯಲ್ಲಿ ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊನಾಕಿನಿ ತೊಟ್ಟು ಸಾಗರ ತೀರದಲ್ಲಿ ದೀಪಿಕಾ, ಹೃತಿಕ್ ರೋಷನ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಪ್‌ಲಾಕ್ ಕೂಡ ನೋಡಬಹುದು.
ಆ್ಯಕ್ಷನ್, ರೊಮ್ಯಾನ್ಸ್, ಎಮೋಷನ್, ದೇಶಭಕ್ತಿ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ರೊಮ್ಯಾನ್ಸ್ ಹೆಸರಿನಲ್ಲಿ ಇಷ್ಟು ಕಳಪೆ ಮಟ್ಟದ ದೃಶ್ಯಗಳನ್ನು ತೋರಿಸುವ ಉದ್ದೇಶವೇನು ಎಂದು ಪ್ರಶ್ನಿಸಲಾಗುತ್ತಿದೆ. ಇಂಥ ದೃಶ್ಯಗಳು ಇದ್ದರೆ ಮಾತ್ರ ಚಿತ್ರ ಸಕ್ಸಸ್ ಆಗುತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇದರ ನಡುವೆಯೇ, ಪತ್ನಿಯ ಇಂಥ ಇಂಟಿಮೇಟ್ ಸೀನ್ ನೋಡಿ ನಟ ರಣವೀರ್ ಸಿಂಗ್ ಏನು ಹೇಳಿದ್ದಾರೆ ಎನ್ನುವುದು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಸಿನಿಮಾ ನಟ-ನಟಿಯರು ಸಾಮಾನ್ಯ ಜನರಂತೆ ಅಲ್ಲ. ಯಾರ ಜೊತೆ ಯಾವುದೇ ರೀತಿಯ ದೃಶ್ಯ ಮಾಡಿದರೂ ಅವರಿಗೆ ಏನೂ ಅನ್ನಿಸುವುದೇ ಇಲ್ಲ ಎನ್ನುವುದು ನಿಜವೇ. ಅದೇ ರೀತಿ, ತಮ್ಮ ಪತ್ನಿ ಬೇರೊಬ್ಬರ ಜೊತೆ ಇಂಥ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವುದಕ್ಕೆ ರಣವೀರ್ ಸಿಂಗ್ ಶ್ಲಾಘಿಸಿದ್ದಾರೆ. ದೀಪಿಕಾ ಟ್ರೇಲರ್‌ನಲ್ಲಿ ಬೆಂಕಿ ಹಚ್ಚಿದ್ದಾಳೆ. ಇದನ್ನು ನೋಡಿ ನನಗೆ ತುಂಬಾ ಅಚ್ಚರಿಯಾಯಿತು. ಬೆರಗುಗೊಳಿಸುವ ನಟನೆ ಎಂದು ಶ್ಲಾಘಿಸಿದ್ದಾರೆ.
'ಫೈಟರ್' ಹಾಡು ರಿಲೀಸ್: ದೀಪಿಕಾ ಬೋಲ್ಡ್ ಅವತಾರ ನೋಡಿ ಬಿಚ್ಚಿದ್ರೆ ಮಾತ್ರ ಬೆಲೆನಾ ಕೇಳಿದ ನೆಟ್ಟಿಗರು!