ಯಶ್ ರಾವಣನಾಗಿರೋ 'ರಾಮಾಯಣ'ದಲ್ಲಿ ಬಾಬಿ ಡಿಯೋಲ್, ಲಾರಾಗೆ ಈ ಪ್ರಮುಖ ಪಾತ್ರ

By Suvarna News  |  First Published Jan 16, 2024, 7:07 PM IST

ನಿತೇಶ್ ತಿವಾರಿಯವರ ರಾಮಾಯಣದಲ್ಲಿ ಯಶ್ ರಾವಣನ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರದ ಪ್ರಮುಖ ಇನ್ನೆರಡು ಪಾತ್ರಗಳಿಗೆ ಬಾಬಿ ಡಿಯೋಲ್ ಹಾಗೂ ಲಾರಾ ದತ್ತರಿಗೆ ಆಫರ್ ನೀಡಲಾಗಿದೆ. 


ನಿತೇಶ್ ತಿವಾರಿಯವರ ರಾಮಾಯಣವು ಅದರ ಅಧಿಕೃತ ಘೋಷಣೆಗೆ ಮುಂಚೆಯೇ ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ, ಪೌರಾಣಿಕ ಮಹಾಕಾವ್ಯದ ರೂಪಾಂತರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಕ್ರಮವಾಗಿ ಭಗವಾನ್ ರಾಮ, ಸೀತೆ ಮತ್ತು ರಾವಣ ಪಾತ್ರವನ್ನು ಮಾಡಲಿದ್ದಾರೆ. 

ನಿತೇಶ್ ತಿವಾರಿ ಅವರ ರಾಮಾಯಣವನ್ನು ಟ್ರೈಯಾಲಜಿಯಾಗಿ ಯೋಜಿಸಲಾಗುತ್ತಿದೆ. ಈ ಪೌರಾಣಿಕ ಮಹಾಕಾವ್ಯದ ಬಹುನಿರೀಕ್ಷಿತ ರೂಪಾಂತರದ ಉಳಿದ ಪಾತ್ರವರ್ಗವನ್ನು ತಯಾರಕರು ಈಗ ಅಂತಿಮಗೊಳಿಸುತ್ತಿದ್ದಾರೆ.

Tap to resize

Latest Videos

ಇತ್ತೀಚಿನ ವರದಿಗಳ ಪ್ರಕಾರ ರಾಮಾಯಣದಲ್ಲಿ ಕೈಕೇಯಿಯ ಪಾತ್ರವನ್ನು ಮಾಡಲು ಲಾರಾ ದತ್ತಾ ಅವರನ್ನು ಅಂತಿಮಗೊಳಿಸಲಾಗಿದೆ. ಪ್ರಾಜೆಕ್ಟ್‌ಗೆ ಹತ್ತಿರವಿರುವ ಮೂಲಗಳ ಪ್ರಕರ, 'ನಿತೇಶ್ ತಿವಾರಿ ಭಾರತೀಯ ಇತಿಹಾಸದ ಅತ್ಯಂತ ಕಾಲಾತೀತ ಕಥೆಗೆ ಸೇರಿದ ಪಾತ್ರಗಳನ್ನು ನಿರ್ವಹಿಸಲು ಯೋಗ್ಯವಾದ ನಟರನ್ನು ಆಯ್ಕೆ ಮಾಡಲು ಬಯಸುತ್ತಾರೆ. ರಾಣಿ ಕೈಕೇಯಿ ಪಾತ್ರವನ್ನು ನಿರ್ವಹಿಸಲು ಲಾರಾ ದತ್ತಾ ಪರಿಪೂರ್ಣ ಎಂದು ಅವರು ಭಾವಿಸುತ್ತಾರೆ. ಇದು ರಾಮಾಯಣದಲ್ಲಿನ ಸಂಪೂರ್ಣ ಸಂಘರ್ಷಕ್ಕೆ ಕಾರಣವಾಗುವ ಪ್ರಮುಖ ಪಾತ್ರವಾಗಿದೆ ಮತ್ತು ನಿತೇಶ್ ತಿವಾರಿಯ ಸಂಪೂರ್ಣ ಅದ್ಭುತ ಜಗತ್ತಿಗೆ ಲಾರಾ ಉತ್ಸುಕರಾಗಿದ್ದಾರೆ'

ರಾಮಾಯಣವನ್ನು ಟ್ರೈಲಜಿಯಾಗಿ ಯೋಜಿಸಲಾಗಿದ್ದರೂ, ರಾಮಾಯಣ: ಭಾಗ ಒಂದರಲ್ಲಿ ಲಾರಾ ತನ್ನ ಪಾತ್ರದ ಪ್ರಮುಖ ಭಾಗವನ್ನು ಹೊಂದಿರುತ್ತಾಳೆ. ಮಾರ್ಚ್‌ನಲ್ಲಿ ಚಿತ್ರದ ಮೊದಲ ಶೆಡ್ಯೂಲ್‌ನಲ್ಲಿ ಅವರು ರಣಬೀರ್ ಕಪೂರ್ ಜೊತೆ ಸೇರುವ ನಿರೀಕ್ಷೆಯಿದೆ.

ಯಾರೋ ನೀನು? ನೀನು ಮಗಾ ಏನೋ: ಕುಸುಮಾ ಪ್ರಶ್ನೆಗೆ ತಾಂಡವ್‌ ಬಳಿ ಉತ್ತರ ಇದೆಯಾ?

ಕುಂಭಕರ್ಣನಾಗಿ ಬಾಬಿ?
ಇನ್ನು ಬಹುನಿರೀಕ್ಷಿತ ಚಿತ್ರದಲ್ಲಿ ಕುಂಭಕರ್ಣನ ಪಾತ್ರವನ್ನು ಮಾಡಲು ಬಾಬಿ ಡಿಯೋಲ್ ಅವರನ್ನು ಸಂಪರ್ಕಿಸಲಾಗಿದೆ ಎಂದು ಮೂಲವು ಸೇರಿಸಿದೆ. ಅನಿಮಲ್ ಚಿತ್ರದ ಯಶಸ್ಸಿನ ನಂತರ, ಬಾಬಿ ಇದೀಗ ಆಫರ್‌ಗಳ ಪ್ರವಾಹದಲ್ಲಿದ್ದಾರೆ. ಅವರಿನ್ನೂ ತಮ್ಮ ಅನುಮತಿ ತಿಳಿಸಬೇಕಿದೆಯಷ್ಟೇ.

ಆಂಜನೇಯನಾಗಿ ಸನ್ನಿ ಡಿಯೋಲ್
ಏತನ್ಮಧ್ಯೆ, ಭಗವಾನ್ ಹನುಮಾನ್ ಪಾತ್ರಕ್ಕಾಗಿ ಸನ್ನಿ ಡಿಯೋಲ್ ಅವರೊಂದಿಗಿನ ಸಂಭಾಷಣೆಗಳು ಮುಂದುವರೆಯುತ್ತಿವೆ. ರಾಮಾಯಣದ ತಂಡವು ಸನ್ನಿ ಡಿಯೋಲ್ ಅವರೊಂದಿಗೆ ಚರ್ಚೆಯ ಮುಂದುವರಿದ ಹಂತಗಳಲ್ಲಿದೆ. 'ನಿತೇಶ್ ತಿವಾರಿ ಮಾತ್ರವಲ್ಲ, ರಣಬೀರ್ ಕಪೂರ್ ಕೂಡ ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ ಅವರನ್ನು ಪಡೆಯಲು ಉತ್ಸುಕರಾಗಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ಈ ಚಿತ್ರವು 2024ರಲ್ಲಿ ಬಿಡುಗಡೆಯಾಗಲಿರುವ ದೊಡ್ಡ ಚಿತ್ರಗಳಲ್ಲಿ ಒಂದಾಗಿದ್ದು, ರಾವಣನ ಪಾತ್ರಕ್ಕಾಗಿ ಯಶ್ 150 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. 

click me!