ವೇದಿಕೆಯ ಮೇಲೆ ದೀಪ ಬೆಳಗುವ ಮುನ್ನ ಮೂವರು ನಟರು ಮಾಡಿದ್ದೇನು? ವರುಣ್, ಕರಣ್ ಹಾಗೂ ಜಾಹ್ನವಿ ಕಪೂರ್ ವಿಡಿಯೋ ಆಗ್ತಿದೆ ವೈರಲ್...
ಯಾವುದೇ ದೈವಿಕ ಕಾರ್ಯ ಮಾಡುವಾಗ, ವೇದಿಕೆಯ ಮೇಲೆ ಹೋಗುವ ಸಂದರ್ಭಗಳಲ್ಲಿ ಚಪ್ಪಲಿಯನ್ನು ತೆಗೆಯುವುದು ಹಿಂದೂಗಳ ಸಂಪ್ರದಾಯ. ಇದು ಸಂಪ್ರದಾಯ ಎನ್ನುವುದಕ್ಕಿಂತಲೂ ಗೌರವ ಸೂಚಕವೂ ಹೌದು. ಆದರೆ ಇಂದು ಈ ಸಂಪ್ರದಾಯ, ಗೌರವವನ್ನು ಹಲವರು ಪಾಲನೆ ಮಾಡುವುದಿಲ್ಲ. ಅದರಲ್ಲಿಯೂ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಇಂಥದ್ದೊಂದು ಸಂಪ್ರದಾಯವನ್ನು ಪಾಲನೆ ಮಾಡುವುದು ಕಷ್ಟವೇ. ಸಹಸ್ರಾರು ರೂಪಾಯಿಗಳ ಶೂಸ್ ಧರಿಸಿ ಪೋಸ್ ಕೊಡುವ ನಟ-ನಟಿಯರು ವೇದಿಕೆ ಮೇಲೆ ಹೋಗುವಾಗ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಶೂಸ್ ತೆಗೆಯುವುದು ಕನಸಿನ ಮಾತೇ.
ಆದರೆ ಇದೀಗ ನಟ ವರುಣ್ ಧವನ್ ಅವರು ಶೂಸ್ ತೆಗೆದು ಸಕತ್ ಸುದ್ದಿ ಮಾಡುತ್ತಿದ್ದಾರೆ. ತಮ್ಮ ಮುಂಬರುವ ದುಲ್ಹನಿಯಾ ಚಿತ್ರದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಉದ್ಘಾಟನೆ ಸಮಾರಂಭದಲ್ಲಿ ವರುಣ್ ಧವನ್ ಅವರು ದೀಪ ಬೆಳಗುವ ಮುನ್ನ ತಮ್ಮ ಶೂಸ್ ತೆಗೆದರು. ಅದಾದ ಬಳಿಕ ಅವರನ್ನು ಅನುಸರಿಸಿದ ನಿರ್ದೇಶಕ ಕರಣ್ ಜೋಹರ್ ಅವರೂ ತಮ್ಮ ಶೂಸ್ ತೆಗೆದರು. ಅದಾದ ಬಳಿಕ ಕೈಯಲ್ಲಿ ದೀಪ ಹಿಡಿದುಕೊಂಡಿದ್ದ ಜಾಹ್ನವಿ ಕಪೂರ್ ಅವರ ಸರದಿಯಾಗಿತ್ತು. ಆದರೆ ಜಾಹ್ನವಿ ಅವರು, ಶೂಸ್ ಅನ್ನೂ ತೆಗೆಯುವ ಗೋಜಿಗೆ ಹೋಗದೇ ತಮ್ಮ ಬಳಿ ಇದ್ದ ದೀಪವನ್ನೂ ಹಚ್ಚದೇ ಕರಣ್ ಜೋಹರ್ ಅವರ ಕೈಗೆ ಇತ್ತರು.
ಯೂ ಲವ್ ಐ... ಎಂದಿದ್ದ ಶ್ರದ್ಧಾ ಕಪೂರ್- ಶಾಕ್ನಲ್ಲಿ ಪ್ರೀತಿಯನ್ನೇ ತಿರಸ್ಕರಿಸಿ ಓಡಿದ್ದ ವರುಣ್ ಧವನ್..!
ವರುಣ್ ಧವನ್ ಅವರ ಕಾರ್ಯಕ್ಕೆ ಸಕತ್ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಇನ್ನು ಕೆಲವರು ಇದನ್ನು ಕೂಡ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಅವರು ಶೂಸ್ ತೆಗೆದು ಒಳ್ಳೆಯ ಕಾರ್ಯ ಮಾಡಿದರೂ ಮಾಡಿಕೊಂಡ ಒಂದು ಎಡವಟ್ಟು. ಅದೇನೆಂದರೆ, ಅವರು ತಮ್ಮ ಶೂಸ್ ಅನ್ನು ಕೈಯಿಂದ ತೆಗೆದು ಅದೇ ಕೈಯಲ್ಲಿ ದೀಪ ಹಚ್ಚಿ ಕಾರ್ಯಕ್ರಮ ಉದ್ಘಾಟಿಸಿದರು. ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಕೆಲವರು ಅವರು ಕೊನೆಯ ಪಕ್ಷ ತಮ್ಮ ಶೂಸ್ ತೆಗೆಯುವ ಕೆಲಸವಾದರೂ ಮಾಡಿದ್ದಾರಲ್ಲ, ಅದಕ್ಕೆ ಹೆಮ್ಮೆ ಪಡಿ ಎನ್ನುತ್ತಿದ್ದರೆ, ಇನ್ನು ಕೆಲವರು ಅರ್ಧಂಬರ್ಧ ಸಂಪ್ರದಾಯ ತಿಳಿದುಕೊಂಡರೆ ಹೀಗೆಯೇ ಆಗುವುದು ಎಂದರು.
ಇನ್ನು ಕರಣ್ ಜೋಹರ್ ಕುರಿತು ಹೇಳುವುದಾದರೆ, ಅವರೇನೂ ಶೂಸ್ ತೆಗೆದು ದೀಪ ಬೆಳಗುವ ಯೋಚನೆಯಲ್ಲಿ ಇರಲಿಲ್ಲ. ಆದರೆ ವರುಣ್ ಧವನ್ ಶೂಸ್ ತೆಗೆದ ತಕ್ಷಣ, ಅವರಿಗೂ ಹೀಗೆ ಮಾಡುವುದು ಅನಿವಾರ್ಯವಾಯಿತು. ಅದಕ್ಕಾಗಿ ಅವರು ಶೂಸ್ ತೆಗೆದರು. ಶೂಸ್ ಅನ್ನು ಕಾಲಿನಿಂದಲೇ ತೆಗೆದು ಪಕ್ಕಕ್ಕೆ ಇಟ್ಟು ದೀಪ ಬೆಳಗಿದ್ದರಿಂದ ಅವರು ಟ್ರೋಲ್‌ನಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ದೀಪ ಬೆಳಗಲು ಮೋಂಬತ್ತಿಯನ್ನು ನಟಿ ಹಿಡಿದುಕೊಂಡಿದ್ದರು. ಆದರೆ ಅವರಿಬ್ಬರೂ ಶೂಸ್ ತೆಗೆದಿದ್ದನ್ನು ನೋಡಿ ಜಾಹ್ನವಿ ಕಸಿವಿಸಿಗೊಂಡರು. ವರುಣ್ ಅವರನ್ನು ಕರಣ್ ಅನುಸರಿಸಿದರು. ಆದರೆ ತಾವು ಇವರನ್ನು ಏಕೆ ಅನುಸರಿಸಬೇಕು ಎಂದು ನಟಿಗೆ ಅನ್ನಿಸಿತೋ ಏನೋ. ಶೂಸ್ ತೆಗೆಯುವ ಗೋಜಿಗೆ ಅವರು ಹೋಗಲಿಲ್ಲ. ಇದರ ಸಹವಾಸವೇ ಬೇಡ ಎಂದುಕೊಂಡು ಹಿಡಿದುಕೊಂಡಿದ್ದ ಮೋಂಬತ್ತಿಯನ್ನು ಕರಣ್ ಅವರ ಕೈಗಿತ್ತು, ಅಲ್ಲಿಂದು ಹಿಂದೆ ನುಣುಚಿಕೊಂಡರು. ನಟಿಯ ವಿರುದ್ಧ ಟ್ರೋಲ್‌ಗಳ ಸುರಿಮಳೆಯಾಗುತ್ತಿದೆ.
ಮದುವೆ ಸುದ್ದಿ ಬೆನ್ನಲ್ಲೇ ವಿಯೆಟ್ನಾಂಗೆ ಹಾರಿದ ರಶ್ಮಿಕಾ-ವಿಜಯ್? ಗುಡ್ ನ್ಯೂಸ್ ಯಾವಾಗ ಕೇಳಿದ ಫ್ಯಾನ್ಸ್!