ಯಶ್, ರಣಬೀರ್-ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ರಾಮಾಯಣ ಫಿಲ್ಮ್ ಶೂಟಿಂಗ್ ಶುರುವಾಗಿದ್ದು, ಇದರ ಸೆಟ್ ವಿಡಿಯೋ ವೈರಲ್ ಆಗಿದೆ.
ರಾಮಾಯಣವನ್ನು ಆಧರಿಸಿ ಇದಾಗಲೇ ಕೆಲವು ಚಿತ್ರಗಳು ಬಂದಿದ್ದು, ಇದೀಗ ಮತ್ತೊಂದು ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. ಈ ಚಿತ್ರದ ಬಿಡುಗಡೆ ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸುತ್ತಿದ್ದಾರೆ ಎನ್ನುವ ಸುದ್ದಿ. ಇವರು ನಟಿಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ರಾಮಾಯಣದಲ್ಲಿ ರಾವಣನಾಗಿ ತೆರೆ ಮೇಲೆ ಯಶ್ ಬರುತ್ತಿರುವುದು ಖಚಿತವಾಗಿದೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಬಣ್ಣ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್ನಲ್ಲಿ ಆಗಲಿದೆಯಂತೆ. ಈಗ ಸೆಟ್ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.
ಈ ಚಿತ್ರದ ಕುರಿತು ನಿರ್ದೇಶಕ ನಿತೇಶ್ ತಿವಾರಿ ಇದುವರೆಗೂ ಸೀಕ್ರೇಟ್ ಮೆಂಟೇನ್ ಮಾಡುತ್ತಲೇ ಬಂದಿದ್ದಾರೆ. ಚಿತ್ರದ ಶೂಟಿಂಗ್ ಬಗ್ಗೆಯೂ ಅವರು ಯಾವುದೇ ಮಾಹಿತಿ ಕೊಡಲಿಲ್ಲ. ಆದರೆ ರಾಮನಾಗಿ ಕಾಣಿಸಿಕೊಳ್ಳುತ್ತಿರುವ ರಣ್‌ಬೀರ್ ಕಪೂರ್ ಫ್ಯಾನ್ ಅಕ್ಷಯ್ ಚತುರ್ವೇದಿ ಎನ್ನುವವರು ಮಾಡಿರುವ ಟ್ವೀಟ್ನಿಂದ ಕೆಲ ದಿನಗಳಿಂದ ಇದು ಮತ್ತೆ ಸದ್ದು ಮಾಡುತ್ತಿದೆ. 'ರಾಮಾಯಣ' 2024ರ ಬೇಸಿಗೆಯಲ್ಲಿ ಶುರುವಾಗಲಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ವೇಳೆ ನಿಂತಿದ್ದ ಸಂದರ್ಭದಲ್ಲಿ ರಣ್‌ಬೀರ್ ಕಪೂರ್ ಜೊತೆ ಮಾತನಾಡುತ್ತಿದ್ದೆ. ಆ ಸಮಯದಲ್ಲಿ ಈ ವಿಷಯ ತಿಳಿದಿದೆ. ರಾಮಾಯಣ 2024 ಬೇಸಿಗೆಯಿಂದ ಶುರುವಾಗುತ್ತೆ ಎಂದು ಅವರೇ ಹೇಳಿದರು ಎಂದು ಅಕ್ಷಯ್ ಅವರು ಬರೆದುಕೊಂಡಿದ್ದರಿಂದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿತ್ತು.
ಫ್ಲಾಪ್ ಚಿತ್ರಗಳನ್ನು ಕೊಟ್ಟು, 6 ವರ್ಷ ಸಿನಿಮಾದಿಂದ ದೂರವಿದ್ದರೂ ಅಮಿತಾಭ್, ಶಾರುಖ್ಗಿಂತಲೂ ಫೇಮಸ್ ಈಕೆ!
ಇದೀಗ ಶೂಟಿಂಗ್ ಸೆಟ್ನಿಂದ ಕೆಲವೊಂದು ಫೋಟೋಗಳು ಲೀಕ್ ಆಗಿವೆ. ನಿನ್ನೆ ಅಂದರೆ ಏಪ್ರಿಲ್ 3ರಿಂದ ರಾಮಾಯಣದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಮುಂಬೈನಲ್ಲಿ ಆರಂಭಿಕ ಶೂಟಿಂಗ್ ನಡೆಯುತ್ತಿದ್ದು, ಇದಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಪದ್ಧತಿಯಂತೆ ಮೊದಲಿ ಪೂಜೆ ನೆರವೇರಿಸಿ ಶೂಟಿಂಗ್ ಆರಂಭ ಮಾಡಲಾಗಿದ್ದು, ಇದರ ಕೆಲವು ಫೋಟೋಗಳು ವೈರಲ್ ಆಗಿವೆ. ಸದ್ಯ ಸಣ್ಣ ಪುಟ್ಟ ಪಾತ್ರಗಳ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿದ್ದು, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಅವರ ಶೂಟಿಂಗ್ಗೆ ಇನ್ನು ಸ್ವಲ್ಪ ಸಮಯ ಇದೆ ಎನ್ನಲಾಗುತ್ತಿದೆ.
ಸದ್ಯ ಶೂಟಿಂಗ್ ಸೆಟ್ನ ಹೊರಭಾಗದ ಫೋಟೋಗಳು ಮತ್ತು ವಿಡಿಯೋ ಲೀಕ್ ಆಗಿವೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಚಿತ್ರದಲ್ಲಿ ಇನ್ನುಳಿದಂತೆ, ವಿಭೀಷಣನ ಪಾತ್ರದಲ್ಲಿ ವಿಜಯ್ ಸೇತುಪತಿ, ಆಂಜನೇಯನಾಗಿ ಸನ್ನಿ ಡಿಯೋಲ್, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿದೆ. ತಾವು ರಾಮನಾಗಿ ಮಿಂಚುತ್ತಿರುವ ಕಾರಣ, ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿರುವುದಾಗಿ ರಣಬೀರ್ ತಿಳಿಸಿದ್ದರು. ಇವರು ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ ಕಂಗನಾ ರಣಾವತ್ ಕೂಡ ರಣಬೀರ್ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಇದೀಗ ರಣಬೀರ್ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದಾರೆ.
ಶ್ರೀದೇವಿ ಬಯೋಪಿಕ್ಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಎಂದ ಬೋನಿ ಕಪೂರ್: ಏನಿದರ ಗುಟ್ಟು?
Ramayana set 😻💥 pic.twitter.com/SuUzwwjyUX
— Ranbir Kapoor 👑❤️ (@Khushali_rk)