ಹೊರಜಗತ್ತಿನಲ್ಲಿ ನನ್ನನ್ನು ದೊಡ್ಡ ಸ್ಟಾರ್ ಎಂದು, ಸ್ಟಾರ್ ನಟನೆಂದು ಕರೆಯುತ್ತಾರೆ. ಆದರೆ, ವೈಯಕ್ತಿಕವಾಗಿ ನನಗೆ ಅದು ಯಾವುದೇ ವ್ಯತ್ಯಾಸ ಮಾಡುತ್ತದೆ ಎನಿಸುವುದಿಲ್ಲ. ಏಕೆಂದರೆ ನನ್ನ ಜೀವನವೂ ಕೂಡ ಎಲ್ಲರಂತೆ ಇರುತ್ತದೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ. 'ನಾನು ಎಲ್ಲರಂತೆ, ಅಂದರೆ ಹೊಸಬರಂತೆ, ಸಾಮಾನ್ಯ ಜನರಂತೆ ಬದುಕುತ್ತೇನೆ. ಸ್ಟಾರ್‌ಡಮ್‌ಎಂದರೆ ಏನು ಎಂಬುದು ಇಂದಿಗೂ ನನಗೆ ಅರ್ಥವಾಗಿಲ್ಲ. ಏಕೆಂದರೆ ನಾನೂ ಕೂಡ ಹೊಸಬರಂತೆ, ಹೊಸ ನಟರಂತೆ ಸಿನಿಮಾ ಶೂಟಿಂಗ್‌ಗೆ ಹೋಗುತ್ತೇನೆ. ವರ್ಕ್‌ಔಟ್ ಮಾಡುತ್ತೇನೆ, ತಿಂಡಿ ತಿನ್ನುತ್ತೇನೆ, ಮಕ್ಕಳು ಹಾಗೂ ಮನೆಯವರೊಂದಿಗೆ ಸ್ವಲ್ಪ ಕಾಲ ಕಳೆಯುತ್ತೇನೆ. ಬಳಿಕ ಎಂದಿನಂತೆ ಶೂಟಿಂಗ್‌ಗೆ ತೆರಳುತ್ತೇನೆ.
ಹೊರಜಗತ್ತಿನಲ್ಲಿ ನನ್ನನ್ನು ದೊಡ್ಡ ಸ್ಟಾರ್ ಎಂದು, ಸ್ಟಾರ್ ನಟನೆಂದು ಕರೆಯುತ್ತಾರೆ. ಆದರೆ, ವೈಯಕ್ತಿಕವಾಗಿ ನನಗೆ ಅದು ಯಾವುದೇ ವ್ಯತ್ಯಾಸ ಮಾಡುತ್ತದೆ ಎನಿಸುವುದಿಲ್ಲ. ಏಕೆಂದರೆ ನನ್ನ ಜೀವನವೂ ಕೂಡ ಎಲ್ಲರಂತೆ ಇರುತ್ತದೆ. ನಾನೂ ಬೆಳಿಗ್ಗೆ ಏಳಬೇಕು, ಕಷ್ಟಪಟ್ಟು ವರ್ಕ್ಔಟ್ ಮಾಡಬೇಕು, ತಿಂಡಿ ತಿಂದು ಶೂಟಿಂಗ್‌ಗೆ ಹೋಗಬೇಕು. ಮತ್ತೆ ಅದೇ ಕೆಲಸ ಮಾಡುತ್ತಲೇ ಇರಬೇಕು.
ಮತ್ತೆ ಒಂದಾಯ್ತು 'ದಸರಾ' ಜೋಡಿ, ಬಾಯಲ್ಲಿ ಸಿಗರೇಟು, ನಾನಿ ರಗಡ್ ಲುಕ್ ನೋಡಿದ್ರೆ ಶಾಕ್ ಆಗ್ತೀರಾ!
ಆದರೆ ನನ್ನನ್ನು ಸ್ಟಾರ್ ಎಂದು ಕರೆಯುತ್ತಾರೆ. ನಾನು ಎಲ್ಲರಂತೆ ಇರಲಾಗದು, ಎಲ್ಲರೂ ನನ್ನನ್ನು ನೋಡುತ್ತಲೇ ಇರುತ್ತಾರೆ, ನನ್ನ ಬೇಕು-ಬೇಡುಗಳು ಹೆಚ್ಚಿನ ವೇಳೆ ನನ್ನದಾಗಿರುವುದಿಲ್ಲ. ನನಗೆ ಪ್ರೈವಸಿ ಎಂಬುದು ತುಂಬಾ ಕಡಿಮೆ ಇರುತ್ತದೆ. ಜಗತ್ತು ನನ್ನನ್ನು ಸ್ಟಾರ್ ಎಂದು ಅಂದುಕೊಂಡರೂ ನಾನು ನನ್ನನ್ನು ಹಾಗೆ ತಿಳಿದಿಲ್ಲ. ನಾನೊಬ್ಬ ಕಾಮನ್ ಮ್ಯಾನ್' ಎಂದಿದ್ದಾರೆ ನಟ ಶಾರುಖ್ ಖಾನ್.
ವೆಂಕ್ಯಾ ಅಂಗಳಕ್ಕೆ ಬಂದಳು ಶಿಮ್ಲಾ ಸುಂದರಿ; ಸಾಗರ್ ಪುರಾಣಿಕ್ ಸಿನಿಮಾದಲ್ಲಿ ರೂಪಾಲಿ ಸೂದ್!
ಅಂದಹಾಗೆ, ನಟ ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟು ಸದ್ಯ ಬಾಲಿವುಡ್‌ನ ಕಿಂಗ್ ಖಾನ್ ಆಗಿದ್ದಾರೆ. ಡಂಕಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದರೂ ಹಾಕಿದ ಬಂಡವಾಳಕ್ಕೆ ಮೋಸವಾಗಿಲ್ಲ ಎನ್ನಲಾಗಿದೆ. ಆದರೆ, ಅದಕ್ಕಿಂತ ಮೊದಲು ಬಿಡುಗಡೆಯಾಗಿದ್ದ ಜವಾನ್ ಹಾಗು ಪಠಾಣ್ ಚಿತ್ರಗಳು ದಾಖಲೆ ಕಲೆಕ್ಷನ್ ಮಾಡಿ ಸೋಲಿನ ಸುಳಿಯಿಂದ ನಟ ಶಾರುಖ್ ಖಾನ್ ಅವರನ್ನು ಬಿಡಿಸಿ ಮೇಲಕ್ಕೆತ್ತಿವೆ. ಮುಂದಿನ ಚಿತ್ರಗಳು ಶಾರುಖ್ ಅವರ ಸ್ಟಾರ್‌ಗಿರಿಯನ್ನು ನಿರ್ಧರಿಸಲಿವೆ ಎಂದರೆ ತಪ್ಪಾಗಲಾರದು.
ರಮ್ಯಾ ಔಟ್ ಸುದ್ದಿ ಬೆನ್ನಲ್ಲೇ ಅಮಿತ್ ತ್ರಿವೇದಿ 'ಉತ್ತರಕಾಂಡ'ಕ್ಕೆ ಎಂಟ್ರಿ; ದುಪ್ಪಾಟ್ಟಾಯ್ತು ನಿರೀಕ್ಷೆ!