ರಾವಣಾಸುರನಾಗಿ ಯಶ್ ನೋಡಲು ದಿನಾಂಕ ಸನ್ನಿಹಿತ

By Sathish Kumar KH  |  First Published Nov 6, 2024, 2:04 PM IST

ಲವರ್ ಬಾಯ್, ಮಾಸ್ ಹಿರೋ ಆಗಿ ಕಾಣಿಸಿಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ಅನ್ನು ರಾವಣಾಸುರನಾಗಿ ನೋಡಲು ದಿನಾಂಕ ಸನ್ನಿಹಿತವಾಗಿದೆ. ಬಾಲಿವುಡ್‌ನ ಮೋಸ್ಟ್ ಸೆನ್ಸೇಷನಲ್ ಮೂವಿ ರಾಮಾಯಣ ಚಿತ್ರ ಬಿಡುಗಡೆಗೆ ದಿನಾಂಕ ಘೋಷನೆ ಮಾಡಲಾಗಿದೆ.


ಬೆಂಗಳೂರು (ಅ.06): ಕನ್ನಡ ಚಿತ್ರರಂಗದಲ್ಲಿ ಲವರ್ ಬಾಯ್ ಆಗಿ, ಮಾಸ್ ಹೀರೋ ಆಗಿ ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದ ರಾಕಿಂಗ್ ಸ್ಟಾರ್ ಯಶ್ ಅವರನ್ನು ರಾವಣಾಸುರನಾಗಿ ನೋಡುವುದಕ್ಕೆ ದಿನಾಂಕ ಸನ್ನಿಹಿತವಾಗಿದೆ. ಭಾರತೀಯ ಚಿತ್ರರಂಗವು ಕಾತರದಿಂದ ಎದುರು ನೋಡುತ್ತಿರುವ ಚಿತ್ರ 'ರಾಮಾಯಣ' ಆಗಿದೆ. ಈ ಸಿನಿಮಾ ನಿರ್ದೇಶಿಸುತ್ತಿರುವ ನಿತೇಶ್ ತಿವಾರಿ ಅವರು ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಭಾರತದಲ್ಲಿ ಅತ್ಯಂತ ಶ್ರೀಮಂತ ಚಿತ್ರರಂಗವಾದ ಬಾಲಿವುಡ್‌ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ಬರಲಿರುವ ರಾಮಾಯಣದ ಮೊದಲ ಭಾಗವು 2026 ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027 ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಸಿನಿಮಾ ಬಿಡುಗಡೆ ದಿನಾಂಕವನ್ನು ಹೊಸ ಪೋಸ್ಟರ್ ಮೂಲಕ ಹಂಚಿಕೊಂಡಿದ್ದಾರೆ. 

Latest Videos

undefined

ಇದನ್ನೂ ಓದಿ: ಯಶ್ ಟಾಕ್ಸಿಕ್ ಚಿತ್ರದ ಬಗ್ಗೆ ಕಿಂಗ್‌ಖಾನ್ ಶಾರುಖ್ ಮಾತು

ರಾಮಾಯಣ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಹಾಗೂ ಸಿಂಪಲ್ ನಟಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಲವರ್ ಬಾಯ್ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಇನ್ನು ತಾನು ರಾಮಾಯಣ ಸಿನಿಮಾದಲ್ಲಿ 10 ತಲೆಯ ರಾವಣನಾಗಿ ನಟಿಸುತ್ತಿರುವುದನ್ನು ಯಶ್ ಇತ್ತೀಚೆಗೆ ದೃಢಪಡಿಸಿದ್ದರು. ಒಬ್ಬ ನಟನಾಗಿ ರಾವಣನ ಪಾತ್ರವು ಅತ್ಯಂತ ರೋಮಾಂಚಕಾರಿ ಪಾತ್ರವಾಗಿದೆ. ಆ ಪಾತ್ರವನ್ನು ನಿರ್ವಹಿಸಲು ತುದಿಗಾಲಿನಲ್ಲಿ ನಿಂತಿದ್ದೇನೆ ಎಂದು ಯಶ್ ಹೇಳಿದ್ದರು. ಬೇರೆ ಯಾವುದೇ ಪಾತ್ರವನ್ನು ತನಗೆ ನೀಡಿದ್ದರೆ, ಬಹುಶಃ ಅದನ್ನು ತಿರಸ್ಕರಿಸುತ್ತಿದ್ದೆ ಎಂದು ಯಶ್ ಹೇಳಿದ್ದಾರೆ. 

More than a decade ago, I embarked on a noble quest to bring this epic that has ruled billions of hearts for over 5000 years to the big screen. pic.twitter.com/Hf7MblEf41

— Namit Malhotra (@malhotra_namit)

ಇನ್ನು ರಾಮಾಯಣ ಸಿನಿಮಾದಲ್ಲಿ ಸನ್ನಿ ಡಿಯೋಲ್ ಚಿತ್ರದಲ್ಲಿ ಹನುಮಂತನ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಮಾಯಣದ ಬಜೆಟ್ 700 ಕೋಟಿ ಎಂದು ವರದಿಯಾಗಿದೆ. ವಿಭೀಷಣನ ಪಾತ್ರಕ್ಕಾಗಿ ನಿರ್ಮಾಪಕರು ವಿಜಯ್ ಸೇತುಪತಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಮೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಕೆಲವು ಅಡಚಣೆಗಳು ಉಂಟಾಗಿದ್ದವು. ಆರಂಭದಲ್ಲಿ ಚಿತ್ರದ ನಿರ್ಮಾಪಕ ಮಧು ಮಂಟೇನಾ. ನಂತರ ಅವರು ಹಿಂದೆ ಸರಿದರು. ಆದರೆ, ಕಾರಣ ನೀಡದೇ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದರಿಂದ ಅವರಿಗೆ ನೋಟಿಸ್ ನೀಡಲಾಗಿತ್ತು. ಇದರಿಂದಾಗಿ ಚಿತ್ರೀಕರಣ  ಕೆಲ ದಿನಗಳ ಕಾಲ ಸ್ಥಗಿತಗೊಂಡಿತು ಎಂಬ ಮಾಹಿತಿ ಇದೆ.

ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಶ್ರೀಮುರಳಿ 'ಬಘೀರ' ಸಿನಿಮಾ; ವಾರ ಕಳೆಯುತ್ತಿದ್ದಂತೆ ಇಳಿಕೆ ಆಯ್ತಾ ಗಳಿಕೆ ಆಯ್ತಾ?

click me!