ಬಾಲಿವುಡ್ ನಟಿ ಸತ್ತಿದ್ದು ಹೇಗೆ? 21 ವರ್ಷಗಳ ನಂತರ ಬಹಿರಂಗವಾಯ್ತು ರಹಸ್ಯ

Published : Nov 06, 2024, 10:13 AM ISTUpdated : Nov 06, 2024, 11:32 AM IST
ಬಾಲಿವುಡ್ ನಟಿ ಸತ್ತಿದ್ದು ಹೇಗೆ? 21 ವರ್ಷಗಳ ನಂತರ ಬಹಿರಂಗವಾಯ್ತು ರಹಸ್ಯ

ಸಾರಾಂಶ

ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ ನಟಿಯರಲ್ಲಿ ಬಾಲಿವುಡ್ ನಟಿ ದಿವ್ಯಾ ಭಾರತಿ ಒಬ್ಬರು. ಅವರದ್ದು ಕೊಲೆ ಎಂಬ ಆರೋಪ ಆಗಾಗ ಕೇಳಿ ಬರ್ತಾನೆ ಇರುತ್ತೆ. ಆದ್ರೆ ಇದು ಎಷ್ಟು ಸತ್ಯ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.   

ಬಾಲಿವುಡ್ ನಟಿ ದಿವ್ಯಾ ಭಾರತಿ (Bollywood actress Divya Bharti), 1990 ರ ದಶಕದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕಡಿಮೆ ಸಮಯದಲ್ಲಿಯೇ ಬಾಲಿವುಡ್‌ನಲ್ಲಿ  ಛಾಪು ಮೂಡಿಸಿದ ನಟಿ. ಈಗ್ಲೂ ದಿವ್ಯಾ ಭಾರತಿ ಸ್ಥಾನವನ್ನು ಬಾಲಿವುಡ್ ನ ಯಾವುದೇ ನಟಿ ತುಂಬಲು ಸಾಧ್ಯವಾಗ್ಲಿಲ್ಲ.   1993 ರಲ್ಲಿ  ದಿವ್ಯಾ ಭಾರತಿ ತಮ್ಮ 19ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ರು. ಇಡೀ ದೇಶಕ್ಕೆ ಇದು ದೊಡ್ಡ ಆಘಾತವಾಗಿತ್ತು. ಏಪ್ರಿಲ್ 5 ರಂದು ಅವರು ಮುಂಬೈನ ತಮ್ಮ ಅಪಾರ್ಟ್ಮೆಂಟ್ (apartment) ನ ಐದನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಕೊನೆಯುಸಿರೆಳೆದಿದ್ದರು. ಕೆಲವರು ಇದು ಆತ್ಮಹತ್ಯೆ ಅಂದ್ರೆ ಮತ್ತೆ ಕೆಲವರು ಇದು ಹತ್ಯೆ ಎಂದಿದ್ದರು. ದಿವ್ಯಾ ಭಾರತಿ ಪತಿ ಸಾಜಿದ್ ನಾಡಿಯಾಡ್ವಾಲಾ (Sajid Nadiadwala), ದಿವ್ಯಾ ಸಾವಿಗೆ ಕಾರಣ ಎನ್ನುವ ಆರೋಪವನ್ನು ಹೊತ್ತಿದ್ದರು. ಆ ದಿನ ಏನಾಗಿತ್ತು ಎಂಬುದು ಈಗ್ಲೂ ಸರಿಯಾಗಿ ತಿಳಿದಿಲ್ಲ. ದಿವ್ಯಾ ಭಾರತಿ ನಿಧನರಾಗಿ 21 ವರ್ಷಗಳ ನಂತ್ರ ಆ ದಿನದ ಸತ್ಯ ಹೊರಬಿದ್ದಿದೆ.

ಬಾಲಿವುಡ್ ನಟಿ ಗುಡ್ಡಿ ಮಾರುತಿ (Guddi Maruti), ಸಾಜಿದ್ ನಾಡಿಯಾಡ್ವಾಲಾ,  ಮೇಲೆ ಬಂದಿದ್ದ ಆರೋಪವನ್ನು ತಳ್ಳಿ ಹಾಕಿದ್ದಾರೆ. ದಿವ್ಯಾ ಭಾರತಿ ಸ್ವಭಾವ ಹಾಗೂ ಆ ದಿನ ಏನಾಗಿತ್ತು ಎಂಬುದನ್ನು ಹೇಳಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಜೊತೆ ಮಾತನಾಡಿದ ಗುಡ್ಡಿ ಮಾರುತಿ, ದಿವ್ಯಾ ಭಾರತಿ ಒಳ್ಳೆ ಹುಡುಗಿ. ಆದ್ರೆ ಸ್ವಲ್ಪ ಗೊಂದಲದ ಹುಡುಗಿಯಾಗಿದ್ದರು. ಇದು ತನ್ನ ಕೊನೆ ದಿನ ಎನ್ನುವಂತೆ ದಿವ್ಯಾ ಜೀವನ ನಡೆಸುತ್ತಿದ್ದರು ಎಂದು ಗುಡ್ಡಿ ಮಾರುತಿ ಹೇಳಿದ್ದಾರೆ. 

ಈ ಬಿಗ್ ಹಿಟ್ ಸಿನಿಮಾ ಕತೆ ಬರೆದಿದ್ದು ಮೆಗಾಸ್ಟಾರ್ ಚಿರಂಜೀವಿಗೆ.. ಆದರೆ ಮಾಡಿದ್ದು ಬೇರೊಬ್ಬ ಸ್ಟಾರ್ ನಟನಿಗೆ!

ಶೋಲಾ ಔರ್ ಶಬನಮ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸಮಯ. ಏಪ್ರಿಲ್ 5ರಂದು ದಿವ್ಯಾ ಸಾವನ್ನಪ್ಪಿದ್ರು. ಏಪ್ರಿಲ್ 4ರಂದು ಗುಡ್ಡಿ, ಸಾಜಿದ್, ಗೋವಿಂದ ಸೇರಿದಂತೆ ಅನೇಕರು ಗುಡ್ಡಿ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆ ಟೈಂನಲ್ಲಿ ದಿವ್ಯಾ ಸ್ವಲ್ಪ ಬೇಸರದಲ್ಲಿದ್ದರು. ಶೂಟಿಂಗ್ ಔಟ್ ಡೋರ್ ಇದ್ದ ಕಾರಣ, ದಿವ್ಯಾಗೆ ಹೋಗಲು ಮನಸ್ಸಿರಲಿಲ್ಲ ಎಂದು ಗುಡ್ಡಿ ಹೇಳಿದ್ದಾರೆ. ಅವರ ಬಾಲ್ಯ ಹೇಗಿತ್ತು ಎಂಬುದು ನನಗೆ ತಿಳಿದಿಲ್ಲ. ಆದ್ರೆ ದಿವ್ಯಾ ತುಂಬಾ ಒಳ್ಳೆಯ ಹುಡುಗಿ. ಆದ್ರೆ ವಿಚಿತ್ರ ಸಾಹಸಗಳನ್ನು ಮಾಡ್ತಿದ್ದರು ಎಂದು ಗುಡ್ಡಿ, ಒಂದು ದಿನ ನಾನು ಐಸ್ ಕ್ರೀಂ ತಿನ್ನಲು ಅವರ ಮನೆ ಕೆಳಗಿರುವ ಶಾಪ್ ಗೆ ಹೋಗಿದ್ದೆ. ಈ ವೇಳೆ ನನ್ನನ್ನು ಯಾರೋ ಕೂಗುತ್ತಿರುವುದು ಕೇಳಿಸಿತು. ಐದನೇ ಮಹಡಿ ಟೆರೆಸ್ ತುದಿಯಲ್ಲಿ ಕಾಲು ಕೆಳಗೆ ಹಾಕಿಕೊಂಡು ಕುಳಿತಿದ್ದರು ದಿವ್ಯಾ. ಇದು ಅಪಾಯಕಾರಿ, ಒಳಗೆ ಹೋಗು ಅಂತ ಗುಡ್ಡಿ ಸಲಹೆ ನೀಡಿದ್ದರು. ನನಗೆ ಭಯವಿಲ್ಲ. ಏನೂ ಆಗಲ್ಲ ಎಂದಿದ್ದರು ದಿವ್ಯಾ ಎನ್ನುತ್ತಾರೆ ಗುಡ್ಡಿ.

ಗ್ರೇ ಡೈವೋರ್ಸ್‌ಗೆ ಮುಂದಾಗಲಿದೆಯಾ ಅಭಿ- ಐಶ್ ಜೋಡಿ?

ಏಪ್ರಿಲ್ 6ರಂದು ನನಗೆ ಶಾಕಿಂಗ್ ಸುದ್ದಿ ಸಿಕ್ಕಿತು. ದಿವ್ಯಾ ಸಾವಿನಲ್ಲಿ  ಸಾಜಿದ್ ನಾಡಿಯಾಡ್ವಾಲಾ  ಕೈವಾಡವಿಲ್ಲ. ಸಾಜಿದ್ ನಾಡಿಯಾಡ್ವಾಲಾ ಕಾರು ಬರ್ತಿದೆಯಾ ಎಂಬುದನ್ನು ನೋಡಲು ದಿವ್ಯಾ ಮೇಲಿನಿಂದ ಕೆಳಗೆ ಬಗ್ಗಿದ್ದರು. ಈ ವೇಳೆ ದಿವ್ಯಾ ಕೆಳಗೆ ಬಿದ್ದು, ದುರಂತ ನಡೆದಿದೆ. ದಿವ್ಯಾ ಕೆಳಗೆ ಬೀಳೋದನ್ನು ಡಿಸೈನರ್ ನೀತಾ ಲುಲ್ಲಾ ಕೂಡ ನೋಡಿದ್ದಾರೆ. ಆದ್ರೆ ಆ ಸಮಯದಲ್ಲಿ ಸಾಜಿದ್ ಅಲ್ಲಿ ಇರಲಿಲ್ಲ ಎಂದು ಗುಡ್ಡಿ ಹೇಳಿದ್ದಾರೆ.  ದಿವ್ಯಾ ಭಾರತಿ ಮೇ. 10, 1992ರಲ್ಲಿ ಸಾಜಿದ್ ಅವರನ್ನು ಮದುವೆ ಆಗಿದ್ದರು. ದಿವ್ಯಾ ತಾಯಿ ಆರೋಗ್ಯ ಸರಿಯಾಗಿರಲಿಲ್ಲ. ದಿವ್ಯಾ ನಿಧನದ ನಂತ್ರ ಅವರ ಮನೆಗೆ ಹೋದಾಗ, ಬಾಯಿಗೆ ರಕ್ತ ಮೆತ್ತಿಕೊಂಡ ಬೆಕ್ಕೊಂದು ಅಲ್ಲಿಗೆ ಬಂದಿತ್ತು. ಇದು ಭಯಹುಟ್ಟಿಸುವಂತಿತ್ತು ಎಂದು ಗುಡ್ಡಿ ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?