'ಮಣ್ಣು ಮುಟ್ಟುವುದೆಂದರೆ ಇಷ್ಟವಿಲ್ಲ'; ರಾಜಮೌಳಿ ಚಾಲೆಂಜ್‌ಗೆ ರಾಮ್‌ ಗೋಪಾಲ್‌ ವರ್ಮಾ ಕಿರಿಕ್!

Suvarna News   | Asianet News
Published : Nov 12, 2020, 05:07 PM IST
'ಮಣ್ಣು ಮುಟ್ಟುವುದೆಂದರೆ ಇಷ್ಟವಿಲ್ಲ'; ರಾಜಮೌಳಿ ಚಾಲೆಂಜ್‌ಗೆ ರಾಮ್‌ ಗೋಪಾಲ್‌ ವರ್ಮಾ ಕಿರಿಕ್!

ಸಾರಾಂಶ

ನಿರ್ದೇಶಕ ರಾಜಮೌಳಿ ಚಾಲೆಂಜ್‌ವೊಂದನ್ನು ಸ್ವೀಕರಿಸಿ, ಟ್ಟೀಟ್ ಮಾಡಿದ್ದಾರೆ. ಸ್ಟ್ರೈಟ್ ಫಾರ್ವರ್ಡ್‌  ನಿರ್ದೇಶಕ ಆರ್‌ಜಿವಿ ಕೊಟ್ಟ ಉತ್ತರ ದೊಡ್ಡ ಮಟ್ಟದಲ್ಲಿ ಕಾಂಟ್ರೋವರ್ಸಿ ಕ್ರಿಯೇಟ್ ಮಾಡುತ್ತಿದೆ...

ಸ್ಟಾರ್ ಡೈರೆಕ್ಟರ್ ರಾಜಮೌಳಿ ಏನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇಡೀ ತೆಲುಗು ಚಿತ್ರರಂಗವೇ ಪಾಲ್ಗೊಳ್ಳುತ್ತಿರುವ ಗ್ರೀನ್ ಇಂಡಿಯಾ ಚಾಲೆಂಜ್‌ ಅಡಿಯಲ್ಲಿ ರಾಜಮೌಳಿ ಶೇರ್ ಮಾಡಿದ ಪೋಸ್ಟ್‌ಗೆ ಆರ್‌ಜಿವಿ ಬರೆದ ಕಾಮೆಂಟ್ ವೈರಲ್ ಆಗುತ್ತಿದೆ.

'ಅರ್ನಾಬ್‌- ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌'; ಆರ್‌ಜಿವಿ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ! 

ರಾಜಮೌಳಿ ಪೋಸ್ಟ್‌:
'ನಾನು ಹಾಗೂ ನನ್ನ ತಂಡ  ರಾಮ್ ಚರಣ್ ಹಾಕಿದ ಸವಾಲನ್ನು ಇಂದು ಸ್ವೀಕರಿಸಿದ್ದೀವಿ. #GreenIndiaChallenge. ಮುಂದಕ್ಕೆ ನಾನು ಆರ್‌ಜಿವಿ, ವಿನಾಯಕ ಗಾರು, ಪೂರಿ ಜಗನ್ನಾಥ್ ಅವರನ್ನು ಗಿಡ ನೆಡಲು ನಾಮಿನೇಟ್ ಮಾಡುತ್ತೇನೆ,' ಎಂದು ರಾಜಮೌಳಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡು, ಆರ್‌ಜಿವಿಗೆ ಚಾಲೆಂಜ್ ಮಾಡಿದ್ದರು.

 

ಆರ್‌ಜಿವಿ ಟಾಂಗ್:
'ನನಗೆ ಸವಾಲ್ ಹಾಕಿರುವ ರಾಜಮೌಳಿ ಸರ್‌. ನಾನು ಈ ಗ್ರೀನ್‌ ಚಾಲೆಂಜ್‌ನಲ್ಲಿ ಭಾಗಿಯಾಗುವುದಿಲ್ಲ. ನಾನು ಮಣ್ಣು ಮುಟ್ಟಲು ಇಷ್ಟ ಪಡುವುದಿಲ್ಲ.  ನಮ್ಮ ಗಿಡ-ಮರಗಳು ಒಳ್ಳೆ ವ್ಯಕ್ತಿಯಿಂದ ಮುಟ್ಟಿಸಿಕೊಳ್ಳಲು ಬಯಸುತ್ತದೆ, ನನ್ನಂಥ ಸೆಲ್ಫಿಶ್‌ನಿಂದ ಅಲ್ಲ. ನಿಮಗೆ ಹಾಗೂ ನೀವು ನೆಟ್ಟ ಗಿಡಗಳಿಗೆ ಒಳ್ಳೆಯದಾಗಲಿ,' ಎಂದು ಬರೆದಿದ್ದಾರೆ.

ಸಿನಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ 'RRR'; ಇತಿಹಾಸ ಸೃಷ್ಟಿಸ್ತಾರಾ ರಾಜಮೌಳಿ?

ಆರ್‌ಜಿವಿ ಮಾಡಿರುವ ಟ್ಟೀಟ್‌ಗೆ ರಾಜಮೌಳಿಯಿಂದದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ ನೆಟ್ಟಿಗರು ಮಾತ್ರ ಟಾಂಗ್‌ ಕೊಡುತ್ತಿದ್ದಾರೆ. ಅರೇ ಈ ಭೂಮಿಯಲ್ಲಿ ಬೆಳೆದ ನಿರ್ದೇಶಕರು, ನಮ್ಮ ಭೂಮಿ ಮಣ್ಣನ್ನು ಮಟ್ಟಲ್ಲ ಎನ್ನುತ್ತಾರೆ. ಸಿನಿಮಾದಲ್ಲಿ ಮಾತ್ರ ರೈತರ ಬಗ್ಗೆ ಎಲ್ಲಾ ಬೋಧನೆ ಮಾಡುವುದಾ, ಎಂದು ಕಾಲು ಎಳೆದಿದ್ದಾರೆ. 

ಮನುಷ್ಯ  ಒಂದಲ್ಲ ಒಂದು ದಿನ ಭೂಮಿಯಲ್ಲಿ ಮಣ್ಣಾಗಲೇ ಬೇಕಲ್ಲವೇ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Record Breaking Collection.. ಬಾಲಯ್ಯರ 'ಅಖಂಡ 2' ಚಿತ್ರದ ಮೊದಲ ದಿನದ ಗಳಿಕೆ ಇಷ್ಟೊಂದು ಕೋಟಿನಾ?
ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳ ಬಗ್ಗೆ ಜೋರಾದ ಚರ್ಚೆ.. 'ಯಾರದೂ ತಪ್ಪಲ್ಲ ಯಾರದೂ ಸರಿಯಲ್ಲ' ಅಂತಿರೋದ್ಯಾಕೆ?