ಸಂಕಷ್ಟದಲ್ಲಿದ್ದ ನಟಿ ಮಲ್ಲಿಕಾ ಶರಾವತ್‌ಗೆ ಕಮಲಾ ಹ್ಯಾರೀಸ್ ಸಹಾಯ!

Suvarna News   | Asianet News
Published : Nov 10, 2020, 04:23 PM ISTUpdated : Nov 10, 2020, 04:59 PM IST
ಸಂಕಷ್ಟದಲ್ಲಿದ್ದ ನಟಿ ಮಲ್ಲಿಕಾ ಶರಾವತ್‌ಗೆ ಕಮಲಾ ಹ್ಯಾರೀಸ್ ಸಹಾಯ!

ಸಾರಾಂಶ

ಸಿನಿಮಾ ಚಿತ್ರೀಕರಣದ ವೇಳೆ  ಅಮೆರಿಕದಲ್ಲಿದ್ದ ಮಲ್ಲಿಕಾ ಶರಾವತ್‌ಗೆ, ನಿಯೋಜಿತ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ನೀಡಿದ ಬೆಂಬಲದ ಬಗ್ಗೆ ಹಂಚಿಕೊಂಡಿದ್ದಾರೆ.

ಹಾಲಿವುಡ್‌ಮ 'ಪಾಲಿಟಿಕ್ಸ್ ಆಫ್‌ ಲವ್' ಚಿತ್ರದಲ್ಲಿ ನಟಿ ಮಲ್ಲಿಕಾ ಶೆರಾವತ್  ಇದೀಗ ಅಮೆರಿಕದ ನಿಯೋಜಿತ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2011ರಲ್ಲಿ ನಡೆದ ಘಟನೆ ಬಗ್ಗೆ ಇಂದು ಎಲ್ಲರೊಂದಿಗೂ ಹಂಚಿ ಕೊಂಡಿದ್ದಾರೆ. ಕಮಲಾ ಅವರ ಅದ್ಭುತವಾದ ಸಲಹೆ ಮಾತ್ರವಲ್ಲದೇ,  ಹಿತಕರವಾಗಿ ಭಾಸವಾಗುವಂತೆ ನೋಡಿಕೊಂಡ ಬಗ್ಗೆ ಸ್ಮರಿಸಿಕೊಂಡಿದ್ದಾರೆ. 

ಬೈಡನ್‌ಗೂ ಉಂಟು ಭಾರತದ ನಂಟು, ಮಹಿಳೆ ಸೇವಿಂಗ್ಸ್ ಟ್ರಿಕ್ಕಿಗೆ ನೆಟ್ಟಿಗರು ಫಿದಾ!

ಅಮೆರಿಕದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಅದರಲ್ಲೂ, 'ಕಪ್ಪು ವರ್ಣೀಯ ನಾಯಕಿ' ಆಗಿರುವ ಕಮಲಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಮತದಾರರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಹೇಳಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 'ಈ ಅಮೆರಿಕ ಉಪಾಧ್ಯಕ್ಷೆ ಕಚೇರಿಗೆ ನಾನು ಮೊದಲ ಮಹಿಳೆಯಾದರೂ, ಕೊನೆಯವಳಾಗುವುದಿಲ್ಲ,' ಎಂದಿದ್ದಾರೆ. ಆ ಮೂಲಕ ಹೆಣ್ಣು ಮಕ್ಕಳಲ್ಲಿ ವಿಶೇಷ ಭರವಸೆ ಮೂಡಿಸಿದ್ದಾರೆ. 

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ನಟಿ ಮಲ್ಲಿಕಾ, ಕಮಲಾ ಜೊತೆ ಕಳೆದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ. 'ಪಾಲಿಟಿಕ್ಸ್ ಆಫ್ ಲವ್ ಸಿನಿಮಾ ಚಿತ್ರೀಕರಣದ ವೇಳೆ ಕಮಲಾ ಹ್ಯಾರೀಸ್‌ ನನಗೆ ತುಂಬಾ ಸಹಾಯ ಮಾಡಿದ್ದಾರೆ. ನಾನು ಡೆಮೋಕ್ರಾಟಿಕ್ ಪಕ್ಷದ ವಾಲಂಟೀಯರ್‌, ಅರ್ಧ ಭಾರತೀಯ. ಇನ್ನರ್ಧ ಆಫ್ರಿಕನ್- ಅಮೆರಿಕನ್ ಆದ ಕಮಲಾ ಪಾತ್ರದಲ್ಲಿ ಅಭಿನಯಿಸಿದೆ. ಅವರು ನೀಡಿದ ಸಲಹೆ ಈಗಲೂ ಜ್ಞಾಪಕವಿದೆ. ಪಾತ್ರವನ್ನು ಬ್ಯಾಲೆನ್ಸ್ ಮಾಡಬೇಕು. ಯಾಕೆಂದರೆ ಸಿನಿಮಾ ಎರಡೂ ಭಾಗಗಳನ್ನೂ ತೋರಿಸುತ್ತದೆ. ಒಂದು ಡೆಮೋಕ್ರಾಟ್ಸ್‌ ಮತ್ತೊಂದು ರಿಪಬ್ಲಿಕನ್,' ಎಂದು ಹೇಳಿದ್ದರಂತೆ.

ಈ ಆಫೀಸ್‌ನಲ್ಲಿ ನಾನು ಮೊದಲ ಮಹಿಳೆಯಾಗಿರಬಹುದು, ಕೊನೆಯವಳಲ್ಲ: ಕಮಲಾ ಗೆಲುವಿನ ಮಾತುಗಳು 

ಹೊರಗಿನವಳಂತೆ ಭಾಸವಾಗಲಿಲ್ಲ:
'ಲಾಸ್‌ ಏಂಜಲೀಸ್‌ನಲ್ಲಿ ನಾನು ನೀರಿನಿಂದ ಹೊರಬಂದ ಮೀನಿನಂತಾಗಿದ್ದೆ. ಬೇರೆ ದೇಶ, ಅದರ ಸಂಪ್ರದಾಯಕ್ಕೆ ಹೊಂದಿಕೊಳ್ಳುವುದು ಕಷ್ಟವಾಯ್ತು. ಆದರೆ ಕಮಲಾ ಅವರು ನನ್ನ ಪರ ನಿಂತರು. 'ನಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬಂದರೆ ಮಾತ್ರ, ನಾವು ಅದ್ಭುತವಾದ ವ್ಯಕ್ತಿತ್ವ ಕಟ್ಟಿಕೊಳ್ಳಲು ಸಾಧ್ಯ, ಆಗ ಮಾತ್ರ ನಾವು ಸ್ಟ್ರಾಂಗ್ ವ್ಯಕ್ತಿ ಆಗುತ್ತೇವೆ,' ಎಂದು ಕಮಲಾ ನನಗೆ ಹೇಳಿದ್ದರು,' ಎಂದು ಮಲ್ಲಿಕಾ ನೆನಪಿಸಿಕೊಂಡಿದ್ದಾರೆ. 

ಮಲ್ಲಿಕಾ ಶೆರಾವತ್‌ಗೂ ಬರಾಕ್‌ ಒಬಾಮಾಗೂ ಏನ್‌ ಸಂಬಂಧ? 

ಕಮಲಾ ಉಪಾಧ್ಯಕ್ಷರಾದ ವಿಚಾರ ತಿಳಿದು ಮಲ್ಲಿಕಾ ಸೋಷಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದರು. 'ಅವರನ್ನು ನೇರವಾಗಿ ಭೇಟಿ ಮಾಡಿ, ಅವರ ವ್ಯಕ್ತಿತ್ವಕ್ಕೆ ನಾನು ಫುಲ್ ಬೋಲ್ಡ್ ಆಗಿದ್ದೆ,' ಎಂದಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!