
ಶೀಘ್ರವೇ ಬಾಲಿವುಡ್‌ಗೆ ಕಮ್ ಮಾಡುವುದಾಗಿ ಹೇಳುತ್ತಿದ್ದ ನಟಿ ತನುಶ್ರೀ ದತ್ತಾ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೇಟ್‌ಲಾಸ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿದ 36 ವರ್ಷದ ನಟಿ ಹೇಗೆ ಬಾಡಿ ಶೇಮಿಂಗ್ ಎದುರಿಸಿದರು ಎಂಬುದನ್ನೂ ಹೇಳಿಕೊಂಡಿದ್ದಾರೆ.
ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ; ಮತ್ತೆ ಕೋರ್ಟ್ ಮೆಟ್ಟಿಲೇರಿದ ತನುಶ್ರೀ ದತ್ತಾ
'ಎರಡು ಮೂರು ವರ್ಷಗಳಿಂದ ನಾನು ದಪ್ಪ ದೇಹವನ್ನು ಮೆಂಟೇನ್ ಮಾಡುತ್ತಿದ್ದೆ. ಆದರೆ ಎಲ್ಲರೂ ಅದನ್ನೇ ದೊಡ್ಡ ವಿಚಾರ ಮಾಡಿ, ಬಾಡಿ ಶೇಮಿಂಗ್ ಮಾಡುತ್ತಿದ್ದರು. ಕೆಲವೊಮ್ಮೆ ಎಷ್ಟು ವಿಚಿತ್ರ ಎನಿಸುತ್ತಿತು ಅಂದ್ರೆ ದಪ್ಪ ಅಂತ ಮುಖದ ಮೇಲೆ ಹೊಡೆದಂತೆಯೇ ಹೇಳಿ ಬಿಡುತ್ತಿದ್ದರು. ಹೇಳಿದ್ದು ಯಾರೇ ಇರಬಹುದು, ಆದರೆ ಅದರಿಂದ ನೋವಾಗುತ್ತಿತು. ಅವರೆಲ್ಲಾ ನನ್ನ ವಿಶ್ವಾಸ ಕುಂದಿಸುತ್ತಿದ್ದರು, ' ಎಂದು ತನುಶ್ರೀ ಮಾತನಾಡಿದ್ದಾರೆ.
ಸುಮಾರು 5 ತಿಂಗಳ ಅವಧಿಯಲ್ಲಿ ತನುಶ್ರೀ ಸುಮಾರು 15-17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಸ್ಟ್ರೀಕ್ಟ್ ಆಗಿ ಪಾಲಿಸಿರುವ ಡಯಟ್ ಹೇಗಿತ್ತು ಗೊತ್ತಾ?
ತನುಶ್ರೀ ಪೋಸ್ಟ್:
'ನಾನು 15 ಕೆಜಿ ತೂಕ ಇಳಿಸುವುದಕ್ಕೆ ಮುಖ್ಯ ಕಾರಣವೇ Intermittent fasting. ಸೋಷಿಯಲ್ ಮೀಡಿಯಾದಲ್ಲಿ ಈಗ ಜನರು ನಾನು ಹೇಗೆ ಇಷ್ಟೊಂದು ಸಣ್ಣ ಆದೆ ಅಂತ ಚರ್ಚೆ ಶುರು ಮಾಡಿದ್ದಾರೆ. ಒಂದು ದಿನದಲ್ಲಿ ರೋಮ್ ರಾಜ್ಯ ಕಟ್ಟಲು ಆಗಲಿಲ್ಲ, ಅದರಲ್ಲಿ ವರ್ಷಗಳ ಶ್ರಮವಿತ್ತು. ಹಾಗೆಯೇ ನನ್ನ ದೇಹವೂ. ಒಳ್ಳೆ ಆಹಾರ, ವ್ಯಾಯಾಮ ಹಾಗೂ ಅತ್ಯತ್ತಮವಾದ ಜೀವನಶೈಲಿ ಎಲ್ಲವೂ ಒಂದಾಗಿದ್ದೇ ಇದಕ್ಕೆ ಕಾರಣವಾಯ್ತು. ಸೋಮವಾರ ಉಪವಾಸ ಮಾಡಿದರೆ ನೆಕ್ಸ್ಟ್ ದಿನ ಆರ್ಗ್ಯಾನಿಕ್ ಆಹಾರ, ಮತ್ತೆ ಆಯುರ್ವೇದ ಹೀಗೇ ಒಂದೊಂದು ದಿನವೂ ಒಂದೊಂದು ಮಾಡುತ್ತಿದ್ದೆ. ನಾನು ಕೆಲವೊಮ್ಮೆ ಮೊಟ್ಟೆ. ಮಾಂಸ ಹಾಗೂ ಹಾಲಿನ ಪದಾರ್ಥಗಳನ್ನೂ ತಿನ್ನುತ್ತೇನೆ. ನಾನು ಕುಡಿಯುವುದು, ಸಿಗರೇಟ್ ಸೇದುವುದು ಯಾವುದನ್ನೂ ಮಾಡುವುದಿಲ್ಲ ಇವೆಲ್ಲಾ ನನ್ನ ದೇಹವನ್ನು ಹಾಳು ಮಾಡುತ್ತದೆ. ನಾನು ಹೆಚ್ಚಾಗಿ ನೀರು ಕುಡಿಯುತ್ತೇನೆ. ಕೆಲವೊಮ್ಮೆ ಮನಸ್ಸಿಲ್ಲದ ದಿನಗಳಲ್ಲಿ ನಾನು ಹೋಗಿ ಬೇಕಾದ್ದನ್ನು ತಿಂದಿದ್ದೀನಿ,' ಎಂದು ಬರೆದುಕೊಂಡಿದ್ದಾರೆ.
ತನುಶ್ರೀ ದತ್ತಾ ಮನೆಗೆ ನುಗ್ಗಲೆತ್ನಿಸಿದ ಆ ಇಬ್ಬರು ಯಾರು?
ಡಯಟ್ ಹೇಗಿತ್ತು:
'ಬೆಳಗ್ಗೆ ಬಿಸಿ ನೀರು ಹಾಗೂ ನಿಂಬೆ ರಸ ಮಿಕ್ಸ್ ಮಾಡಿ ಕುಡಿದರೆ, ರಾತ್ರಿ ಗ್ರೀನ್ ಟೀ ಕುಡಿದೇ ಮಲಗುತ್ತಿದ್ದೆ. ರಾತ್ರಿ 8-9 ಗಂಟೆ ಒಳಗೆ ಊಟ ಮಾಡಿ ಮುಗಿಸುತ್ತಿದೆ. 30-40 ನಿಮಿಷ ವಾಕಿಂಗ್ ಹಾಗೂ 30-40 ವೈಯಟ್ ಟ್ರೇನಿಂಗ್ ಪಡೆಯುತ್ತಿದ್ದೆ. ದಿನವಿಡೀ ಎನರ್ಜಿಟಿಕ್ ಆಗಿರಲಿ ಅಂತ ಹಣ್ಣಿನ ಜ್ಯೂಸ್ ಕುಡಿಯುತ್ತೇನೆ. ದಿನಕ್ಕೆ ಮೂರು ಸಲ ಧ್ಯಾನ ಮಾಡುತ್ತೇನೆ. ದೈವ ಶಕ್ತಿ ನಮ್ಮನ್ನು ಪಾಸಿಟಿವ್ ಆಗಿಡಲು ಸಹಾಯ ಮಾಡುತ್ತದೆ,' ಎನ್ನುವ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.