ಐ ಲವ್ ಯೂ ಚಿತ್ರಕ್ಕಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಒಟ್ಟು 14 ತಾಸು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಇಟ್ಟುಕೊಂಡ ಬಗ್ಗೆ ವಿವರಿಸಿದ್ದಾರೆ. ನಟಿ ಹೇಳಿದ್ದೇನು?
ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preeth Singh) ಎಷ್ಟೇ ಸಿನಿಮಾ ಮಾಡಿದರೂ ಯಾಕೋ ಸಕ್ಸಸ್ ಕಾಣುತ್ತಿಲ್ಲ. ಕೆರಟಂ ಸಿನಿಮಾ ಮೂಲಕ ರಾಕುಲ್ ಪ್ರೀತ್ ಸಿಂಗ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಅಂದಿನಿಂದ ಅನೇಕ ಸ್ಟಾರ್ ಹೀರೋಗಳ (Star hero) ಜೊತೆ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ರಾಕುಲ್ ಅಟ್ಯಾಕ್, ರನ್‌ವೇ 34, ಕಟ್‌ಪುಟ್ಲಿ, ಡಾಕ್ಟರ್ ಜೀ, ಥ್ಯಾಂಕ್ ಗಾಡ್ ಸೇರಿದಂತೆ ಅನೇಕ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ಸದ್ಯ ಅವರು ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿದ್ದು, ಅದರ ಫೋಟೋ ಶೇರ್ ಮಾಡಿಕೊಂಡಿದ್ದರು. ಬಿಕಿನಿ ಡ್ರೆಸ್ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದಿಯುವಂಥ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಚಿತ್ರಗಳು ಹಿಟ್ ಆಗದಿದ್ದರೂ ಇಂಥ ಬಟ್ಟೆ ತೊಟ್ಟು ಫೇಮಸ್ ಆಗಬಯಸಿದ್ದಾರೆ ನಟಿ ರಾಕುಲ್. ಸಮುದ್ರದ ಅಲೆಗಳ ನಡುವೆ ನಿಂತು ನಟಿ ಫೋಟೋಗೆ ಪೋಸ್ ಕೊಟ್ಟ ಚಿತ್ರಕ್ಕೆ ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದವು. ಇವುಗಳ ನಡುವೆಯೇ, ನಟಿ ರಾಕುಲ್ ಸೈಲೆಂಟಾಗಿ ಮದುವೆಗೆ ಸೈ ಎಂದಿರುವ ಬಗ್ಗೆ ಬಿ ಟೌನ್ನಲ್ಲಿ ಬಹಳ ಸುದ್ದಿಯಾಗಿತ್ತು. ನಿರ್ಮಾಪಕ ಜಾಕಿ ಭಗ್ನಾನಿ (Jockey Bhagnani) ಜತೆ ರಾಕುಲ್ ಡೇಟಿಂಗ್ ನಡೆಸುತ್ತಿದ್ದು, ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. ಶೀಘ್ರವೇ ಮದ್ವೆ ಎಂದಿದ್ದರೂ ಇದುವರೆಗೆ ಈ ಜೋಡಿ ತುಟಿಕ್ ಪಿಟಿಕ್ ಅನ್ನಲಿಲ್ಲ.
ಆದರೆ ಇದೀಗ ರಾಕುಲ್ ತಮ್ಮ ಅದೃಷ್ಟವನ್ನು ಐ ಲವ್ ಯೂನಲ್ಲಿ (I Love You) ನೋಡಬಯಸಿದ್ದಾರೆ. ತಮ್ಮ ಮುಂಬರುವ ಚಿತ್ರ ಐ ಲವ್ ಯೂಗಾಗಿ ಇತ್ತೀಚಿನ ದಿನಗಳಲ್ಲಿ ಅವರು ಸುದ್ದಿಯಲ್ಲಿದ್ದಾರೆ. ಅದೇನೆಂದರೆ, ಐ ಲವ್ ಯೂ ಚಿತ್ರದ ದೃಶ್ಯವೊಂದಕ್ಕಾಗಿ ರಾಕುಲ್ 2 ನಿಮಿಷ 30 ಸೆಕೆಂಡುಗಳ ಕಾಲ ನೀರಿನ ಅಡಿಯಲ್ಲಿ ಇದ್ದು ಸುದ್ದಿ ಮಾಡಿದ್ದಾರೆ. ಒಟ್ಟು ಶೂಟಿಂಗ್ನಲ್ಲಿ 14 ತಾಸು ಹೀಗೆ ಉಸಿರು ಕಟ್ಟು ಹಿಡಿದುಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ನಸುಕಿನ 4 ಗಂಟೆವರೆಗೆ ಇದರ ಚಿತ್ರೀಕರಣ ನಡೆದಿದೆ. ಇಷ್ಟು ಹೊತ್ತು ನೀರಿನ ಅಡಿಯಲ್ಲಿ ಇದ್ದ ಮೇಲೆ ಪ್ರೇಕ್ಷಕರ ಮನಸ್ಸಿಗೆ ಮುದನೀಡುವ ರೀತಿಯಲ್ಲಿ ಆ ದೃಶ್ಯವನ್ನು ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ನೀರೆಂದರೆ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಏನೂ ಹೊಸ ವಿಷಯವಲ್ಲ. ಈಕೆಗೆ ಅವರು ಬಿಕಿನಿಯನ್ನು ಧರಿಸಿ ಮೈನಸ್ 15 ಡಿಗ್ರಿಯಲ್ಲಿ ಐಸ್-ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದ್ದರು. ಇದು ಕ್ರೈಯೊಥೆರಪಿ (Cryotherapy) ಎಂದಿದ್ದರು. ಕ್ರೈಯೊಥೆರಪಿಯು ಒಂದು ರೀತಿಯ ಶೀತ ಚಿಕಿತ್ಸೆಯಾಗಿದ್ದು ಅದು ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿಯಾಗಲಿದೆ ಎಂದು ರಾಕುಲ್ ಹೇಳಿದ್ದರು.
Rakul Preet Singh: ಬಿಕಿನಿ ತೊಟ್ಟು ಮೈನಸ್ ಡಿಗ್ರಿ ನೀರಿನಲ್ಲಿಳಿದ ನಟಿ- ವಿಡಿಯೋ ನೋಡಿ ದಂಗಾದ ಫ್ಯಾನ್ಸ್
ಆದರೆ ಈಗ ಅವರು ನೀರಿಗೆ ಇಳಿದದ್ದು ಐ ಲವ್ ಯೂ ಚಿತ್ರಕ್ಕಾಗಿ. ತಾವು ನೀರಿಗೆ ಇಳಿದು ಈ ಸಾಹಸ ಮಾಡಿದ್ದು ಏಕೆ ಎನ್ನುವ ಬಗ್ಗೆ ಖುದ್ದು ನಟಿ ಬಣ್ಣಿಸಿದ್ದು ಹೀಗೆ: 'ಚಿತ್ರದಲ್ಲಿನ ಕಥೆಯ ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ನನಗೆ ವಿಶೇಷ ರೀತಿಯ ಆಲೋಚನೆ ಬೇಕಿತ್ತು ಮತ್ತು ಅದರೊಂದಿಗೆ ನಿಜವಾಗಿಯೂ ಸಂಪರ್ಕ ಹೊಂದಲು ನಾನು ಒಂದು ತಿಂಗಳ ಕಾಲ ಕಠಿಣ ತಯಾರಿ ನಡೆಸಿದ್ದೇನೆ. ಜಹಾನ್ ಎಡೆನ್‌ವಾಲಾ ಅವರು ನೀರಿನೊಳಗೆ ಮುಳುಗಿ ಇರುವ ಬಗ್ಗೆ ನನಗೆ ಬೋಧಿಸಿದರು. ಅವರು ಗರಿಷ್ಠ ಸಮಯ ಎರಡು ನಿಮಿಷ ಮತ್ತು 30 ಸೆಕೆಂಡುಗಳ ಕಾಲ ನೀರಿನ ಅಡಿಯಲ್ಲಿ ಇರಲು ನನಗೆ ತರಬೇತಿ ನೀಡಿದರು, ನಾನು ಪ್ರತಿದಿನ ಒಂದು ತಿಂಗಳು ಅಭ್ಯಾಸ ಮಾಡಿದ್ದೇನೆ. ನೀರಿನೊಳಗಿನ ಸೀಕ್ವೆನ್ಸ್ (Sequence) ಚಿತ್ರೀಕರಣದ ದೊಡ್ಡ ಸವಾಲು ಎಂದರೆ ನಾನು ಮಧ್ಯಾಹ್ನ 2 ರಿಂದ ಬೆಳಿಗ್ಗೆ 4 ರವರೆಗೆ ನೀರಿನಲ್ಲಿದ್ದೆ. ನಾನು ಇಡೀ ದಿನ ಒದ್ದೆಯಾಗಿದ್ದೆ ಮತ್ತು ನೀರು ಸಿಕ್ಕಾಪಟ್ಟೆ ಕೋಲ್ಡ್ ಆಗಿತ್ತು. ನನ್ನ ದೇಹ ತಣ್ಣಗಾಗಬಾರದೆಂದು ಆಗಾಗ್ಗೆ ನನ್ನ ಮೇಲೆ ಬಿಸಿನೀರನ್ನು ಸುರಿಯಲಾಗುತ್ತಿತ್ತು. ಸಹಜವಾಗಿ, ನೀರಿನಲ್ಲಿ ಕ್ಲೋರಿನ್‌ನಿಂದಾಗಿ ಕಣ್ಣುಗಳಲ್ಲಿ ಸುಡುವ ಅನುಭವವಾಗುತ್ತದೆ. ಆದ್ದರಿಂದ ಇದು ಕೂಡ ಒಂದು ಸವಾಲಾಗಿತ್ತು. ಆದರೆ ನಾನು ಈ ಸವಾಲನ್ನು ನಿಜವಾಗಿಯೂ ಆನಂದಿಸಿದೆ. ಏಕೆಂದರೆ ಅದು ನನ್ನಬಗ್ಗೆ ನನಗೆ ತಿಳಿದುಕೊಳ್ಳಲು ಸಕತ್ ಸಹಾಯ ಮಾಡಿತು' ಎಂದು ರಾಕುಲ್ ಹೇಳಿದ್ದಾರೆ.
ಅಂದಹಾಗೆ ಐ ಲವ್ ಯೂ, ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸಿದೆ. ನಿರ್ಮಾಪಕ ನಿಖಿಲ್ ಮಹಾಜನ್ (Nikhil Mahajan) ಚಿತ್ರ ಬರೆದು ನಿರ್ದೇಶಿಸಿದ್ದಾರೆ. ಜ್ಯೋತಿ ದೇಶಪಾಂಡೆ, ಸುನೀರ್ ಖೇತರ್ಪಾಲ್ ಮತ್ತು ಗೌರವ್ ಬೋಸ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಜೊತೆ ಪವೈಲ್ ಗುಲಾಟಿ, ಅಕ್ಷಯ್ ಒಬೆರಾಯ್ ಮತ್ತು ಕಿರಣ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರವು ಜೂನ್ 16 ರಂದು JioCinema ನಲ್ಲಿ ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ.
ನನ್ನ ಸಿನಿಮಾ ನೋಡೋಕೆ ಜನರ ಬಳಿ ಹಣವಿಲ್ಲ; ಸಾಲು ಸಾಲು ಚಿತ್ರಗಳ ಸೋಲಿಗೆ ರಾಕುಲ್ ಪ್ರೀತ್‌ಸಿಂಗ್ ರಿಯಾಕ್ಷನ್