ಉದ್ಯಮಿ ಜೊತೆ ಕಾಜೋಲ್​ ಪುತ್ರಿ! ಅವನೊಮ್ಮೆ, ಇವನ್ನೊಮ್ಮೆ... ಏನಮ್ಮಾ ನಿನ್​ ಕಥೆ ಎಂದ ಫ್ಯಾನ್ಸ್​

Published : Jun 10, 2023, 02:46 PM IST
ಉದ್ಯಮಿ ಜೊತೆ ಕಾಜೋಲ್​ ಪುತ್ರಿ! ಅವನೊಮ್ಮೆ, ಇವನ್ನೊಮ್ಮೆ... ಏನಮ್ಮಾ  ನಿನ್​ ಕಥೆ ಎಂದ ಫ್ಯಾನ್ಸ್​

ಸಾರಾಂಶ

ಕಾಜೋಲ್​ ಪುತ್ರಿ ನೀಸಾ ದೇವಗನ್​ ಈಗ ಉದ್ಯಮಿ ವೇದಾಂತ್​ ಮಹಾಜನ್​ ಜೊತೆ ಕಾಣಿಸಿಕೊಂಡಿದ್ದು, ಏನಮ್ಮಾ ನಿನ್​ ಕಥೆ ಅಂತಿದ್ದಾರೆ ಫ್ಯಾನ್ಸ್​. ಯಾರೀ ವೇದಾಂತ್​  

ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ (Kajol) ಅವರ ಪುತ್ರಿ ನೀಸಾ ದೇವಗನ್ ಸಾಮಾಜಿಕ ಮಾಧ್ಯಮದ ತಾರೆ. ಇಂಟರ್​ನೆಟ್​ನಲ್ಲಿ  ಪ್ರಸಿದ್ಧವಾಗಿರುವ ಎಲ್ಲಾ ಸ್ಟಾರ್​ಕಿಡ್ಸ್​ಗಳಲ್ಲಿ, ನೀಸಾ ಬಹುಶಃ ಹೆಚ್ಚು ಪ್ರೀತಿಪಾತ್ರರಾಗಿದ್ದಾರೆ. ನೀಸಾ ಪ್ರಸ್ತುತ ಉದ್ಯಮದ ಭಾಗವಾಗಿಲ್ಲ, ಆದರೂ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ. ಈ ಸ್ಟಾರ್ ಕಿಡ್ ಆಗಾಗ್ಗೆ ಪಾರ್ಟಿ ಮಾಡುವುದು ಮತ್ತು  ಸ್ನೇಹಿತರೊಂದಿಗೆ ಮೋಜು ಮಾಡುವುದು ಕಂಡುಬರುತ್ತದೆ. ಆದ್ದರಿಂದ ಅವರು ಎಲ್ಲೇ  ಹೋದರೂ ಕ್ಯಾಮೆರಾ ಕಣ್ಣುಗಳು ಅವರನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೀಸಾ ಬಾಲಿವುಡ್‌ನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿರುವ ಕಾರಣ  ಅವರ ಹೆಸರು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಇರುತ್ತದೆ.  ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ನೀಸಾ,  ಕೆಲವು ಬಾರಿ  ಸ್ಟಾರ್​ ಕಿಡ್ಸ್​ ಜೊತೆ ಕಾಣಿಸಿಕೊಂಡರೆ ಇನ್ನು ಕೆಲವು ಬಾರಿ ಇನ್ನಾರದೋ ಜೊತೆ ಅಮಲಿನಲ್ಲಿ ಇರುವಂತೆ ಕಾಣಿಸಿಕೊಳ್ಳುತ್ತಾರೆ. ಆ ಚಿತ್ರವನ್ನು ನೋಡಿದಾಗಲೆಲ್ಲಾ ಈಕೆ ಈ ಹುಡುಗನ ಜೊತೆ ಡೇಟಿಂಗ್​ ಮಾಡ್ತಾ ಇದ್ದಾರೆ ಎನ್ನುವ ಅನುಮಾನ ಕಾಡುತ್ತದೆ.

ಇದೀಗ ನೀಸಾ ಅವರು  ಖ್ಯಾತ ಉದ್ಯಮಿ ವೇದಾಂತ್ ಮಹಾಜನ್ (Vedanth Mahajan) ಅವರೊಂದಿಗೆ  ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಅಷ್ಟಕ್ಕೂ ಕೆಲ ತಿಂಗಳ ಹಿಂದಷ್ಟೇ ಈಕೆಯ ಹೆಸರು ಅರ್ಹಾನ್ ಅವತ್ರಮಣಿ ಎಂಬ ಯುವಕನ ಜೊತೆ ಥಳಕು ಹಾಕಿಕೊಂಡಿತ್ತು.  ಪಾರ್ಟಿ, ಫ್ರೆಂಡ್ಸ್, ಟ್ರಿಪ್ ಅಂತ ಓಡಾಡುವ ನಿಸಾ  ಲಂಡನ್‌ನಲ್ಲಿ ಅರ್ಹಾನ್​ ಜೊತೆ ಮೋಜು ಮಸ್ತಿ ಮಾಡುತ್ತಿದ್ದರು. ಅದರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ನಿಸಾ ಅವರ ಬೆಸ್ಟ್ ಫ್ರೆಂಡ್‌ಗಳಲ್ಲಿ ಅರ್ಹಾನ್ ಅವತ್ರಮಣಿ ಕೂಡ ಒಬ್ಬರು. ಈತ  ಸಿನಿಮಾರಂಗದಲ್ಲಿ ಇಲ್ಲ. ಆದರೂ ಸ್ಟಾರ್ ಕಿಡ್‌ಗಳ ಜೊತೆ ಸಿಕ್ಕಾಪಟ್ಟೆ ಕ್ಲೋಸ್. ಫ್ಯಾಷನ್ ಕ್ರೇಸ್ ಅರ್ಹಾನ್ ಮತ್ತು ನಿಸಾ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿತ್ತು. ಈಗ ನೋಡಿದ್ರೆ ಅದೇ ಕ್ಲೋಸ್​ನೆಸ್​ ವೇದಾಂತ್​ ಮಹಾಜನ್​ ಜೊತೆ ಕಾಣಿಸುತ್ತಿದ್ದು, ಕಾಜೋಲ್​-ಅಜೆಯ್​ ಪುತ್ರಿ ಹೀಗೆಕಾದ್ಲು ಅಂತಿದ್ದಾರೆ ಫ್ಯಾನ್ಸ್​. 

ಬಾಯ್‌ಫ್ರೆಂಡ್ಸ್ ಜೊತೆ ಅಜಯ್ ದೇವಗನ್ ಪುತ್ರಿಯ ಭರ್ಜರಿ ಪಾರ್ಟಿ; ನಿಸಾ ಫೋಟೋ ವೈರಲ್

 ಅಂದಹಾಗೆ ಈ ಹೊಸ ಬಾಯ್​ಫ್ರೆಂಡ್ (Boy Friend)​ ವೇದಾಂತ್​ ಮಹಾಜನ್​ಗೆ 25 ವರ್ಷ. ಇವರು ಕೈಗಾರಿಕೋದ್ಯಮಿ. ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ MVM ಎಂಟರ್‌ಟೈನ್‌ಮೆಂಟ್‌ನ ಸಹ-ಮಾಲೀಕ. ಇವರ ಜೊತೆ ಸಿಕ್ಕಾಪಟ್ಟೆ ಬೋಲ್ಡ್​ ಆಗಿ ವರ್ತಿಸಿದ್ದಾರೆ  ನೀಸಾ. ವೇದಾಂತ್​ ಮತ್ತು ಅವರ ಸ್ನೇಹಿತರಾದ ಮನಕ್ ಧಿಂಗ್ರಾ ಮತ್ತು ಮೋಹಿತ್ ರಾವಲ್ ಜೊತೆ ಪಾರ್ಟಿ ಮಾಡಿರುವ ಫೋಟೋಗಳು ವೈರಲ್​ ಆಗಿವೆ.  ಈ ಮೂವರು ಮುಂಬೈ, ದೆಹಲಿ ಮತ್ತು ಲಂಡನ್‌ನಲ್ಲಿ ಗ್ರ್ಯಾಂಡ್ ಪಾರ್ಟಿಗಳನ್ನು ಆಯೋಜಿಸುತ್ತಾರೆ, ಇದರಲ್ಲಿ ಜಾನ್ವಿ ಕಪೂರ್, ಅಹಾನ್ ಶೆಟ್ಟಿ, ಮಹಿಕಾ ರಾಂಪಾಲ್, ಆರ್ಯನ್ ಖಾನ್ ಮತ್ತು ನೀಸಾ ದೇವಗನ್ (Nysa Devagan) ಸೇರಿದಂತೆ ಸ್ಟಾರ್ ಮಕ್ಕಳು ಭಾಗವಹಿಸುತ್ತಾರೆ. ಅವರ ವೈರಲ್​ ಫೋಟೋಗಳನ್ನು ನೋಡಿದವರು ಹುಬ್ಬೇರಿಸುತ್ತಾರೆ. 

ವೇದಾಂತ್ ಮತ್ತು ಅವರ ಇಬ್ಬರು ಸ್ನೇಹಿತರು  2014 ರಿಂದ ಹೀಗೆಯೇ ಪಾರ್ಟಿ ಆಯೋಜಿಸಿ ಸ್ಟಾರ್​ಕಿಡ್ಸ್​ಗಳನ್ನು ಆಹ್ವಾನಿಸುತ್ತಾರೆ.  ಮುಂಬೈನ ನೈಟ್‌ಕ್ಲಬ್‌ಗಳು (Night Club) ಮತ್ತು ಹೋಟೆಲ್‌ಗಳನ್ನು  ಈ ಕಾರ್ಯಕ್ರಮಗಳು ನಡೆಯುತ್ತವೆ. ಲಂಡನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವೇದಾಂತ್​, ಅಲ್ಲಿ ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳಿಗೆ ಪಾರ್ಟಿ ಆಯೋಜಿಸುತ್ತಾರೆ.   ಅದರಲ್ಲಿ ಈಗ ನೀಸಾ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಈಗ ಇವರ ಜೊತೆ ನೀಸಾ ಡೇಟಿಂಗ್​  ಮಾಡುತ್ತಿರಬಹುದೇ ಎನ್ನಲಾಗುತ್ತದೆ. ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​. ಸಾಕು ಬಿಡಮ್ಮಾ ಎಷ್ಟು ಮಂದಿ ಜೊತೆ ಹೀಗೆ ಡೇಟಿಂಗ್​ (Dating) ಮಾಡ್ತಿಯಾ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇದೆಲ್ಲಾ ಬೇಕಾ ಅಂತಿದ್ದಾರೆ. ಆದರೆ ಈ ಬೋಲ್ಡ್​ನೆಸ್​ ತಾಯಿ ಕಾಜೋಲ್​ ತಲೆ ಕೆಡಿಸಿಕೊಂಡಿಲ್ಲ.  ಅವಳು ಏನೇ ಮಾಡಿದರೂ ನಂಗೆ ಹೆಮ್ಮೆ ಎಂದು ಹಿಂದೆ ಹೇಳಿದ್ದರು. 

Nysa Devgan: ನೈಸಾ, ನಿಶಾ, ನಿಶ್ಸಾ, ನ್ಯಾಸಾ... ತಪ್ಪಾದ ಹೆಸ್ರು ಕೇಳಿ ಸುಸ್ತಾಗೋದ್ರು ಕಾಜೋಲ್​ ಪುತ್ರಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?