
'RX 100' ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟ ಕಾರ್ತೀಕೇಯ ಗುಮ್ಮಕೊಂಡಾ ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.
ಕಾರ್ತಿಕೇಯ ಮತ್ತು ಲೋಹಿತಾ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ. 'ಬಹು ಕಾಲದ ಗೆಳತಿ ಈಗ ನನ್ನ ಬಾಳ ಸಂಗಾತಿಯಾಗುತ್ತಿದ್ದಾರೆ. 2010ರಲ್ಲಿ ವಾರಂಗಲ್‌ನ ಕಾಲೇಜಿನಲ್ಲಿ ನಾನು ಲೋಹಿತಾರನ್ನು ಮೊದಲ ಸಲ ಭೇಟಿ ಮಾಡಿದೆ. ದಶಕದ ಪರಿಚಯ, ಈ ದಶಕದ ಜರ್ನಿ ಮತ್ತಷ್ಟು ದಶಕಗಳು ಮುಂದುವರೆಯಲಿ,' ಎಂದು ಕಾರ್ತೀಕೆಯ ಬರೆದುಕೊಂಡಿದ್ದಾರೆ.
ವೈಯಕ್ತಿಕ ವಿಚಾರಕ್ಕೆ ಪ್ರಚಾರ ಬೇಡ ಎಂದು ಕಾರ್ತಿಕೇಯ ನಿಶ್ಚಿತಾರ್ಥದಲ್ಲಿ ಆಪ್ತರು, ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ತಮ್ಮ ನೆಚ್ಚಿನ ನಟ ಮೆಗಾ ಸ್ಟಾರ್ ಚಿರಂಜೀವಿ ಹುಟ್ಟುಹಬ್ಬದ ದಿನ ನಿಶ್ಚಿತಾರ್ಥ ಮಾಡಿಕೊಂಡಿರುವ ಕಾರಣ ಕಾರ್ಯಕ್ರಮದಲ್ಲಿ ಅವರ ಹಾಡಿಗೆ ನವ-ಜೋಡಿಗಳು ಕಣಿದು ಎಂಜಾಯ್ ಮಾಡಿದ್ದಾರೆ. ಮದುವೆ ದಿನಾಂಕವನ್ನು ಇನ್ನೂ ಅನೌನ್ಸ್ ಮಾಡಿಲ್ಲ.
'ಪ್ರೇಮತೋ ಮೀ ಕಾರ್ತಿಕ್' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕಾರ್ತಿಕೇಯ ಆರ್‌ಎಕ್ಸ್ 100, ಹಿಪ್ಪಿ, ಗುಣ369, ಗ್ಯಾಂಗ್‌ಲೀಡರ್, 90ಎಂಎಲ್, ಚಾವು ಕಾಬುರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಲಾ ಅಜಿತ್ ಕುಮಾರ್‌ಗೆ ವಿಲನ್ ಆಗಿ 'ವಾಲಿಮೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.