ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಕ್ರಿಕೆಟ್ ಲೆಜಂಡ್ ಕಪಿಲ್ ದೇವ್ ಇಬ್ಬರು ಸದ್ಗುರು (Kapil Dev and Sadhguru) ಜೊತೆ ಗಾಲ್ಫ್ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲ ರಾಕುಲ್ ಮತ್ತು ಕಪಿಲ್ ದೇವ್ ಇಬ್ಬರು ಸದ್ಗುರು ಜೊತೆ ಗಾಲ್ಫ್ ಆಟವನ್ನು ಆಡಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಕುಲ್ ಆಟ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಕ್ರಿಕೆಟ್ ಲೆಜಂಡ್ ಕಪಿಲ್ ದೇವ್ ಇಬ್ಬರು ಸದ್ಗುರು (Kapil Dev and Sadhguru) ಜೊತೆ ಗಾಲ್ಫ್ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲ ರಾಕುಲ್ ಮತ್ತು ಕಪಿಲ್ ದೇವ್ ಇಬ್ಬರು ಸದ್ಗುರು ಜೊತೆ ಗಾಲ್ಫ್ ಆಟವನ್ನು ಆಡಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಕುಲ್ ಆಟ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ಅಂದಹಾಗೆ ಮೂವರು ಗಾಲ್ಫ್ (Golf) ಆಡಿರುವುದು ವಾಷಿಂಗ್ಟನ್ ಡಿಸಿಯಲ್ಲಿ. ಗಾಲ್ಫ್ ಆಟ ಎಂಜಾಯ್ ಮಾಡಿರುವ ವಿಡಿಯೋವನ್ನು ನಟಿ ರಾಕುಲ್ ಪ್ರೀತ್ ಸಿಂಗ್ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅವರೊಂದಿಗೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಮತ್ತು ಆಧ್ಯಾತ್ಮಿಕ ಗುರು ಸದ್ಗುರು ಜೊತೆಯಾಗಿದ್ದರು. ರಾಕುಲ್ ಶೇರ್ ಮಾಡಿ, 'ವಾಷಿಂಗ್ ಟನ್ ಡಿಸಿಯಲ್ಲಿ ಸದ್ಗುರು ಮತ್ತು ಕಪಿಲ್ ದೇವ್ ಅವರೊಂದಿಗೆ ಸಮಾವೇಶ ಪ್ರಾರಂಭ ಮಾಡುವುದಕ್ಕಿಂತ ಉತ್ತಮವಾದದ್ದು ಏನಿದೆ' ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟನಲ್ಲಿ ಬರೆದಿದ್ದಾರೆ.
ರಾಕುಲ್, ಕಪಿಲ್ ದೇವ್ ಮತ್ತು ಸದ್ಗುರುಗಳು ತಮ್ಮ ಹೆಚ್ಚಿನ ಸಮಯವನ್ನು ಇತರರೊಂದಿಗೆ ಗಾಲ್ಫ್ ಕೋರ್ಸ್‌ನಲ್ಲಿ ಕಳೆದರು. ರಾಕುಲ್ ಪ್ರೀತ್ ಆ ಸಮಯದಲ್ಲಿ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಬಣ್ಣದ ಸ್ಪೋರ್ಟ್ಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಸದ್ಗುರು ತಮ್ಮ ಮಣ್ಣಿನ ಉಳಿಸಿ ಆಂದೋಲನವನ್ನು ಉತ್ತೇಜಿಸುವ ಟಿ ಶರ್ಟ್ ಅನ್ನು ಧರಿಸಿದ್ದಾರೆ. ಮತ್ತೊಂದೆಡೆ, ಕಪಿಲ್ ದೇವ್ ಟೀ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಕ್ಯಾಶುಯಲ್ ಲುಕ್ ಕಾಣಿಸಿಕೊಂಡಿದ್ದರು. ನಂತರ ರಾಕುಲ್ ಅವರು ಅಲ್ಲಿದ್ದ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು.
ಕಾಂಡೋಮ್ ಜಾಹೀರಾತು ಇದೆ, ಸಿನಿಮಾ ಯಾಕೆ ಮಾಡಬಾರದು; 'ಛತ್ರಿವಾಲಿ' ಬಗ್ಗೆ ರಾಕುಲ್ ಮಾತು
ಈ ವಿಡಿಯೋವನ್ನು ರಕುಲ್ ಪ್ರೀತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 'ಕ್ಯಾ ಬಾತ್ ಹೈ' ಎಂದಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಎಲ್ಲವೂ ಚಮತ್ಕಾರಿಯಾಗಿದೆ' ಎಂದು ಹೇಳಿದ್ದಾರೆ.
Happy Birthday: ರಾಕುಲ್ ವಾಟರ್ ಬೇಬಿ ಅನ್ನೋದ್ರಲ್ಲಿ ನೋ ಡೌಟ್: ನಟಿಯ ಸ್ಟೈಲಿಷ್ ಬಿಕಿನಿ ಫೋಟೋಸ್
ಇನ್ನು ರಾಕುಲ್ ಪ್ರೀತ್ ಸಿಂಗ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಯುಷ್ಮಾನ್ ಖುರಾನಾ ನಾಯಕನಾಗಿ ನಟಿಸಿರುವ ಡಾಕ್ಟರ್ ಜಿ ಸಿನಿಮಾದಲ್ಲಿ ರಾಕುಲ್ ನಾಯಕಿಯಾಗಿ ಮಿಂಚಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ರೆಡಿಯಾಗುತ್ತಿದೆ. ಛತ್ರಿವಾಲಿ ಸಿನಿಮಾ ಕೂಡ ಮುಗಿಸಿದ್ದಾರೆ. ಇನ್ನು ರಾಕುಲ್ ಕೊನೆಯದಾಗಿ ಅಜಯ್ ದೇವಗನ್ ಅವರ ಚಲನಚಿತ್ರ ರನ್‌ವೇ 34 ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಚಿತ್ರವು 2015 ರಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತವಾಗಿ ಮಾಡಿದ ಸಿನಿಮಾವಾಗಿದೆ. ಹಿಂದಿ ಮತ್ತು ದಕ್ಷಿಣ ಭಾರತ ಎರಡು ಕಡೆ ಬ್ಯುಸಿಯಾಗಿರುವ ರಕುಲ್ ಪ್ರೀತ್ ಸಿಂಗ್ ಸದ್ಯ ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದಾರೆ.