ವಿಜಯ್ ದೇವರಕೊಂಡ ಶೇರ್ ಮಾಡಿರುವ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ಲೈಗರ್ ಸಿನಿಮಾಗಾಗಿ ಬೆತ್ತಲಾಗಿರುವ (Naked) ಫೋಟೋವನ್ನು ವಿಜಯ್ ದೇವರಕೊಂಡ ಶೇರ್ ಮಾಡಿದ್ದಾರೆ. ಸಿನಿಮಾಗಾಗಿ ವಿಜಯ್ ದೇವರಕೊಂಡ ಬೆತ್ತಲಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಟಾಲಿವುಡ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಸದ್ಯ ಲೈಗರ್ (Liger) ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಲೈಗರ್ ಸಿನಿಮಾದ ಪೋಸ್ಟರ್‌ಗಳು ಮತ್ತು ಟೀಸರ್ ರಿಲೀಸ್ ಆಗಿದ್ದು ವೈರಲ್ ಆಗಿವೆ. ಈ ನಡುವೆ ವಿಜಯ್ ದೇವರಕೊಂಡ ಶೇರ್ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ಹೌದು, ವಿಜಯ್ ದೇವರಕೊಂಡ ಲೈಗರ್ ಸಿನಿಮಾದ ಬೆತ್ತಲೆ (Naked)ಫೋಟೋ ಶೇರ್ ಮಾಡಿದ್ದಾರೆ. ಸಿನಿಮಾಗಾಗಿ ವಿಜಯ್ ದೇವರಕೊಂಡ ಬೆತ್ತಲಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಸದ್ಯ ವಿಜಯ್ ದೇವರಕೊಂಡ ಶೇರ್ ಮಾಡಿರುವ ಫೋಟೋದಲ್ಲಿ ಮೈ ಮೇಲೆ ಬಟ್ಟೆ ಇಲ್ಲದೆ ಕಾಣಿಸಿಕೊಂಡಿದ್ದಾರೆ. ತನ್ನ ಖಾಸಗಿ ಜಾಗಕ್ಕೆ ಹೂಗುಚ್ಛ ಹಿಡಿದುಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವಿಜಯ್ ದೇವರಕೊಂಡ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಸ್ಟರ್ ಶೇರ್ ಮಾಡಿ ಸಿನಿಮಾ ನನ್ನ ಎಲ್ಲವನ್ನು ತೆಗೆದುಕೊಂಡಿತು ಎಂದ ಹೇಳಿದ್ದಾರೆ.
'ನನ್ನ ಎಲ್ಲವನ್ನೂ ತೆಗೆದುಕೊಂಡ ಸಿನಿಮಾ. ಅಭಿನಯ, ಮಾನಸಿಕವಾಗಿ, ದೈಹಿಕವಾಗಿ ನನಗೆ ಅತ್ಯಂತ ಸವಾಲಿನ ಪಾತ್ರ. ನಾನು ನಿಮಗೆ ಎಲ್ಲವನ್ನೂ ನೀಡುತ್ತೇನೆ. ಶೀಘ್ರದಲ್ಲೇ ಬರಲಿದೆ LIGER'ಎಂದು ಹೇಳಿದ್ದಾರೆ. ವಿಜಯ್ ದೇವರಕೊಂಡ ಈ ಫೋಟೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಟ್ರೆಂಡಿಂಗ್ ನಲ್ಲಿದೆ.
ಅಂದಹಾಗೆ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್‌ಗೆ ಸರಿಯಾಗಿ ಮಾತನಾಡಲು ಬರಲ್ಲ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲೈಗರ್ ಸಿನಿಮಾಗೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಮೊದಲ ಬಾರಿಗೆ ಅನನ್ಯಾ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿದ್ದು ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.
ಬಾಡಿಗೆ ಕಟ್ಟಲು ಪರದಾಡುತ್ತಿದ್ದ Vijay Devarakonda ಇಂದು ಕೋಟಿಗಟ್ಟಲೆ ಆಸ್ತಿಯ ಮಾಲೀಕ
ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ದಿಗ್ಗಜ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಮೊದಲ ಬಾರಿಗೆ ಭಾರತದ ಸಿನಿಮಾದಲ್ಲಿ ಮೈಕ್ ಅಭಿನಯಿಸಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ಮಾತ್ರ ನಟಿಸಿದ್ದಾರೆ. ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ತೆಲುಗು ಮತ್ತು ಹಿಂದಿ ಜೊತೆಗೆ ಕನ್ನಡ, ತಮಿಳು ಹಾಗುು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಇದೇ ವರ್ಷ ಆಗಸ್ಟ್ 25ಕ್ಕೆ ತೆರೆಗೆ ಬರುತ್ತಿದೆ.
A Film that took my everything.
As a performance, Mentally, physically my most challenging role.
I give you everything!
Coming Soon pic.twitter.com/ljyhK7b1e1
Vijay Devarakonda Birthday; ಫೋಟೋ ಶೇರ್ ಮಾಡಿ ಕ್ಯೂಟ್ ವಿಶ್ ಮಾಡಿದ ಸಮಂತಾ
ಈ ಸಿನಿಮಾ ಜೊತೆಗೆ ವಿಜಯ್ ದೇವರಕೊಂಡ ಜನಗಣಮನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೂ ಪುರಿ ಜಗನ್ನಾಥ್ (Puri Jagannath) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೈನಿಕ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ವಿಜಯ್ ಸೈಕನಾಗಿ ಮಿಂಚುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ರಿವೀಲ್ ಮಾಡಿಲ್ಲ. ಸದ್ಯ ವಿಜಯ್ ಲೈಗರ್ ಮೂಲಕ ಸದ್ದು ಮಾಡುತ್ತಿದ್ದಾರೆ.