ಶ್ರುತಿ ಹಾಸನ್‌ಗೆ ಕಾಡುತ್ತಿದೆ ಈ ಸಮಸ್ಯೆ; ಅನಾರೋಗ್ಯದ ಬಗ್ಗೆ ರಿವೀಲ್ ಮಾಡಿದ 'ಸಲಾರ್' ನಟಿ

Published : Jul 02, 2022, 01:32 PM ISTUpdated : Jul 02, 2022, 02:12 PM IST
ಶ್ರುತಿ ಹಾಸನ್‌ಗೆ ಕಾಡುತ್ತಿದೆ ಈ ಸಮಸ್ಯೆ; ಅನಾರೋಗ್ಯದ ಬಗ್ಗೆ ರಿವೀಲ್ ಮಾಡಿದ 'ಸಲಾರ್' ನಟಿ

ಸಾರಾಂಶ

ನಟಿ ಶ್ರುತಿ ತನಗೆ ಪಿಸಿಓಎಸ್ (PCOS) ಮತ್ತು ಎಂಡೊಮೆಟ್ರಿಯೊಸಿಸ್ (Endometriosis) ಸಮಸ್ಯೆಯಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಹಾಸನ್ ವರ್ಕೌಟ್ ವಿಡಿಯೋ ಶೇರ್ ಮಾಡಿ ಈ ಬಗ್ಗೆ ಬಹಿರಂಗ ಪಡಿಸಿದರು. ಶ್ರುತಿ ಕೆಲವು ಕೆಟ್ಟ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. 

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ (Shruti Haasan) ಸದ್ಯ ಬಹುನಿರೀಕ್ಷೆಯ ಸಲಾರ್ (Salaar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರುತಿ ಹಾಸನ್ ಇತ್ತೀಚಿಗಷ್ಟೆ ತನ್ನನ್ನು ಕಾಡುತ್ತಿರುವ ಅನಾರೋಗ್ಯದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತನ್ನ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿರುವ ನಟಿ ಶ್ರುತಿ ತನಗೆ ಪಿಸಿಓಎಸ್ (PCOS) ಮತ್ತು ಎಂಡೊಮೆಟ್ರಿಯೊಸಿಸ್ (Endometriosis) ಸಮಸ್ಯೆಯಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಹಾಸನ್ ವರ್ಕೌಟ್ ವಿಡಿಯೋ ಶೇರ್ ಮಾಡಿ ಈ ಬಗ್ಗೆ ಬಹಿರಂಗ ಪಡಿಸಿದರು. ಶ್ರುತಿ ಕೆಲವು ಕೆಟ್ಟ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. 

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡ ಶ್ರುತಿ ಹಾಸನ್ ಪಿಸಿಓಎಸ್ ಮತ್ತು ಎಂಡೊಮೆಟ್ರಿಯೊಸಿಸ್ ವಿರುದ್ಧದ ಹೋರಾಟದ ಬಗ್ಗೆ ಸುದೀರ್ಘವಾಗಿ ಹೇಳಿದ್ದಾರೆ.  'ನನ್ನೊಂದಿಗೆ ವರ್ಕೌಟ್ ಮಾಡಿ. ನಾನು PCOS ಮತ್ತು ಎಂಡೊಮೆಟ್ರಿಯೊಸಿಸ್‌ನೊಂದಿಗೆ, ಕೆಲವು ಕೆಟ್ಟ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಇದು ಅಸಮತೋಲನ ಸಮಸ್ಯೆ ಸೇರಿದಂತೆ ಅನೇಕ ಸವಾಲುಗಳೊಂದಿಗೆ ಕಠಿಣ ಹೋರಾಟವಾಗಿದೆ. ಸರಿಯಾಗಿ ತಿನ್ನುವ ಮೂಲಕ, ಚೆನ್ನಾಗಿ ನಿದ್ದೆ ಮಾಡುವ ಮೂಲಕ ಮತ್ತು ನನ್ನ ವ್ಯಾಯಾಮವನ್ನು ಆನಂದಿಸುವ ಮೂಲಕ ನಾನು ಧನ್ಯವಾದ ಹೇಳುತ್ತೇನೆ. ನನ್ನ ದೇಹ ಇದೀಗ ಪರಿಪೂರ್ಣವಾಗಿಲ್ಲ. ಆದರೆ ನನ್ನ ಹೃದಯ ಪೂರ್ಣವಾಗಿದೆ. ಫಿಟ್ ಆಗಿ ಸಂತೋಷವಾಗಿರಿ. ಸಂತೋಷದ ಹಾರ್ಮೋನ್ ಹೆಚ್ಚಾಗಲಿ' ಎಂದು ಹೇಳಿದರು. 

ಇನ್ನು ಶ್ರುತಿ ಹಾಸನ್ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ಶ್ರುತಿ ಸದ್ಯ ಮುಂಬೈ ಮೂಲದ ವ್ಯಕ್ತಿ ಸಂತಾನು ಹಜಾರಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಶ್ರುತಿ ಆಗಾಗ ಬಾಯ್ ಫ್ರೆಂಡ್ ಜೊತೆಗಿನ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ.

ರಜನಿಕಾಂತ್ ಅಳಿಯನೊಟ್ಟಿಗೆ ಕಮಲ್ ಹಾಸನ್ ಮಗಳು ಶ್ರುತಿ ಹೆಸರು ಲಿಂಕ್ ಆಗಿತ್ತು!

ನಟಿ ಶ್ರುತಿ ಹಾಸನ್ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಹೆಚ್ಚು ಟ್ರೋಲ್‌ಗೆ ಗುರಿಯಾಗುವ ನಟಿಯರಲ್ಲಿ ಶ್ರುತಿ ಕೂಡ ಒಬ್ಬರಾಗಿದ್ದಾರೆ. ಬಾಯಿ ಶೇಮಿಂಗ್, ಬಾಯ್ ಫ್ರೆಂಡ್ ಹೀಗೆ ಅನೇಕ ವಿಚಾರಗಳಿಗೆ ಶ್ರುತಿ ಹಾಸನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಶ್ರುತಿ ಹಾಸನ್ ಆಗಾಗ ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. 

Shruti Hassan On Troll: ದೆವ್ವ ಅಂತಲೇ ಕರೀರಿ, ಅದೇ ನನ್ನ ಸೌಂದರ್ಯ ಎಂದ ನಟಿ

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಶ್ರುತಿ ಕೊನೆಯದಾಗಿ ಲಾಬಮ್ ಸಿನಿಮಾ ಸಿನಿಮಾ ಮೂಲಕ ಅಭಿಮಾಗಳ ಮುಂದೆ ಬಂದಿದ್ದಾರೆ. ವಕೀಲ್ ಸಾಬ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಬಹುನಿರೀಕ್ಷೆಯ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರ್ತಿರುವ ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಈ ಸಿನಿಮಾ ಜೊತೆಗೆ ಇನ್ನು ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.    
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ