Latest Videos

ಬಯಲಾಯ್ತು ನಟಿ ಹೇಮಾ ರಂಗಿನಾಟ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ

By Sathish Kumar KHFirst Published May 23, 2024, 12:11 PM IST
Highlights

ನಾನು ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲವೆಂದು ಪೊಲೀಸರು ಹಾಗೂ ಮಾಧ್ಯಮಗಳನ್ನು ಯಾಮಾರಿಸಿದ್ದ ತೆಲುಗು ನಟಿ ಹೇಮಾ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಮೂಲಕ ಹೇಮಾಳ ರಂಗಿನಾಟ ಬಟಾ ಬಯಲಾಗಿದೆ.

ಬೆಂಗಳೂರು (ಮೇ 23): ನಾನು ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲವೆಂದು ಪೊಲೀಸರು ಹಾಗೂ ಮಾಧ್ಯಮಗಳನ್ನು ಯಾಮಾರಿಸಿದ್ದ ತೆಲುಗು ನಟಿ ಹೇಮಾ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಮೂಲಕ ಹೇಮಾಳ ರಂಗಿನಾಟ ಬಟಾ ಬಯಲಾಗಿದೆ.

ತೆಲುಗು ನಟಿ ಹೇಮಾ ಬೆಂಗಳೂರು ರೇವ್ ಪಾರ್ಟಿಗೆ ಬಂದು ಡ್ರಗ್ಸ್ ಸೇವನೆ ಮಾಡಿ ಮನಸೋ ಇಚ್ಛೆ ಕುಣಿದು ಕುಪ್ಪಳಿಸಿದ್ದಳು. ಆದರೆ, ಇದು ಡ್ರಗ್ಸ್ ಪಾರ್ಟಿ ಎಂದು ಖಚಿತಪಡಿಸಿಕೊಂಡ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆಯುತ್ತಿದ್ದಂತೆಯೇ, ತಾನು ರೇವ್ ಪಾರ್ಟಿಯಲ್ಲಿಲ್ಲ ಎಂದು ವಿಡಿಯೋ ಮಾಡಿ ಪೊಲೀಸರನ್ನು ಹಾಗೂ ಮಾಧ್ಯಮದವರನ್ನು ಯಾಮಾರಿಸಿದ್ದಳು. ಆದರೆ, ಪೊಲೀಸರು ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಈಗ ನಟಿ ಹೇಮಾ ಕೂಡ ಡ್ರಗ್ಸ್ ಸೇವನೆ ಮಾಡಿರುವುದು ಕನ್ಫರ್ಮ್ ಆಗಿದೆ.

ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ

ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಡ್ರಗ್ಸ್ ಸೇವನೆ ಮಾಡಿದ ಅಂಶ ಬಹಿರಂಗವಾಗಿದೆ. ರೇವ್ ಪಾರ್ಟಿ ಭಾಗಿಯಾಗಿದ್ದ  103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಪೈಕಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಡ್ರಗ್ಸ್  ಪಾಸಿಟಿವ್ ಬಂದಿದೆ. ಜೊತೆಗೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಇದರಲ್ಲಿ  ತೆಲುಗು ನಟಿ ಹೇಮಾ ಅವರ ಡ್ರಗ್ಸ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ ಎಂದು ಪೊಲೀಸ್ ಇಲಾಖೆ ಖಚಿತಪಡಿಸಿದೆ.

ಇನ್ನು ಬೆಂಗಳೂರಿನ ಹೊರ ವಲಯ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್‌ ಹೌಸ್‌ನಲ್ಲಿ ಭಾನುವಾರ ರಾತ್ರಿ ದೊಡ್ಡ ಮಟ್ಟದ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪೊಲೀಸರ ಅನುಮತಿ ಪಡೆಯದೇ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜಿಸಿ ತಡರಾತ್ರಿಯಲ್ಲಿ ಗಲಾಟೆ ಮಾಡುತ್ತಿದ್ದ ಪಾರ್ಟಿಯ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ತೆಲುಗು ಸಿನಿಮಾ ನಟ-ನಟಿಯರು ಹಾಗೂ ಶ್ರೀಮಂತರ ಮಕ್ಕಳು, ಉದ್ಯಮಿಗಳ ಮಕ್ಕಳು ಇರುವುದು ಕಂಡುಬಂದಿದ್ದರು.  ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆಯಾಗಿರುವುದು ಕಂಡುಬಂದಿದೆ. ಕೋಟ್ಯಂತರ ರೂ. ಬೆಲೆ ಬಾಳುವ ಮಾದಕ ವಸ್ತುಗಳಾದ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು.

ಕರ್ನಾಟಕ ಪೊಲೀಸ್ರಿಗೆ ಚಳ್ಳೇಹಣ್ಣು ತಿನ್ನಿಸಿದ ತೆಲುಗು ನಟಿ: ಸಿಕ್ಕಿಬಿದ್ದಿದ್ದೇಗೆ...

ರಾತ್ರೋ ರಾತ್ರಿ ಎಲ್ಲರನ್ನು ವಶಕ್ಕೆ ಪಡೆದ ಪೊಲೀಸರು ಎಲ್ಲರನ್ನು ಬೆಳಗ್ಗೆಯಿಂದ ಸಂಜೆವರೆಗೂ ಕೂಡಿ ಹಾಕಿ ವಿಚಾರಣೆ ಮಾಡಿದ್ದರು. ಈ ವೇಳೆ ವಾಸು ಎಂಬಾತನ ಬರ್ತಡೇ ಅಂಗವಾಗಿ ಸನ್ ಸೆಟ್‌ ಟು ಸನ್ ರೈಸ್ ವಿಕ್ಟರಿ (Sunset To Sun Rise victory) ಎಂಬ ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ 105 ಮಂದಿ ಜಮಾವಣೆಗೊಂಡಿದ್ದರು. ಅದರಲ್ಲಿ ತೆಲುಗು ನಟಿಯರಾದ ಹೇಮಾ ಹಾಗೂ ಆಶಿರಾಯ್ ಭಾಗಿಯಾಗಿದ್ದರು. ಎಲ್ಲರ ಬ್ಲಡ್ ಸ್ಯಾಂಪಲ್ ಕಲೆಕ್ಟ್ ಮಾಡಿ ಪೊಲೀಸರು ಅವರನ್ನು ಕಳುಹಿಸಿದ್ದರು. ಎಲ್ಲರ ರಕ್ತದ ಮಾದರಿ ಪರೀಕ್ಷೆ ಮಾಡಿದಾದ 103 ಜನರ ಪೈಕಿ 86 ಜನರಲ್ಲಿ ಡ್ರಗ್ಸ್ ಪಾಸಿಟಿವ್ ಬಂದಿದೆ. ಇನ್ನು ಸಿಸಿಬಿ ಪೊಲೀಸರು ಎಲ್ಲ ಡ್ರಗ್ಸ್ ಪಾಸಿಟಿವ್ ಬಂದವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ, ಡ್ರಗ್ಸ್ ಸೇವನೆ ಮಾಡಿದ ಎಲ್ಲರಿಗೂ ಸಂಕಷ್ಟ ಎದುರಾಗಲಿದೆ.

click me!