Rakhi Sawant: ಇಸ್ಲಾಂ ಸ್ವೀಕರಿಸಿದ ನಟಿಯಿಂದ ರಂಜಾನ್​ ತಿಂಗಳ ಅಚ್ಚರಿಯ ಘೋಷಣೆ!

Published : Mar 17, 2023, 12:59 PM IST
Rakhi Sawant: ಇಸ್ಲಾಂ ಸ್ವೀಕರಿಸಿದ ನಟಿಯಿಂದ ರಂಜಾನ್​  ತಿಂಗಳ ಅಚ್ಚರಿಯ ಘೋಷಣೆ!

ಸಾರಾಂಶ

ಇಸ್ಲಾಂ ಸ್ವೀಕರಿಸಿ ಪತಿ ಆದಿಲ್​ ಖಾನ್​ ಅವರನ್ನು ಜೈಲಿಗೆ ಕಳಿಸಿರುವ ನಟಿ ರಾಖಿ ಸಾವಂತ್​ ರಂಜಾನ್​ ಆಚರಣೆ ಕುರಿತು ಮಾಹಿತಿ ನೀಡಿದ್ದಾರೆ. ಏನದು?   

ಮುಂಬೈ: ರಾಖಿ ಸಾವಂತ್​ (Rakhi Sawant) ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್​ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ.  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಂತರ,  ಮೈಸೂರು ಕೋರ್ಟ್‌ಗೆ (Mysore Court) ಹಾಜರಾಗಿ ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದರು. 

ನಂತರ ಕಳೆದ ತಿಂಗಳು ದುಬೈಗೆ (Dubai) ಹೋಗಿದ್ದ ಅವರು, ರಾಖಿ ಸಾವಂತ್‌ ಅಕಾಡೆಮಿ ಉದ್ಘಾಟನೆಗಾಗಿ ಹೋಗಿರುವುದಾಗಿ ತಿಳಿಸಿದ್ದರು.  ಗಂಡನ ಬಗ್ಗೆ ಮಾತನಾಡಿದ್ದ ಅವರು, 'ನನ್ನಂಥ ಉತ್ತಮ ನಡತೆಯ ಹಾಟ್‌ ಅಗಿರುವ ಹೆಂಡತಿಯನ್ನು ಬಿಟ್ಟು ಓಡಿಹೋಗಿದ್ದಾನೆ.. ಪಾಪ' ಎಂದಿದ್ದರು. ಭಾರತದಲ್ಲಿರುವ ಪತ್ರಕರ್ತರು, ಪಾಪರಾಜಿಗಳ ರೀತಿ ದುಬೈನಲ್ಲಿ ಕೂಡ ಪತ್ರಕರ್ತರು, ಪಾಪರಾಜಿ ಇರಬೇಕು, ಅದಕ್ಕೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ" ಎಂದು ರಾಖಿ ಸಾವಂತ್ ಹೇಳಿದ್ದರು. ಇವೆಲ್ಲಾ ಬೆಳವಣಿಗೆಯ ಬಳಿಕ ಮದುಮಗಳಂತೆ ಸಿಂಗರಿಸಿಕೊಂಡು ಮತ್ತೆ ಜೀವನದಲ್ಲಿ ಮದುವೆಯನ್ನೇ ಆಗುವುದಿಲ್ಲ ಎಂದು ಪಣತೊಟ್ಟಿದ್ದರು. ನಂತರ ನಾಟು ನಾಟು ಹಾಡಿಗೆ ಸ್ಟೆಪ್​ ಹಾಕಿ ಮುಂದಿನ ಆಸ್ಕರ್​ ತಮಗೇ ಎಂದಿದ್ದರು. 

Rakhi Sawant: ಮೈಸೂರಿನ ಜೈಲಿನಿಂದ ರಾಖಿಗೆ ಪತಿ ಆದಿಲ್​ ಶಾಕಿಂಗ್​ ​ ಮೆಸೇಜ್​!

ಇದೀಗ ರಾಖಿ ಸಾವಂತ್​  ಮತ್ತೊಮ್ಮೆ ಚರ್ಚೆಯಲ್ಲಿ ಇದ್ದಾರೆ. ಅದೇನೆಂದರೆ, ಇಸ್ಲಾಂ ಸ್ವೀಕರಿಸಿ ಫಾತಿಮಾ ಆದ ಬಳಿಕ ಪತಿಯನ್ನು ಜೈಲಿಗೆ ಅಟ್ಟಿರೋ ನಟಿಯೀಗ ರಂಜಾನ್​ ಆಚರಣೆ ಮಾಡುತ್ತಾರಂತೆ! ಈ ರಂಜಾನ್ (Ramdan) ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ ಹೋಗುತ್ತಾರಂತೆ.  ಮುಸ್ಲಿಮರಲ್ಲಿ ಪವಿತ್ರ ಎಂದು ಪರಿಗಣಿಸಲಾಗಿರುವ ಹಜ್ (Hajj) ತೀರ್ಥ ಯಾತ್ರೆಯ ಕಿರು ಸ್ವರೂಪ ಉಮ್ರಾ (Umrah). ಹಿಂದೂ ಧರ್ಮದಲ್ಲಿ ಹೇಗೆ ಕಾಶಿಯಾತ್ರೆ, ಕೇದಾರ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇದೂ ಸಹ.   ವೀಸಾ ಪಡೆಯುವ ಪ್ರಕ್ರಿಯೆಯಲ್ಲಿದ್ದು,  ಅದು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದು ಖಚಿತವಿಲ್ಲ ಎಂದಿರುವ ನಟಿ, ಉಮ್ರಾ ಭೇಟಿಗೆ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. 'ನನ್ನ ಖಾಲಿದ್ ಮಾಮು, ವಾಹಿದ್ ಭಾಯ್, ಜಾಮಾ ಮಸೀದಿಯಲ್ಲಿ ನನ್ನ ಅಫಿಡವಿಟ್ ಅನ್ನು ವೀಸಾಗಾಗಿ ತಯಾರಿ ಮಾಡುತ್ತಿದ್ದಾರೆ. ಇದಾಗಲೇ ತಾವು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿದ ನಟಿ, ಧರ್ಮ ಬದಲಾವಣೆಯ ಬಗ್ಗೆ  ಅಫಿಡವಿಟ್ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಅಲ್ಲಾನಿಗೆ ನಾನು ಉಮ್ರಾಗೆ ಹೋಗುವುದಕ್ಕೆ ಇಷ್ಟವಿದ್ದರೆ, ಖಂಡಿತವಾಗಿಯೂ ನನ್ನನ್ನು ಅಲ್ಲಿಗೆ ಕಳುಹಿಸುತ್ತಾನೆ ಎಂದು ರಾಖಿ ಹೇಳಿದ್ದಾರೆ. 

 ಉಮ್ರಾಗೆ ಹೋಗುವ ಕಾರಣವನ್ನೂ ಬಿಚ್ಚಿಟ್ಟಿರೋ ನಟಿ,  ಹಳೆಯ ನೋವುಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗಲು ಬಯಸುತ್ತೇನೆ, ಅದಕ್ಕಾಗಿ ಹೋಗುವುದಾಗಿ ಹೇಳಿದ್ದಾರೆ. ನನ್ನ ಪಾಪಗಳು ತೊಳೆದು ಹೋಗುವಂತೆ ರೋಜಾವನ್ನು ಸರಿಯಾಗಿ ಮಾಡುತ್ತೇನೆ.  ರಂಜಾನ್ ಸಮಯದಲ್ಲಿ ನಾನು ಉಮ್ರಾಗೆ ಹೋದರೆ, ನನ್ನ ಅದೃಷ್ಟ ಬದಲಾಗುತ್ತದೆ ಎಂದಿದ್ದಾರೆ. 'ನಾನು ಮೊದಲಿನಂತೆ ಸಂತೋಷವಾಗಿರಲ ಬಯಸುತ್ತೇನೆ, ನಾನು ಇನ್ನು ಮುಂದೆ ಅಳಲು ಬಯಸುವುದಿಲ್ಲ. ಜೀವನವು ಸುಂದರವಾಗಿರುವುದರಿಂದ ನಾನು ಮತ್ತೆ ನನ್ನ ಕಾಲುಗಳ ಮೇಲೆ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ. ಬಿಟ್ಟು ಹೋದವರ ಬಗ್ಗೆ ಅಳುವ ಅಗತ್ಯವಿಲ್ಲ. ಜೀವನವನ್ನು ನಾನು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇನೆ' ಎಂದು ರಾಖಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ರಂಜಾನ್​ಗೆ ಭಾರಿ ಸಿದ್ಧತೆಯನ್ನೂ ರಾಖಿ ಮಾಡಿಕೊಂಡಿದ್ದಾರೆ.   ರಂಜಾನ್ ತಿಂಗಳು ಶುರುವಾದಾಗ ನಾನು ಒಂದು ತಿಂಗಳ ಕಾಲ ತುಂಬಾನೇ ಜಾಗರೂಕಳಾಗಿರುತ್ತೇನೆ. ಇಡೀ ದಿನ ಹಸಿವಿನಿಂದ (hungry) ಇರಬೇಕು ಮತ್ತು ನಮಾಜ್ (Namaz) ಮಾಡಬೇಕಾಗುತ್ತದೆ, ಆದ್ದರಿಂದ  ಜಿಮ್ ಗೆ ಹೋಗುವುದಿಲ್ಲ ಎಂದಿದ್ದಾರೆ. 

ಮುಂದಿನ ಆಸ್ಕರ್​ ಅವಾರ್ಡ್​ ನನಗೇನೇ ಎಂದ ನಟಿ Rakhi Sawant!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?