ಪುನೀತ್ ರಾಜ್ ಕುಮಾರ್ ಅವ್ರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಅಭಿಮಾನಿಯೊಬ್ಬರು ಅಪ್ಪು ಅವರ ತದ್ರೂಪಿ ಸಿಲಿಕಾನ್ ಸ್ಟ್ಯಾಚು(Silicone Statue) ಮಾಡಿಸಿದ್ದಾರೆ.. ಕೆಂಪು ಸೋಫಾದಲ್ಲಿ ಆಸೀನರಾಗಿರುವ ಅಪ್ಪು(Appu) ಅವರ ಮೇಣದ ಪ್ರತಿಮೆ ನೋಡಿದರೆ ಮತ್ತೊಮ್ಮೆ ಅಪ್ಪು ನಮ್ಮ ಎದುರಿಗೆ ಇದ್ದಾರೆ ಅನ್ನುವಂತಹ ಭಾವ ಮೂಡುತ್ತದೆ.
ಬೆಂಗಳೂರು (ಮಾ.17) : ಪುನೀತ್ ರಾಜ್ ಕುಮಾರ್ ಅವ್ರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಅಭಿಮಾನಿಯೊಬ್ಬರು ಅಪ್ಪು ಅವರ ತದ್ರೂಪಿ ಸಿಲಿಕಾನ್ ಸ್ಟ್ಯಾಚು(Silicone Statue) ಮಾಡಿಸಿದ್ದಾರೆ.. ಕೆಂಪು ಸೋಫಾದಲ್ಲಿ ಆಸೀನರಾಗಿರುವ ಅಪ್ಪು(Appu) ಅವರ ಮೇಣದ ಪ್ರತಿಮೆ ನೋಡಿದರೆ ಮತ್ತೊಮ್ಮೆ ಅಪ್ಪು ನಮ್ಮ ಎದುರಿಗೆ ಇದ್ದಾರೆ ಅನ್ನುವಂತಹ ಭಾವ ಮೂಡುತ್ತದೆ.
ಬೆಂಗಳೂರಿನ ಪೀಣ್ಯ ಇಂಡಸ್ಟ್ರಿ(Peenya industry)ಯ ಉದ್ಯಮಿ ಅದ್ವಿಕ್ ಈ ಪ್ರತಿಮೆ ಮಾಡಿಸಿದ್ದು, ಖ್ಯಾತ ಶಿಲ್ಪ ಕಲಾವಿದರಾದ ಶ್ರೀಧರ್ ಮೂರ್ತಿ ಈ ಮೇಣದ ಪ್ರತಿಮೆಗೆ ಅಪ್ಪುವಿನ ಭಾವ ತುಂಬಿದ್ದಾರೆ ಸುಮಾರು ಎಂಟು ತಿಂಗಳ ಪರಿಶ್ರಮದ ಫಲವಾಗಿ ಈ ಪ್ರತಿಮೆ ಮೂಡಿ ಬಂದಿದ್ದು ಅಭಿಮಾನಿಗಳನ್ನು ಬಹುವಾಗಿ ಸೆಳೆಯುತ್ತಿದೆ.
Puneeth Rajkumar Birthday; ಅಪ್ಪು ಇಲ್ಲದೇ 2ನೇ ಜನ್ಮದಿನ; ಅಭಿಮಾನಿಗಳ ಭಾವುಕ ವಿಶ್
ಜೀವಂತ ಅಪ್ಪು ಸೋಫಾದಲ್ಲಿ ಕುಳಿತಿದ್ದಾರೇನೋ ಅನ್ನುವಂತೆ ಭಾಸವಾಗುತ್ತದೆ.. ಅವರ ನಗು, ಕಣ್ಣುಗಳಲ್ಲಿನ ಕಾಂತಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವಂತಿದೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Powerstar puneeth rajkumar birthday) ಹುಟ್ಟು ಹಬ್ಬ ಹಿನ್ನಲೆ, ಅಪ್ಪು ಮೇಣದ ಪ್ರತಿಮೆಯನ್ನು ಸಮಾಧಿ ಸ್ಥಳಕ್ಕೆ ಇರಿಸಲಾಗಿದ್ದು, ಅಭಿಮಾನಿಗಳಿಗೆ ಅಪ್ಪು ನಿಜ ದರ್ಶನ ನೀಡಲಿದ್ದಾರೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಗಂಧದ ಗುಡಿ ರಿಲೀಸ್; ಜನರಿಗೆ ಧನ್ಯವಾದ ತಿಳಿಸಿದ ದೊಡ್ಡ ಮನೆ ಸೊಸೆ ಅಶ್ವಿನಿ
ಇಂದು ಪುನೀತ್ 49ನೇ ಜನ್ಮದಿನ, ಹಲವೆಡೆ ಅಪ್ಪು ಉತ್ಸವ
ಬೆಂಗಳೂರು: ಇಂದು (ಮಾ.17) ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ 49ನೇ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ‘ಅಪ್ಪು ಉತ್ಸವ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಒಂದು ದಿನ ಮೊದಲೇ ರಾತ್ರಿ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಚಿತ್ರವನ್ನು ಪ್ರದರ್ಶನ ಆಯೋಜಿಸಲಾಗಿತ್ತು. ಪುನೀತ್ ಅವರ ಜನ್ಮದಿನ ಪ್ರಯುಕ್ತ ಅಭಿಮಾನಿಗಳು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಅಭಿಮಾನಿಗಳಿಗೆ ಅನ್ನದಾನ, ಶಾಲೆಗಳಿಗೆ ಪುಸ್ತಕ, ಸ್ಕೂಲ್ ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಬೆಳಗ್ಗೆ ಕುಟುಂಬ ಸದಸ್ಯರಿಂದ ಪೂಜೆ ನಡೆಯಲಿದೆ. ಪುನೀತ್ ಜನ್ಮದಿನದಂದೇ ಬಿಡುಗಡೆ ಆಗುತ್ತಿರುವ ‘ಕಬ್ಜ’ ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗಿದೆ.