ಸೆರಗು ಜಾರಬಾರದು ಅಂತಾನೇ ಸೇಫ್ಟಿ ಪಿನ್ ಇರೋದು, ರಾಖಿಗೆ ನೆಟ್ಟಿಗರ ಫ್ಯಾಷನ್ ಪಾಠ

Published : Jul 20, 2023, 03:19 PM IST
ಸೆರಗು ಜಾರಬಾರದು ಅಂತಾನೇ ಸೇಫ್ಟಿ ಪಿನ್ ಇರೋದು, ರಾಖಿಗೆ ನೆಟ್ಟಿಗರ ಫ್ಯಾಷನ್ ಪಾಠ

ಸಾರಾಂಶ

ಸೀರೆಯ ಸೆರಗಿಗೆ ಪಿನ್‌ ಹಾಕದೇ ವಿಮಾನ ನಿಲ್ದಾಣದಲ್ಲಿ ಡಾನ್ಸ್‌ ಮಾಡಿದ ರಾಖಿ ಸಾವಂತ್‌. ಬೀಳುತ್ತಿದ್ದ ಸೆರಗನ್ನು ನೋಡಿ ನೆಟ್ಟಿಗರು ಹೇಳಿದ್ದೇನು?    

ನಟಿ ರಾಖಿ ಸಾವಂತ್​ (Rakhi Sawant) ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದ ನಟಿ. ಚಿತ್ರಗಳಲ್ಲಿ ನಟಿಸಲು ಅವಕಾಶವಿಲ್ಲದ ಈ ನಟಿಗೆ ಅದಕ್ಕಿಂತಲೂ ಹೆಚ್ಚಿಗೆ ಪ್ರಚಾರ ನೀಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಈಕೆಯ ನಾಟ. ಡ್ರಾಮಾ ಕ್ವೀನ್‌ ಎಂದೇ ಫೇಮಸ್‌ ಆಗಿರುವ ನಟಿ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಇನ್ನೊಂದು ಅರ್ಥದಲ್ಲಿ ಸುದ್ದಿಯಾಗುವ ಸಲುವಾಗಿಯೇ ವಿವಾದ ಸೃಷ್ಟಿಸಿಕೊಳ್ಳುತ್ತಾರೆ, ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಸದಾ ಟ್ರೋಲ್​ ಆಗುತ್ತಲೇ ಖುಷಿ ಪಡುತ್ತಾರೆ.

ಮೈಸೂರಿನ ಯುವಕ ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಇವರ ಮದುವೆಯ ಕಥೆ ಈಗ ಹಳತಾಗಿದೆ.  ಆದಿಲ್​ ಖಾನ್​ ರಾಖಿಯನ್ನು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  

https://kannada.asianetnews.com/cine-world/rakhi-sawants-marriage-tips-for-rahul-gandhi-to-become-pm-suc-rxmupf

 ಮೊನ್ನೆಯಷ್ಟೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕಾದರೆ ಅವರು ಬಿಗ್‌ಬಾಸ್‌ಗೆ ಹೋಗಬೇಕು ಎಂದು ಭಾರಿ ಟ್ರೋಲ್‌ಗೆ ಒಳಗಾಗಿದ್ದರು. ಅದಕ್ಕೂ ಮುನ್ನ 15 ದಿನಗಳಲ್ಲಿ ಟೊಮ್ಯಾಟೋ ಬೆಳೆ ಬೆಳೆಯುವುದು ಹೇಗೆ ಎಂದು ಹುಚ್ಚುಚ್ಚಾಗಿ ವಿಡಿಯೋ ಮಾಡಿ ಟ್ರೋಲ್‌ (Troll) ಆಗಿದ್ದರು. ಆದಿಲ್‌ ಖಾನ್‌ ತಮಗೆ ಮೋಸ ಮಾಡಿರುವ ಕಾರಣ ಮದುವೆಯೇ ಆಗಲ್ಲ ಎಂದು ಹೇಳಿದ್ದ ರಾಖಿ, ಕೊನೆಗೆ ಹೊಸ ಹುಡುಗ ಸಿಕ್ಕನೆಂದೂ, ಆತನ ಜೊತೆ ಚೆನ್ನಾಗಿ ಇರಲು ಸ್ವಾಮೀಜಿಯೊಬ್ಬರ ಸಲಹೆಯಂತೆ ತಲೆಯ ಮೇಲೆ ಮೊಟ್ಟೆ ಒಡೆದುಕೊಂಡಿರುವುದಾಗಿ ಹೇಳಿ ಅದರ ವಿಡಿಯೋ ಮಾಡಿ ಟ್ರೋಲ್‌ ಆಗಿದ್ದರು. ಹೀಗೆ ರಾಖಿ ಸಾವಂತ್‌ ಟ್ರೋಲ್‌ ಅನ್ನು ಸಕತ್‌ ಎಂಜಾಯ್‌ ಮಾಡುತ್ತಿರುವಂತೆ ಕಾಣುತ್ತಿದೆ.

ಇದೀಗ ಸೀರೆ ಉಟ್ಟು ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ, ಸ್ಲೀಲೆಟ್‌ ಬ್ಲೌಸ್‌ (Sleeveless Blouse) ಧರಿಸಿ, ಸೆರಗಿಗೆ ಪಿನ್‌ ಹಾಕಿಕೊಳ್ಳದೇ ವಿಮಾನ ನಿಲ್ದಾಣದಲ್ಲಿ ಡಾನ್ಸ್‌ ಮಾಡಿದ್ದಾರೆ. 1996 ರಲ್ಲಿ ಬಿಡುಗಡೆಯಾಗಿರುವ ಮೇರಾ ಸಾಯಾ ಚಿತ್ರದ ಫೇಮಸ್‌ ಗಾಯನವಾಗಿರುವ ಝುಮ್ಕಾ ಗಿರಾ ರೇ ಹಾಡಿಗೆ ರಾಖಿ ಡಾನ್ಸ್‌ ಮಾಡಿದ್ದಾರೆ. ಸಹಜವಾಗಿ ಈ ಡಾನ್ಸ್‌ ಮಾಡುವಾಗ ಅವರ ಸೆರಗು ಜಾರಿಗೆ. ತಾವೇ ಹಾಡು ಹೇಳುತ್ತಾ ಈ ಡಾನ್ಸ್‌ ಮಾಡಿದ್ದಾರೆ. ಅಸಲಿಗೆ ಹಾಡಿನಲ್ಲಿ ಝುಮಕಿ ಬೀಳುತ್ತದೆ ಎಂದಿದ್ದರೂ ಅಲ್ಲಿ ಬಿದ್ದುದು ಪಿನ್‌ ಹಾಕದ ಅವರ ಸೀರೆಯ ಸೆರಗು. ಇದರಿಂದ ರಾಖಿ (ಅವರ ಇಷ್ಟದಂತೆ?) ಪುನಃ ಟ್ರೋಲ್‌ಗೆ ಒಳಗಾಗಿದ್ದಾರೆ. ಝುಮ್ಕಾ ಗಿರಾ ರೇ ಎನ್ನುತ್ತ ಸೀರೆಯ ಸೆರಗನ್ನೇ ಬೀಳಿಸ್ತಿದ್ದರಲ್ಲಾ ಮೇಡಂ ಎಂದು ಹಲವರು ಕೇಳಿದ್ದರೆ, ಸೇಫ್ಟಿ ಪಿನ್ ಹಾಕದೇ ಯಾರೂ ಸೀರೆ ಉಡೋಲ್ಲ ಎಂದು ಇನ್ನು ಕೆಲವರು ರಾಖಿಗೆಫ್ಯಾಷನ್ ಪಾಠ ಮಾಡಿದ್ದಾರೆ. ಎಲ್ಲವನ್ನೂ ತೋರಿಸುವುದಕ್ಕಾಗಿಯೇ, ತಮ್ಮ ದೇಹವನ್ನು ಪ್ರದರ್ಶನ ಮಾಡುವುದಕ್ಕಾಗಿಯೇ ಸೇಫ್ಟಿ ಪಿನ್‌ ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದೂ ಕೆಲವರು ಹೇಳಿದ್ದು, ಇನ್ನು ಕೆಲವು ರಾಖಿ ಫ್ಯಾನ್ಸ್‌ (Fans) ಈಕೆಯ ಎನರ್ಜಿಯನ್ನು ಕೊಂಡಾಡಿದ್ದಾರೆ.

ರಾಖಿ ಸಾವಂತ್​ ಟೊಮ್ಯಾಟೊ ಕೃಷಿ: 15 ದಿನದಲ್ಲೇ ಫಲ! ವಿಡಿಯೋ ನೋಡಿ ನೆಟ್ಟಿಗರು ಕಿಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?