ಅನೇಕ ವರ್ಷಗಳ ನಂತ್ರ ಇಂಡಿಯಾಗೆ ಕಾಲಿಟ್ಟ 'ವಿಲನ್' ನಾಯಕಿ ಆ್ಯಮಿ ಜಾಕ್ಸನ್

Published : Jul 19, 2023, 07:53 PM IST
ಅನೇಕ ವರ್ಷಗಳ ನಂತ್ರ ಇಂಡಿಯಾಗೆ ಕಾಲಿಟ್ಟ 'ವಿಲನ್' ನಾಯಕಿ ಆ್ಯಮಿ ಜಾಕ್ಸನ್

ಸಾರಾಂಶ

ಆ್ಯಮಿ ಜಾಕ್ಸನ್ ಅನೇಕ ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾರೆ. ಆ್ಯಮಿ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿವೆ. ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲು ಸಜ್ಜಾಗಿದ್ದಾರೆ. 

ವಿಲನ್.. ಶಿವಣ್ಣ - ಕಿಚ್ಚ ಸುದೀಪ್ ನಟನೆಯ ಮೆಗಾ ಕಾಂಬೋ ಪಿಚ್ಚರ್. ಶಿವಣ್ಣ - ಕಿಚ್ಚನ 'ಕಿಚ್ಚಿನ ಕಥೆ'ಯ ಮಧ್ಯೆಯೂ 'ನೋಡಿವಳಂದಾನ' ಅಂತಾ ಎಲ್ಲರ ಗಮನ ಸೆಳೆದಿದ್ದು ನಾಯಕಿ ಆ್ಯಮಿ ಜಾಕ್ಸನ್.. ಚೊಚ್ಚಲ ಕನ್ನಡ ಸಿನಿಮಾವಾದ್ರೂ ನಟನೆ, ಸೌಂದರ್ಯದಿಂದ ಉಬ್ಬೇರಿಸಿದ್ರು. ಅಂದ್ಹಾಗೆ ವಿಲನ್ ರಿಲೀಸ್ ಆಗಿದ್ದೇ ಆಯ್ತು, ಆನಂತರದಲ್ಲಿ ಆ್ಯಮಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಎಲ್ಲೋ ವಿದೇಶ ಪ್ರವಾಸದಲ್ಲಿ ಬ್ಯುಸಿ ಇರಬೋದು, ಅಂದುಕೊಂಡಿದ್ರು. ಆದರೆ ಕೆಲ ತಿಂಗಳ ಗ್ಯಾಪ್ನಲ್ಲಿ ಫಾರೀನ್ ಡಾರ್ಲಿಂಗ್ ಜೊತೆ ಫೋಟೊ ಹಾಕಿ ಸಿನಿಟೌನ್ನಲ್ಲಿ ಸುದ್ದಿಯಾಗಿದ್ರು. 

ನೋಡ ನೋಡ್ತಿದ್ದಂತೆ ಮಗು ನಿರೀಕ್ಷೆಯ ಫೋಟೊ ಹಾಕಿ ಗಲ್ಲಿ ಗಾಸಿಪ್ ಆಗಿದ್ರು. ಮದುವೆಗೂ ಮುನ್ನ ಮಗು ಮಾಡಿಕೊಂಡಿದ್ದೇ ಗಲ್ಲಿ ಗಾಸಿಪ್ಗೆ ಕಾರಣ ಆಗಿತ್ತು.  ಅಂದ್ಹಾಗೆ ಈಗ್ಯಾಕಪ್ಪ ಆ್ಯಮಿ ಜಾಕ್ಸನ್ ಕುರಿತು ಚರ್ಚೆ ಅಂದ್ರೆ, ಸುಮಾರು ಐದು ವರ್ಷಗಳ ನಂತ್ರ ಆ್ಯಮಿ ಭಾರತಕ್ಕೆ  ಕಾಲಿಟ್ಟಿದ್ದಾರೆ. ಈ ಭೇಟಿ ಬಗ್ಗೆ ಖುದ್ದಾಗಿ ಆ್ಯಮಿಯೂ ಖುಷಿ ಹಂಚಿಕೊಂಡಿದ್ದು, ವರ್ಷಗಳ ನಂತ್ರ ಭಾರತಕ್ಕೆ ಬಂದಿರೋದು ಖುಷಿಕೊಟ್ಟಿದೆ ಅಂದಿದ್ದಾರೆ.

ಆ್ಯಮಿ ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪಾಪರಾಜಿಗಳು ಮುಗಿಬಿದ್ದರು. ಮುಂಬೈ ಏರ್ಪೋರ್ಟ್ ನಲ್ಲಿ ಆ್ಯಮಿ ಜಾಕ್ಸನ್ ಎಂಟ್ರಿ ಕೊಟ್ಟಿರುವ ಫೋಟೋಗಳು ವೈರಲ್ ಆಗಿವೆ. ಆ್ಯಮಿ ಭೇಟಿ ಬಳಿಕ ಆಕೆಯ ಮುಂದಿನ ಸಿನಿಮಾ ಬಗ್ಗೆಯೂ ಸುದ್ದಿ ಶುರುವಾಗಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಬೆಳ್ಳಿ ತೆರೆಗೆ ವಾಪಸ್ಸಾಗಲು, ಆ್ಯಮಿ ಭಾರತಕ್ಕೆ ಬಂದಿಳಿದಿದ್ದಾರೆ ಎನ್ನಲಾಗುತ್ತಿದೆ.

ಪತ್ನಿಯಿಂದ ಬೇರ್ಪಟ್ಟು, ಗುಟ್ಟಾಗಿ ಈ ನಟಿಯ ಜೊತೆ ಪ್ರತೀಕ್ ಬಬ್ಬರ್ ಡೇಟಿಂಗ್

ತಮಿಳಿನ 'ಮಿಷನ್ ಚಾಪ್ಟರ್ 1- ಅಚಂ ಎನ್ಬತ್ತು ಇಲ್ಲೈ' ಸಿನಿಮಾ ಕಂಪ್ಲೀಟ್ ಆಗಿದ್ದು, ಬಣ್ಣದ ಮೂಲಕ ಮತ್ತೆ ಜನರೆದುರು ಬರೋ ಸೂಚನೆ ಕೊಟ್ಟಿದ್ದಾರೆ. ಕೊನೆಯದಾಗಿ ಆ್ಯಮಿ ಜಾಕ್ಸನ್ ದಿ ವಿಲನ್ ಸಿನಿಮಾ ಮೂಲಕ ಕಾಣಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟಿಸಿದ್ದರು. ಈ ಸಿನಿಮಾ ಬಳಿಕ ಅ್ಯಮಿ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ.

ಎಲ್ಲಿ ನೋಡಿದ್ರೂ ಮುತ್ತು ಕೊಡೋದೇ; ಜೋಗಿ ಪ್ರೇಮ್ ನಾಯಕಿ ಆ್ಯಮಿ ಜಾಕ್ಸನ್‌ ಕಾಲೆಳೆದ ನೆಟ್ಟಿಗರು

ಮದ್ರಾಸಪಟ್ಟಿನಂ ಎನ್ನುವ ತಮಿಳು ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಕಾಣಿಸಿಕಂಡರು. ಬಳಿಕ ಹಿಂದಿಗೆ ಹಾರಿದರು. ಬಳಿಕ ತಮಿಳು ಮತ್ತು ತೆಲುಗು ಎರಡು ಸಿನಿಮಾಗಳಲ್ಲಿ ಬ್ಯುಸಿಯಾದರು. ಬಳಿಕ ದಿಢೀರ್ ಮಗುಮಾಡಿಕೊಂಡು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ ಆ್ಯಮಿ. ಇದೀಗ ಮತ್ತೆ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ.    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೆಜಿಎಫ್, ಬಾಹುಬಲಿ ಚಿತ್ರಗಳನ್ನು ಮೂಲೆಗೆ ತಳ್ಳಿ ಭಾರತದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿದ ಧುರಂಧರ್!
OTTಗೆ ಎಂಟ್ರಿ ಕೊಟ್ಟ ಥ್ರಿಲ್ಲರ್ ಸಿನಿಮಾಗಳು Do Not Miss It