ಫ್ಯಾನ್‌ಗೆ ಹೆದರಿ ಬಾಂಬ್​ ಬಿದ್ದವರಂತೆ ಸ್ಟೇಜಿಂದ ಎದ್ದು ಬಿದ್ನೋ ಓಡಿದ ವಿಜಯ್​ ದೇವರಕೊಂಡ!

By Suvarna News  |  First Published Jul 20, 2023, 11:54 AM IST

ವೇದಿಕೆಯೇರಿದ ಅಭಿಮಾನಿಗೆ ಹೆದರಿ ನಟ ವಿಜಯ್​ ದೇವರಕೊಂಡ ಎದ್ದು ಬಿದ್ದು ಓಡಿಹೋಗಿದ್ದೇಕೆ?
 


ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.  ಈ ಚಿತ್ರದ ಮೊದಲ ಹಾಡು ಕಳೆದ ಮೇ 9ರಂದು ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಹುಟ್ಟುಹಬ್ಬಕ್ಕೆ ಗಿಫ್ಟ್​ ಆಗಿ ನೀಡಲಾಗಿತ್ತು. ಅದಾದ ಬಳಿಕ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಸಮಂತಾ (Samanta) ನಾಯಕಿಯಾಗಿ ನಟಿಸಿದ್ದಾರೆ. ಬಹಳ ಪ್ರೀತಿಸುವ ಇಬ್ಬರು ಪರಸ್ಪರ ಮದುವೆಯಾಗಿ ಸುಖ ಸಂಸಾರ ಸಾಗಿಸುವ ಆ ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಅದನ್ನು ಆ ಜೋಡಿ ಹೇಗೆ ಹ್ಯಾಂಡಲ್ ಎಂಬುದರ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಮಂತಾ ಅನಾರೋಗ್ಯದ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಿದೆ. ಆದರೆ ಇದೀಗ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಈ ನಡುವೆಯೇ, ವಿಜಯ್​ ದೇವರಕೊಂಡ (Vijay Deverakonda) ಅವರು ಅಭಿಮಾನಿಯೊಬ್ಬರಿಗೆ ಹೆದರಿ ಎದ್ದು ಬಿದ್ದು ಓಡಿಹೋಗಿರುವ ವಿಡಿಯೋ ಒಂದು ಸಕತ್​ ವೈರಲ್​ ಆಗಿದೆ. ವಿಜಯ್​ ಅವರಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಹೋದಲ್ಲಿ, ಬಂದಲ್ಲಿ ಅವರನ್ನು ಸುತ್ತುವರಿಯುವವರೇ ಹೆಚ್ಚು. ಆದರೆ ಇಲ್ಲಿ ಆದದ್ದೇ ಬೇರೆ. ವಿಜಯ್ ದೇವರಕೊಂಡ ವೇದಿಕೆಯೊಂದರ ಮೇಲೆ ನಿಂತು ಮಾತನಾಡುತ್ತಿದ್ದರು. ಆಗ  ಅಭಿಮಾನಿಯೊಬ್ಬ ಥಟ್ಟನೆ ವೇದಿಕೆ ಏರಿ  ಕಾಲು ಹಿಡಿಯಲು ಬಂದಿದ್ದಾರೆ. ಆ ಸಮಯದಲ್ಲಿ ನಟ ವಿಜಯ್ ದೇವರಕೊಂಡ ಕೈಯಲ್ಲಿ ಮೈಕ್​ ಇತ್ತು. ಆ ಅಭಿಮಾನಿಯ ಪರಿ ನೋಡಿ, ಮೈಕ್​ ಸಹಿತ ವೇದಿಕೆಯಲ್ಲಿ ನಟ ಪರಾರಿಯಾಗಿದ್ದು, ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ವಿಡಿಯೋ ನೋಡಿ ಜನರು ಬಿದ್ದೂ ಬಿದ್ದೂ ನಗುವಂತಾಗಿದೆ.

Tap to resize

Latest Videos

ವಿಜಯ್​ ದೇವರಕೊಂಡ ಮದ್ವೆಯಾದ್ಮೇಲೆ ಪ್ರೀತಿ, ಪ್ರೇಮ, ರೊಮ್ಯಾನ್ಸ್​ ಹೀಗಿರತ್ತಂತೆ!

ಅಷ್ಟಕ್ಕೂ ವಿಜಯ್ ದೇವರಕೊಂಡ ಅವರು ತಮ್ಮ  ತಮ್ಮನ ಸಿನಿಮಾದ ಬೇಬಿಯ ಸಕ್ಸಸ್​ ಮೀಟ್​ನಲ್ಲಿ ಮಾತನಾಡುತ್ತಿದ್ದರು. ಒಬ್ಬ ಯುವ ಅಭಿಮಾನಿ ವೇದಿಕೆಗೆ ಜಂಪ್ ಮಾಡಿ ನಟನ ಕಾಲು ಮುಟ್ಟಲು ಬಂದಿದ್ದಾರೆ. ಆದರೆ ಈ ದಿಢೀರ್ ಬೆಳವಣಿಗೆಯಿಂದ ಹೆದರಿಸಿದ ನಟ ಹೆದರಿ ಹಿಂದಕ್ಕೆ ಓಡಿದ್ದಾರೆ. ವೇದಿಕೆಯ ಮೇಲೆ ಇದ್ದವರೂ ನಕ್ಕಿದ್ದಾರೆ. ಆದರೆ ಆ ಕ್ಷಣದಲ್ಲಿ ವಿಜಯ್​ ಅವರ ಮಾಡಿದ್ದನ್ನು ನೋಡಿ ಎಂಥವರಿಗೂ ನಗು ಬಾರದೇ ಇರದು. ಇದನ್ನು ನೋಡಿ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತದೆ.  ಅನಕೊಂಡ ಬಂದಂತೆ ಹೆದರುತ್ತಿದ್ದೀರಲ್ಲಾ ಎಂದು ಟ್ರೋಲ್​ಮಾಡಲಾಗುತ್ತಿದೆ. ಓರ್ವ ಯುವಕ ಫ್ಯಾನ್​ಗೆ ಇಷ್ಟು ಹೆದರಿದರೆ ಗತಿಯೇನು ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.  ಫ್ಯಾನ್ಸ್​ ಆಶಿರ್ವಾದ ಮಾತ್ರ ಮಾಡುತ್ತಾರೆ. ಅವರಿಂದ ಹೆದರಿ ಓಡುವುದೇಕೆ, ಕನಿಷ್ಠ ಅವರನ್ನು ಅಭಿನಂದಿಸಿ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಫ್ಯಾನ್​ಗೆ ಹೀಗೆ ಹೆದರಿದ್ರೆ ಬಾಂಬ್​ (Bomb) ಬಿದ್ರೆ ಏನ್​ ಮಾಡ್ತಿದ್ರಿ ಎಂದು ಪ್ರಶ್ನಿಸಿದ್ದಾನೆ.

 

ಇತ್ತೀಚೆಗಷ್ಟೇ ವಿಜಯ್​ ದೇವರಕೊಂಡ ಅವರು ತಮ್ಮ ಮದುವೆಯ ಕನಸಿನ ಬಗ್ಗೆ ಮಾತನಾಡಿದ್ದರು. ನಟಿ ರಶ್ಮಿಕಾ ಮಂದಣ್ಣ ಜೊತೆ  ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದರೂ, ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅನ್ನಲಿಲ್ಲ. ಆದರೆ ಇದರ ನಡುವೆಯೇ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಒಂದೊಮ್ಮೆ ನಾನು ಮದುವೆಯಾದರೆ ನನ್ನ ವೈವಾಹಿಕ ಜೀವನ ಹೀಗಿರಬೇಕೆಂದು ಉದಾಹರಣೆಯೊಂದನ್ನು ಸಹ ನೀಡಿದ್ದರು. ಖುಷಿಯ ಹಾಡೊಂದರಲ್ಲಿ ಬರುವ ದೃಶ್ಯದಂತೆ ತಮ್ಮ ಜೀವನ ಇರಬೇಕು ಎಂದಿದ್ದರು. 

ಇದೇನಿದು ಮದ್ವೆ ಬಗ್ಗೆ ಮಾತನಾಡ್ತಿದ್ದಾರೆ ದೇವರಕೊಂಡ, ಹುಡುಗಿ ಯಾರೋ?

 

click me!