ಉಫ್​... ನಟಿ ನೇಹಾ ಶರ್ಮಾ ತೋರಿಸ್ತಿರೋದೇನು? ನೆಟ್ಟಿಗರು ತಿಳ್ಕೊಂಡಿರೋದೇನು? ಛೇ..ಛೇ...

By Suchethana DFirst Published Aug 8, 2024, 2:20 PM IST
Highlights

ನಟಿ ನೇಹಾ ಶರ್ಮಾ ಮಾದಕ ಭಂಗಿಯಲ್ಲಿ ವಿಡಿಯೋಶೂಟ್​ ಮಾಡಿಸಿಕೊಂಡಿದ್ದಾರೆ. ಆದರೆ ಇದರಲ್ಲಿ ಇವರು ತೋರಿಸ್ತಿರೋದೇ ಬೇರೆ! 
 

ಬಾಲಿವುಡ್​ ನಟಿ ನೇಹಾ ಶರ್ಮಾ ಹಾಟ್​ ಫೋಟೋಶೂಟ್​ ಮಾಡಿಕೊಳ್ಳುವ ಮೂಲಕ ಸಕತ್​ ಸೌಂಡ್​ ಮಾಡ್ತಿರೋರು ನಟಿ ನೇಹಾ ಶರ್ಮಾ. ಇದೀಗ ಇದೇ ರೀತಿ ವಿಡಿಯೋ ಮಾಡಿ ಹರಿಬಿಟ್ಟು ಅಭಿಮಾನಿಗಳ ತಲೆ ಕೆಡಿಸಿದ್ದಾರೆ. ಡೀಪ್​ನೆಕ್​ ಡ್ರೆಸ್​ ಹಾಕಿಕೊಂಡು ಮಾದಕ ಭಂಗಿಯಲ್ಲಿ ವಿಡಿಯೋಶೂಟ್​ ಮಾಡಿಸಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿಯ ವಿಡಿಯೋ ಮಾಡಿರುವ ನೇಹಾ ಶರ್ಮಾ, ನೆಕ್​ಲೆಸ್​ ತೋರಿಸುವ ನೆಪ ಮಾಡಿದ್ದಾರಷ್ಟೇ. ಆದರೆ ಈ ವಿಡಿಯೋದಲ್ಲಿ ನಟಿಯ ನೆಕ್​ಲೆಸ್​ ಕಾಣಿಸ್ತನೇ ಇಲ್ಲ. ಇದೇ ಕಾರಣಕ್ಕೆ ನಟಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಚಿಕ್ಕದಾಗಿ ಕಣ್ಣಿಗೆ ಕಾಣಿಸದಷ್ಟು ಚಿಕ್ಕ ನೆಕ್​ಲೆಸ್​ ಹಾಕಿಕೊಂಡಿರುವ ನಟಿ ಅದನ್ನು ತೋರಿಸುವ ನೆಪದಲ್ಲಿ ಅಂಗ ಪ್ರದರ್ಶನ ಮಾಡುತ್ತಿದ್ದು, ಅದರ ಬಗ್ಗೆ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. 

ಅಷ್ಟಕ್ಕೂ, ನಟಿ ನೇಹಾ ಶರ್ಮಾ ಚುನಾವಣೆ ಸಂದರ್ಭದಲ್ಲಿ ಭಾರಿ ಚರ್ಚೆಯಲ್ಲಿದ್ದವರು. ಇವರ ತಂದೆ ಕಾಂಗ್ರೆಸ್​  ಮುಖಂಡರಾಗಿರುವ ಅಜಯ್ ಶರ್ಮಾ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಮಗಳನ್ನೇ ನಿಲ್ಲಿಸುವುದಾಗಿ ಅಜಯ್​ ಶರ್ಮಾ ಚುನಾವಣೆಗೂ ಮುನ್ನವೇ ಘೋಷಿಸಿದ್ದರು. ಬಿಹಾರದ ಭಾಗಲ್ಪುರವನ್ನು ಪ್ರತಿನಿಧಿಸುವ ಶಾಸಕ ಅಜಯ್ ಶರ್ಮಾ ಅವರು, ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಭಾಗಲ್ಪುರ ಕ್ಷೇತ್ರ ಸಿಕ್ಕರೆ ತಮ್ಮ ಮಗಳೇ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ ಅವರಿಗೆ ಟಿಕೆಟ್​ ಸಿಕ್ಕಿರಲಿಲ್ಲ. ಇದೀಗ ಚುನಾವಣೆ ಮುಗಿದ ಮೇಲೆ ಮತ್ತೆ ಸಿನಿಮಾದತ್ತ ಗಮನ ನೆಟ್ಟಿದ್ದಾರೆ ನೇಹಾ . ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ನಟಿ, ಆಗಾಗ್ಗೆ ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. 

Latest Videos

ದೀಪಿಕಾ-ರಣವೀರ್​ಗೆ ಗಂಡು ಮಗು, ಅಲ್ಲಲ್ಲಾ ಅದು ಹೆಣ್ಣು... ಮಗುವಿನ ಅಸಲಿಯತ್ತು ತಿಳಿದು ಫ್ಯಾನ್ಸ್ ಶಾಕ್​!

ಇತ್ತೀಚೆಗೆ  ನಟಿ ನೇಹಾ ಶರ್ಮಾ (Neha Sharma) ಅವರು ಕೂಡ ಐಸ್ ಬಾತ್ ಮಾಡಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ಆದರೆ ಅದರಲ್ಲಿ ಅವರು ಉಟ್ಟ ಕನಿಷ್ಠ ಬಟ್ಟೆಯ ಬಗ್ಗೆ ಸಕತ್​ ಟ್ರೋಲ್​ ಆಗಿತ್ತು. ಅಷ್ಟಕ್ಕೂ ಇಂದಿನ ನಟಿಯರು ತುಂಡುಡುಗೆಯಲ್ಲಿ ಫೇಮಸ್​ ಆಗುವುದು ಹೆಚ್ಚಾಗಿರುವ ಕಾರಣ, ಅಂಥದ್ದೇ ಬಟ್ಟೆಯನ್ನು ಬಳಸಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಾರೆ. ಅದರಂತೆಯೇ ನೇಹಾ ಕೂಡ ಆಗಾಗ್ಗೆ ಇಂಥ ಬಟ್ಟೆ ತೊಟ್ಟು ಫೋಟೋಶೂಟ್​ ಮಾಡಿಸಿಕೊಂಡು ಟ್ರೋಲ್​ಗಳಿಂದಲೇ ಫೇಮಸ್​ ಆಗುತ್ತಿರುವವರು. 

ಕೊನೆಗೆ ಅವರು ವರ್ಕೌಟ್​ ಮಾಡುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ಇದರ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಅವರ ಜಿಮ್​ ತರಬೇತುದಾರ ಹಿಂದಿನಿಂದ ನಟಿಯ ಸೊಂಟವನ್ನು ಹಿಡಿದು ವರ್ಕ್​ಔಟ್​ ಮಾಡಿಸುತ್ತಿದ್ದಾರೆ. ಆದರೆ ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನಟಿಯ ವಿರುದ್ಧ ಹಲವಾರು ರೀತಿಯ ನೆಗೆಟಿವ್​ ಕಮೆಂಟ್ಸ್​ ಬಂದಿದ್ದವು. ವರ್ಕ್​ಔಟ್​ ಮಾಡುವುದಾದರೆ ಅದನ್ನು ಸೀಕ್ರೇಟ್​ ಆಗಿ ಇಟ್ಟುಕೊಳ್ಳಿ. ಈ ರೀತಿ ಟಾಂ ಟಾಂ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದರು. ಇನ್ನು ಕೆಲವರು ನಿಮ್ಮ ಜಿಮ್​ ತರಬೇತುದಾರ ಏನು ಮಾಡುತ್ತಿದ್ದಾನೆ ಎನ್ನುವುದು ತಿಳಿಯದೇ ಕನ್​ಫ್ಯೂಸ್​ ಆಗೋಯ್ತು ಎಂದು ಕೆಲವರು ನಟಿಯ ಕಾಲೆಳೆದಿದ್ದರೆ,   ಅಂಗಾಂಗ ಪ್ರದರ್ಶನ ಮಾಡದೆಯೂ  ವರ್ಕ್​ಔಟ್​ ಮಾಡಬಹುದು ಎಂದು ಮತ್ತೆ ಕೆಲವರು ಹೇಳಿದ್ದರು.  . ಇದೀಗ ಹಲವು ನಟಿಯರು ತಮ್ಮ ಜಿಮ್​, ವ್ಯಾಯಾಮ, ವರ್ಕ್​ಔಟ್​ ವಿಡಿಯೋಗಳನ್ನು ಶೇರ್​ ಮಾಡುವುದು ಮಾಮೂಲು. ಆದರೆ ಕೆಲವರನ್ನು ಪ್ರಶಂಸಿಸುವ ನೆಟ್ಟಿಗರು, ಮತ್ತೆ ಕೆಲವರ ಮೇಲೆ ಅದ್ಯಾಕೆ ಕಿಡಿ ಕಾರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ನೇಹಾ ಅವರ ವಿಡಿಯೋ ಸಕತ್​ ಟ್ರೋಲ್​ ಆಗುತ್ತಿದೆ. 

ಇನ್ನು ನೇಹಾ ಶರ್ಮಾ ಅವರ ಚಿತ್ರರಂಗದ ಕುರಿತು ಹೇಳುವುದಾದರೆ, ಇವರು ಸಿನಿಮಾಕ್ಕೆ ಪದಾರ್ಪಣೆ ಮಾಡಿದ್ದು  2007ರಲ್ಲಿ. ‘ಚಿರುತಾ’ ಅವರ ನಟನೆಯ ಮೊದಲ ಸಿನಿಮಾ. ಇದು ತೆಲುಗು ಸಿನಿಮಾ ಆಗಿತ್ತು. ‘ತೆರಿ ಮೇರಿ ಕಹಾನಿ’ ಚಿತ್ರದ ಮೂಲಕ ಅವರು ಬಾಲಿವುಡ್​ಗೆ ಎಂಟ್ರಿ ಕೊಟ್ಟರು.  ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ನೇಹಾ ಶರ್ಮಾ ನಟಿಸಿದ್ದಾರೆ. ಈ ವರ್ಷ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಅದಾದ ಬಳಿಕ  ಸ್ವಿಮ್ ಸೂಟ್​ ಹಾಕಿಕೊಂಡು  ಐಸ್ ಬಾತ್ ಮಾಡಿ ಟ್ರೋಲ್​ನಿಂದಲೇ ಫೇಮಸ್​  ಆಗಿದ್ದರು. ಇದೀಗ ಈ ರೀತಿಯ ವರ್ಕ್​ಔಟ್​ ಪೋಸ್​ನಲ್ಲಿ ಮತ್ತಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

ವಿನೇಶ್​ ಫೋಗಟ್​ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್​ ರಾಜ್​ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!

 

click me!