ಕುಸ್ತಿಪಟು ವಿನೇಶ್ ಫೋಗಾಟ್ ಅನರ್ಹತೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣವೆಂದು ಟೀಕಿಸಿದ ನಟ ಪ್ರಕಾಶ್ ರಾಜ್ ಒಬ್ಬ ಅಜ್ಞಾನಿ ಎಂದು ನಟ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ.
ಬೆಂಗಳೂರು (ಆ.08): ಪ್ಯಾರಿಸ್ ಒಲಿಂಪಿಕ್ಸ್-2024ರ ಕುಸ್ತಿ ಪಂದ್ಯದ ಫೈನಲ್ ಪ್ರವೇಶಕ್ಕೆ ಭಾರತದ ಕುಸ್ತಿಪಟು ವಿನೇಶ್ ಫೋಗಾಟ್ ಅನರ್ಹತೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣವೆಂದು ಟೀಕೆ ಮಾಡಿದ ನಟ ಪ್ರಕಾಶ್ ರಾಜ್ ಒಬ್ಬ ಅಜ್ಞಾನಿ. ಅವರೊಬ್ಬ ಕೆಟ್ಟ ಹೋರಾಟಗಾರ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತದೆ. ಇದು ಸಣ್ಣತನ ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರಾಯ್ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರ' ಎಂದು ಟೀಕೆ ಮಾಡಿದ್ದಾರೆ.
undefined
ವಿನೇಶ್ ಫೋಗಟ್ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್ ರಾಜ್ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!
ಇನ್ನು ಟೀಕೆಗೆ ಕಾಮೆಂಟ್ ಮೂಲಕ ಉತ್ತರಿಸಿದ ನೆಟ್ಟಿಗರು 'ಒಂದು ಉದಾಹರಣೆಯನ್ನು ಇಟ್ಟುಕೊಂಡು ಕೆಟ್ಟ ಹೋರಾಟಗಾರ ಎಂಬ ಹಣಪಟ್ಟಿ ಕಟ್ಟುವುದು ಸರಿಯಲ್ಲ ಸರ್. ಅಂದರೆ ನಟ, ಹೋರಾಟಗಾರಾದ ಪ್ರಕಾಶ್ ರಾಜ್ ಅವರ ಎಲ್ಲಾ ಹೋರಾಟಗಳು ಕೆಟ್ಟ ಹೋರಾಟಗಳು ಎನ್ನುವಂತಿದೆ ಎಂದಿದ್ದಾರೆ. ಮತ್ತೊಬ್ಬರು ವಿನೇಶ್ ಫೋಗಾಟ್ ಅನರ್ಹತೆಗೆ ಪ್ರಕಾಶ್ ರಾಜ್ ಎಲ್ಲಿಯೂ ಮೋದಿ ಹೆಸರನ್ನು ಮೆನ್ಷನ್ ಮಾಡಿಲ್ಲ. ಆದರೆ, ಇವಾಗ ನೀವೇ ಮೋದಿ ಅಂತ ಮೆನ್ಷನ್ ಮಾಡುತ್ತಿದ್ದೀರಿ. ಪ್ರಕಾಶ್ ರೈ ಒಳ್ಳೆಯ ಹೋರಾಟಗಾರ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದತ್ತ ದಾಪುಗಾಲು ಇಟ್ಟಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಕೊನೆ ಕ್ಷಣದಲ್ಲಿ ಅನರ್ಹರಾಗಿದ್ದಾರೆ. 2016ರಲ್ಲಿಯೂ ಇದೇ ರೀತಿ ತೂಕದ ವಿಷಯದಲ್ಲಿ ಅವಕಾಶ ಕಳೆದುಕೊಂಡಿದ್ದ ವಿನೇಶ್ ಈಗ ಕೇವಲ 100 ಗ್ರಾಮ್ ಹೆಚ್ಚಿನ ತೂಕದಿಂದ ಫೈನಲ್‌ನಲ್ಲಿ ಅವಕಾಶ ಕಳೆದುಕೊಂಡುಬಿಟ್ಟರು. ಈ ನೋವಿನಲ್ಲಿಯೇ ನಿವೃತ್ತಿಯನ್ನೂ ಘೋಷಿಸುವ ಮೂಲಕ ಇನ್ನೊಂದು ಶಾಕ್ ಕೊಟ್ಟರು. ಇನ್ನು ವಿನೇಶ್‌ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಮಾಧಾನದ ಸಂದೇಶ ನೀಡಿದ್ದಾರೆ. ಕೇವಲ 100 ಗ್ರಾಮ್‌ನಿಂದ ಚಿನ್ನದ ಪದಕ ವಂಚಿತರಾಗಿರುವುದಕ್ಕೆ ಒಲಿಂಪಿಕ್ಸ್ ಸಮಿತಿ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ.
ಭಾರತದ ಭ್ರಷ್ಟಾಚಾರದ ಸಂಸ್ಥಾಪಕಿ ಕಾಂಗ್ರೆಸ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ; ಚೇತನ್ ಅಹಿಂಸಾ
ಭಾರತೀಯ ಚಿತ್ರರಂಗದ ಉತ್ತಮ ನಟರಲ್ಲಿ ಒಬ್ಬರಾದ ಪ್ರಕಾಶ್ ರಾಜ್ ಕಾರ್ಟೂನ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕುಸ್ತಿಪಟು ವಿನೇಶ್ ಫೋಗಾಟ್ ಅವರು ತೂಕದ ಯಂತ್ರದ ಮೇಲೆ ನಿಂತಿದ್ದಾಗ, ಹಿಂಭಾಗದಲ್ಲಿ ಬಂದು ಪ್ರಧಾನಿ ನರೇಂದ್ರ ಮೋದಿ ಒಂದು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಮ್ ತೂಕ ಹೆಚ್ಚಾಗುವಂತೆ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯೇ ವಿನೇಶ್ ಫೋಗಾಟ್ ಕುಸ್ತಿಯ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂಬ ಅರ್ಥ ಬರುವಂತೆ ಮಾಡಿದ್ದಾರೆ. ಇಲ್ಲಿ ನೇರವಾಗಿ ಪ್ರಧಾನಿ ಮೋದಿ ಒಲಿಂಪಿಕ್ಸ್ ಕ್ರೀಡೆ ನಡೆಯುವ ಸ್ಥಳಕ್ಕೆ ಹೋಗದಿದ್ದರೂ, ತಮ್ಮ ಕೈವಾಡದಿಂದಲೇ ವಿನೇಶ್ ಫೋಗಾಟ್ ಫೈನಲ್ ಆಡದಂತೆ ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ ಎಂಬ ಅರ್ಥವನ್ನು ತೋರಿಸಿದ್ದಾರೆ. ಇದಕ್ಕೆ ಪ್ರಕಾಶ್ ರಾಜ್ ಬೆಂಬಲಿಗರು, ಅಭಿಮಾನಿಗಳು ಅವರನ್ನು ಹೊಗಳಿದರೆ, ಹಲವರು ಟ್ವೀಟ್ ಶೇರ್ ಮಾಡಿಕೊಂಡು ತಿರುಗೇಟು ನೀಡುತ್ತಿದ್ದಾರೆ. ಈಗ ಪ್ರಕಾಶ್ ರಾಜ್ ಟ್ವೀಟ್‌ಗೆ ನಟ ಅಹಿಂಸಾ ಚೇತನ್ ಕೂಡ ತಿರುಗೇಟು ನೀಡಿದ್ದಾರೆ.