ಸುಪಾರಿ ಕೊಟ್ಟು ಟ್ರಕ್ ಹರಿಸಿ ಸಾಯಿಸ್ತಾನಂತೆ; ಮೈಸೂರು ಹುಡುಗ ಆದಿಲ್‌ನಿಂದ ರಾಖಿ ಸಾವಂತ್‌ಗೆ ಜೀವ ಬೆದರಿಕೆ

By Vaishnavi ChandrashekarFirst Published Feb 9, 2023, 1:03 PM IST
Highlights

ಮುಂಬೈ ಪೊಲೀಸರ ವಶದಲ್ಲಿ ಮೈಸೂರು ಹುಡುಗ ಅದಿಲ್ ಖಾನ್. ರಾಖಿ ಸಾವಂತ್‌ಗೆ ಜೀವನ ಬೆದರಿಕೆ ಹಾಕಿದ್ದು ನಿಜವೇ?

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮದುವೆ ವಿಚಾರ ಬೀದಿಗೆ ಬಂದು ನಿಂತಿದೆ. ಮೈಸೂರು ಹುಡುಗ ಆದಿಲ್ ಖಾನ್‌ ಜೊತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿರುವ ರಾಖಿ ಇಸ್ಲಾಂ ಧರ್ಮಕ್ಕೆ ಬದಲಾಗಿದ್ದರು. ಇಬ್ಬರ ನಡುವೆ ಕೊಂಚ ಮನಸ್ತಾಪ ಹುಟ್ಟಿಕೊಂಡಿತ್ತು ಆನಂತರ ಆದಿಲ್ ಅನೈತಿಕ ಸಂಬಂಧ ಹೊಂದಿರುವುದಾಗಿ ಬೆಳಕಿಗೆ ಬಂದಿದೆ. ಸದಾ ಮೀಡಿಯಾ ಅಟೆನ್ಶನ್‌ ಸೆಳೆಯುವ ರಾಖಿ ಆದಿಲ್ ಅರೆಸ್ಟ್‌ ಆಗಿರುವುದರಿಂದ ಹಿಡಿದು ಪ್ರತಿಯೊಂದನ್ನು ವಿಚಾರವನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. 

ಅನೈತಿಕ ಸಂಬಂಧ ಮತ್ತು ಹಲ್ಲೆ ಆರೋಪ ಮೇಲೆ ಫೆಬ್ರವರಿ 7ರಂದು ಮುಂಬೈ ಓಶಿವಾರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಒಂದುವರೆ ದಿನಗಳ ಕಾಲ ತನಿಖೆ ನೆಡಿಸಿದ ಪೊಲೀಸರು ನಿನ್ನೆ ಆಂಧೇರಿ ಕೋರ್ಟ್‌ನಲ್ಲಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ರಾಖಿ ಮೆಡಿಕಲ್ ಟೆಸ್ಟ್‌ಗೆಂದು ಆಸ್ಪತ್ರೆಗೆ ಹೋಗುತ್ತಿರುವ ವಿಡಿಯೋವನ್ನು ಪ್ಯಾಪರಾಜಿಗಳು ಸೆರೆ ಹಿಡಿದಿದ್ದಾರೆ. ಆದಿಲ್ ನನ್ನ ಮೇಲೆ ಹಲ್ಲೆ ಮಾಡಿರುವ ಕಾರಣ ಪೊಲೀಸರು ಮೆಡಿಕಲ್ ಟೆಸ್ಟ್‌ ಮಾಡಿಸಲು ಹೇಳಿದ್ದಾರೆ ಎಂದು ರಾಖಿ ಮಾತನಾಡಿರುವ ವಿಡಿಯೋ ವೈರಲ್ ಅಗುತ್ತಿದೆ. 

Latest Videos

ಪತಿ ಅರೆಸ್ಟ್‌ ಆಗುತ್ತಿದ್ದಂತೆ ನಡು ರಸ್ತೆಯಲ್ಲಿ ತಲೆ ಸುತ್ತಿ ಬಿದ್ದ ರಾಖಿ ಸಾವಂತ್; ವಿಡಿಯೋ ವೈರಲ್

'ನಾನು ಸಲ್ಲಿಸಿರುವ ಎಲ್ಲ ಕೇಸ್‌ಗಳು ಕೋರ್ಟ್‌ನಲ್ಲಿ ಇವೆ. ಸರಿ ಮಾಡಿಕೊಳ್ಳೋಣ ಅಂತ ನಾನು ಅದಿಲ್‌ಗೆ 100 ಅವಕಾಶ ಕೊಟ್ಟೆ. ಆದಿಲ್‌ ಮದುವೆಯಾಗಿದ್ದೇನೆ ಅಂತ ನನಗೆ ಬ್ರೇಕಿಂಗ್ ನ್ಯೂಸ್‌ ಸಿಕ್ಕಿದೆ. ಆದಿಲ್‌ನ ಮದುವೆ, ವಿಚ್ಛೇದನದ ಪತ್ರ ನನಗೆ ಸಿಕ್ಕಿದೆ. ಯಾಕೆ ಇದೆಲ್ಲ ನನಗೆ ಆಗುತ್ತೆ ಅಂತ ದೇವರೇ ಹೇಳಬೇಕು. ನಾನು ಎಲ್ಲರ ಮುಂದೆ ಬಂದು ಎಲ್ಲವನ್ನು ಹೇಳ್ತೀನಿ. ನಾನು ಎಲ್ಲರ ಮುಂದೆ ಬಂದು ಎಲ್ಲವನ್ನು ಹೇಳ್ತೀನಿ. ಆದರೆ ಕೆಲವರು ಹೇಳೋದಿಲ್ಲ. ಎಲ್ಲ ಮಹಿಳೆಯರು ಹೇಳಲು ಧೈರ್ಯ ಮಾಡಲ್ಲ, ನಾನು ಮಾಡ್ತೀನಿ ಅಷ್ಟೇ' ಎಂದಿದ್ದಾರೆ ರಾಖಿ ಸಾವಂತ್. 

'ಆದಿಲ್‌ ಖಾನ್‌ನ ಇಂದು ಎಂದೆಂದಿಗೂ ಪ್ರೀತಿ ಮಾಡುವೆ. ಆದರೆ ಅವನು ನನಗೆ ಮೋಸ ಮಾಡಿದ್ದಾರೆ ಹೊಡೆದಿದ್ದಾನೆ. ನನ್ನನ್ನು ಹೀರೋ ಮಾಡು ಅಂತ ಅವನು ಹೇಳುತ್ತಿದ್ದ. ನಾನು ದೊಡ್ಡ ಉದ್ಯಮಿ, ಮನೆಯನ್ನು ಕೊಡಿಸಿದ್ದೇನೆ ಎಂದು ಎಲ್ಲರಿಗೂ ಹೇಳು ಎನ್ನುತ್ತಿದೆ. ನಾನು ಆ ರೀತಿ ಹೇಳಿಲ್ಲ ಅಂದ್ರೆ ಮದುವೆ ಆಗುತ್ತಿರಲಿಲ್ಲ ನಿನ್ನ ಜೊತೆ ಮದುವೆ ನಾನು ಅಗುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದನು. ಬೇರೆ ಹೆಂಗಸಿನ ಜೊತೆ ಮಲಗಿ ವಿಡಿಯೋ ಮಾಡಿ ನಾನು ನಿನಗೆ ಕಳುಹಿಸುತ್ತೀನಿ. ನಿನ್ನ ಅದನ್ನು ನೋಡಿ ಅಸೂಯೆ ಪಟ್ಟುಕೊಂಡು ಹೃದಯಘಾತ ಆಗಿ ಸಾಯುತ್ತೀಯಾ. ನೀನು ನನ್ನ ವಿರುದ್ಧ ಹೋದರೆ 50000 ರೂಪಾಯಿ ಕೊಟ್ಟು ನಿನ್ನ ಮೇಲೆ ಟ್ರಕ್ ಹರಿಸ್ತೀನಿ ಅಂತ ಆದಿಲ್ ಧಮ್ಕಿ ಹಾಕಿದ್ದಾನೆ' ಎಂದು ರಾಖಿ ಹೇಳಿದ್ದಾರೆ.

Rakhi Sawant ಪತಿ ಜೊತೆ ಅಕ್ರಮ ಸಂಬಂಧ ಹೊಂದಿರೋ '99%' ಸುಂದರಿ ಯಾರು?

'ನನ್ನ ತಾಯಿ ತೀರಿಕೊಂಡಳು ನನ್ನ ಬದುಕಿಯೂ ಸತ್ತಂತೆ ಇದ್ದೇನೆ. ನಾನು ಕೆಲಸ ಮಾಡೋದನ್ನು ಮುಂದುವರೆಸುವೆ. ಆದಿಲ್‌ ಹೆಂಡ್ತಿಯೊಬ್ಬಳು ನನಗೆ ಫೋನ್‌ ಮಾಡಿ ನಾನು ಹಿಂದು ಹುಡುಗಿಯಾಗಿದ್ದೆ ಅದಿಲ್‌ ನನ್ನನ್ನು ಮದುವೆಯಾಗಬೇಕೆಂದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎಂದು ಹೇಳಿರೋದು ಶಾಕ್ ಆಗಿದೆ. ಆದಿಲ್ ಅವರನ್ನು ನ್ಯಾಯಾಂಗ ಅಧೀನಕ್ಕೆ ಒಳಪಡಿಲಾಗುವುದು. ಆದಿಲ್ ಏನಾದರೂ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ನಾವು ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಆರೋಪಗಳಿಗೂ ನಮ್ಮಲ್ಲಿ ಸಾಕ್ಷಿ ಇದೆ. ಮೋಸ ಮಾಡಿರುವ ವಿಡಿಯೋಗಳು, ಆರ್ಥಿಕವಾಗಿ ಮೋಸ ಮಾಡಿರುವ ಬಗ್ಗೆ ನಮ್ಮಲ್ಲಿ ಸಾಕ್ಷಿ ಇದೆ' ಎಂದು ಮಾತನಾಡಿದ್ದಾರೆ.  

 

 
 
 
 
 
 
 
 
 
 
 
 
 
 
 

A post shared by @varindertchawla

click me!