ʻThe Kashmir Filesʼ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಮತ್ತು ನಟಿ ಪಲ್ಲವಿ ಜೋಶಿ ಲವ್‌ ಸ್ಟೋರಿ ನಿಮಗೆ ಗೊತ್ತಾ?

By Suvarna NewsFirst Published Feb 9, 2023, 11:25 AM IST
Highlights

ವಿವೇಕ್ ಅವರನ್ನು ಮದುವೆಯಾಗುವಾಗ ಅವರು ಇಷ್ಟು ದೊಡ್ಡ ಯಶಸ್ಸು ಕಾಣಬಹುದು ಎಂಬ ಅಂದಾಜು ಇರಲಿಲ್ಲ. ಅವರ ಸಂಗಾತಿಯಾಗುವುದಕ್ಕೆ ಹೆಮ್ಮೆಯಾಗುತ್ತದೆ ಎನ್ನುವ ಪಲ್ಲವಿ ಜೋಶಿ- ವಿವೇಕ್ ಅಗ್ನಿಹೋತ್ರಿ ನಡುವಿನ ಪ್ರೇಮ ಪ್ರಕರಣವೇನು?

ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡಿರುವ, ಇತ್ತೀಚೆಗೆ ಆಸ್ಕರ್‌ (Oscar awards) ಪ್ರಶಸ್ತಿಗೆ ಕೂಡ ಸ್ಪರ್ಧಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ (the kashmir files) ಸಿನಿಮಾದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ (vivek agnihotri) ಮತ್ತು ಅವರ ಪತ್ನಿ, ಸಿನಿಮಾದಲ್ಲಿ ನಟಿಸಿರುವ ಪಲ್ಲವಿ ಜೋಶಿ (pallavi joshi) ಅವರದೊಂದು ಕ್ಯೂಟ್‌ ಲವ್‌ ಸ್ಟೋರಿ. ಅದೇನು ಅಂತ ಇಲ್ಲಿ ಓದೋಣ ಬನ್ನಿ. 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿದ ಸಿನಿಮಾ ಕಾಶ್ಮೀರ್‌ ಫೈಲ್ಸ್‌. ಇದರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಅನೇಕ ವರ್ಷಗಳಿಂದ ಬಾಲಿವುಡ್ನಲ್ಲಿ ಇದ್ದರೂ ಕೂಡ ಅವರಿಗೆ ದೇಶಾದ್ಯಂತ ಜನಪ್ರಿಯತೆ ಸಿಕ್ಕಿದ್ದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ. ಹೀಗಾಗಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ತಿಳಿದುಕೊಳ್ಳಲು ಅಭಿಮಾನಿಗಳು ಹೆಚ್ಚು ಹೆಚ್ಚು ಹುಡುಕಾಡಿದರು. ಅವರ ಪತ್ನಿ ಪಲ್ಲವಿ ಜೋಶಿ ಬಗ್ಗೆಯೂ ಜನರಿಗೆ ಕುತೂಹಲ ಮೂಡಿತು.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಪಲ್ಲವಿ ಜೋಶಿ ಕೂಡ ನಟಿಸಿದ್ದಾರೆ. ರಾಧಿಕಾ ಮೆನನ್ ಎಂಬ ಪ್ರೊಫೆಸರ್ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ನಡುವೆ ಪ್ರೇಮ ಅರಳಿದ್ದು, ಅವರು ಮದುವೆ ಆದದ್ದು ಇತ್ಯಾದಿ ಕಥೆ ಇಲ್ಲಿದೆ.

ಚಿತ್ರರಂಗದಲ್ಲಿ ಪಲ್ಲವಿ ಜೋಶಿ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಜಾಹೀರಾತು ನಿರ್ಮಾಣ ಕ್ಷೇತ್ರದಲ್ಲಿ ವಿವೇಕ್ ಅಗ್ನಿಹೋತ್ರಿ ಕೆಲಸ ಮಾಡುತ್ತಿದ್ದರು. ಪಲ್ಲವಿ ಜೋಶಿ ಅವರು ಬಾಲನಟಿಯಾಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹೆಚ್ಚಾಗಿ ಕಡಿಮೆ ಬಜೆಟ್‌ನ, ಕಲಾತ್ಮಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದವರು. ಬಳಿಕ ಅವರ ಖ್ಯಾತಿ ಹೆಚ್ಚಿತು. ಕಿರುತೆರೆ ಲೋಕದಲ್ಲೂ ಅವರು ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಹಲವು ವರ್ಷಗಳ ಹಿಂದೆ ಮ್ಯೂಸಿಕ್ ಕಾರ್ಯಕ್ರಮವೊಂದರಲ್ಲಿ ಪಲ್ಲವಿ ಜೋಶಿ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ಮೊದಲ ಭೇಟಿ ಆಯಿತು. ಇಬ್ಬರಿಗೂ ಕಾಮನ್ ಫ್ರೆಂಡ್ ಮೂಲಕ ಅವರ ನಡುವೆ ಪರಿಚಯ ಬೆಳೆಯಿತು. ಮೊದಲ ಭೇಟಿಯಲ್ಲಿ ವಿವೇಕ್ ಅವರನ್ನು ಕಂಡಾಗ ಪಲ್ಲವಿ ಜೋಶಿಗೆ ಒಳ್ಳೆಯ ಭಾವನೆ ಮೂಡಲಿಲ್ಲವಂತೆ. ‘ಶಾದಿ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪಲ್ಲವಿ ಮಾತನಾಡಿದ್ದಾರೆ. ‘ನನಗೆ ಬಾಯಾರಿಕೆ ಆಗಿತ್ತು. ವಿವೇಕ್ ಅವರು ಕುಡಿಯಲು ಏನೋ ತಂದುಕೊಟ್ಟರು. ಮೊದಲಿಗೆ ನನಗೆ ಅವರು ಇಷ್ಟ ಆಗಲಿಲ್ಲ. ಅವರು ಸ್ವಲ್ಪ ಒರಟು ಸ್ವಭಾವದವರು ಅಂತ ನನಗೆ ಅನಿಸಿತು’ ಎಂದು ಪಲ್ಲವಿ ಹೇಳಿದ್ದರು.

ಹಿಟ್ ಚಿತ್ರವನ್ನು ಯಾರೂ ತಡೆಯೋಕಾಗಲ್ಲ; ಪಠಾನ್ ಬಾಯ್ಕಾಟ್‌ ಬಗ್ಗೆ ಅನುಪಮ್ ಖೇರ್ ರಿಯಾಕ್ಷನ್

ಆ ಭೇಟಿಯ ಬಳಿಕ ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ನಡುವೆ ಸ್ನೇಹ ಬೆಳೆಯಿತು. ಅವರಿಬ್ಬರು ಪದೇಪದೇ ಭೇಟಿ ಮಾಡಲು ಆರಂಭಿಸಿದರು. ನಂತರ ಅವರ ಸ್ನೇಹವು ಪ್ರೀತಿಯಾಗಿ ಬದಲಾಯಿತು. ಮೂರು ವರ್ಷಗಳ ಕಾಲ ರಿಲೇಶನ್ಶಿಪ್ನಲ್ಲಿ ಇದ್ದ ಈ ಜೋಡಿ 1997ರ ಜೂ.28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ನೆರವೇರಿತು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಚಿತ್ರರಂಗದ ವ್ಯಕ್ತಿಯನ್ನೇ ಮದುವೆ ಆಗಿರುವುದಕ್ಕೆ ಪಲ್ಲವಿ ಜೋಶಿ ಅವರಿಗೆ ಖುಷಿ ಇದೆ. ಯಾಕೆಂದರೆ ಕೆಲಸದ ವಾತಾವರಣದ ಬಗ್ಗೆ ಪರಸ್ಪರ ಇಬ್ಬರಿಗೂ ಅರ್ಥ ಆಗುತ್ತದೆ. ‘ಒಬ್ಬ ಡಾಕ್ಟರ್ ಅಥವಾ ಇಂಜಿನಿಯರ್ ಜೊತೆ ನನ್ನ ಮದುವೆ ಆಗಿದ್ದಿದ್ದರೆ ಇಂಥ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ’ ಎಂಬುದು ಪಲ್ಲವಿ ಜೋಶಿ ಅಭಿಪ್ರಾಯ. ‘ದಿ ತಾಷ್ಕೆಂಟ್ ಫೈಲ್ಸ್’, ‘ದಿ ಕಾಶ್ಮೀರ್ ಫೈಲ್ಸ್’ ಮುಂತಾದ ಸಿನಿಮಾಗಳಲ್ಲಿ ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಅವರು ಜೊತೆಯಾಗಿ ಕೆಲಸ ಮಾಡಿದ್ದಾರೆ. ‘ದಿ ತಾಷ್ಕೆಂಟ್ ಫೈಲ್ಸ್’ ಚಿತ್ರದ ನಟನೆಗಾಗಿ ಪಲ್ಲವಿ ಜೋಶಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ದೊರೆತಿದೆ.

ತೆಲುಗು ಈವೆಂಟ್‌ನಲ್ಲಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ; ಸಮಾಧಾನ ಮಾಡಿದ ನಟ ಬಾಲಯ್ಯ
 

click me!