ನಿರ್ದೇಶಕ ರಾಜ್ಕುಮಾರ್ ಸಂತೋಷಿಗೆ 2 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದ್ದು, ಆಮೀರ್ ಖಾನ್, ಸನ್ನಿ ಡಿಯೋಲ್ಗೂ ಸಂಕಷ್ಟ ಎದುರಾಗಿದೆ. ಏನಿದು ವಿಷ್ಯ?
ಚೆಕ್ ಬೌನ್ಸ್ ಕೇಸ್ನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಫೇಮಸ್ ಆಗಿರುವ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಆಗಿದೆ. ಸನ್ನಿ ಡಿಯೋಲ್, ಪ್ರೀತಿ ಜಿಂಟಾ ಅವರ ನಟನೆಯ ಲಾಹೋರ್ 1947 ಚಿತ್ರದಲ್ಲಿ ಬಿಜಿಯಾಗಿದ್ದ ರಾಜ್ಕುಮಾರ್ ಅವರು ಈಗ ಶಿಕ್ಷೆ ವಿಧದಿಸಲಾಗಿದ್ದು, ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ‘ಲಾಹೋರ್ 1947’ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಈ ಸಿನಿಮಾವನ್ನು ಆಮೀರ್ ಖಾನ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ ಆಮೀರ್ ಖಾನ್ ಜೊತೆ ರಾಜ್ಕುಮಾರ್ ಸಂತೋಷಿ ಕೆಲಸ ಮಾಡಿದ್ದರು. ‘ಘಾಯಲ್’, ‘ದಾಮಿನಿ’, ‘ಘಾಟಕ್’ ಸಿನಿಮಾಗಳಲ್ಲಿ ಸನ್ನಿ ಡಿಯೋಲ್ ಜೊತೆ ರಾಜ್ಕುಮಾರ್ ಸಂತೋಷಿ ಕೆಲಸ ಮಾಡಿದ್ದರು. ಆದರೆ ಇದೀಗ ಲೆಕ್ಕಾಚಾರ ಬುಡಮೇಲಾಗಿದೆ.
ಇವರ ವಿರುದ್ಧ, ಜಾಮ್ನಗರದ ಕೈಗಾರಿಕೋದ್ಯಮಿ ಮತ್ತು ಹಡಗು ಉದ್ಯಮಿ ಅಶೋಕ್ ಲಾಲ್ ಅವರು ದೂರು ದಾಖಲು ಮಾಡಿದ್ದರು. ಈ ದೂರು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಉದ್ಯಮಿ ಅಶೋಕ್ ಲಾಲ್ ಅವರು ತಲಾ 10 ಲಕ್ಷ ರೂ.ಗಳ 10 ಚೆಕ್ಗಳನ್ನು ಸ್ವೀಕರಿಸಿದ್ದರು. ಆದರೆ ಚೆಕ್ ಬೌನ್ಸ್ ಆಗಿತ್ತು. ಲಾಲ್ ಅವರು ರಾಜ್ ಕುಮಾರ್ ಸಂತೋಷಿ ಅವರ ಸಿನಿಮಾಗೆ ಸಾಲ ನೀಡಿದ್ದರು. ಅದನ್ನು ವಾಪಸ್ ನೀಡುವುದಕ್ಕಾಗಿ 10 ಲಕ್ಷ ರೂ ಗಳ 10 ಚೆಕ್ ಗಳನ್ನು ಸಂತೋಷಿ ಉದ್ಯಮಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉದ್ಯಮಿ ದೂರು ದಾಖಲು ಮಾಡಿದ್ದರು. ಪ್ರಕರಣದಲ್ಲಿ ಉದ್ಯಮಿಯ ಪರ ವಕೀಲರಾದ ಪಿಯೂಷ್ ಭೋಜನಿ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್ ಕುಮಾರ್ ಸಂತೋಷಿಗೆ ಜೈಲು ಶಿಕ್ಷೆಯಾಗಿರುವುದನ್ನು ದೃಢಪಡಿಸಿದ್ದಾರೆ. ಎರಡು ವರ್ಷಗಳ ಶಿಕ್ಷೆಯ ಜೊತೆಗೆ ಉದ್ಯಮಿಗೆ ನೀಡಬೇಕಿದ್ದ ಹಣದ ದುಪ್ಪಟ್ಟು ಹಣವನ್ನು ನೀಡುವಂತೆ ರಾಜ್ಕುಮಾರ್ ಅವರಿಗೆ ಕೋರ್ಟ್ ಆದೇಶಿಸಿದೆ.
ಸಿಟ್ಟಿನಿಂದ ಅಕ್ಕನ ಕೂದಲನ್ನು ಕಟ್ ಮಾಡಿ ಬೀಸಾಡಿದ್ದ ಅಭಿಷೇಕ್ ಬಚ್ಚನ್: ಶ್ವೇತಾ ಹೇಳಿದ್ದೇನು?
ಈ ಘಟನೆಯ ಹಿನ್ನೆಲೆ ಹೇಳುವುದಾದರೆ, ಇದು 2015ರಲ್ಲಿ ನಡೆದಿರುವ ಘಟನೆ. ಅಶೋಕ್ ಲಾಲ್ ಅವರ ಬಳಿ ರಾಜ್ಕುಮಾರ್ ಸಂತೋಷಿ ಅವರು 1 ಕೋಟಿ ಹಣ ಪಡೆದಿದ್ದರು. ಈ ಹಣವನ್ನು ಹಿಂದಿರುಗಿಸಲು 10 ಲಕ್ಷ ರೂಪಾಯಿಯ 10 ಚೆಕ್ನ ನಿರ್ದೇಶಕರು ಅಶೋಕ್ಲಾಲ್ಗೆ ನೀಡಿದ್ದರು. ಆದರೆ ಅದು ನಗದಾಗದೇ ಬೌನ್ಸ್ ಆಗಿತ್ತು. ಆ ಬಳಿಕ ರಾಜ್ಕುಮಾರ್ ಸಂತೋಷಿ ಅವರನ್ನು ಸಂಪರ್ಕಿಸಲು ಅಶೋಕ್ ಲಾಲ್ ಹಲವಾರು ಬಾರಿ ಪ್ರಯತ್ನ ಪಟ್ಟರೂ ಪ್ರಯೋಜನ ಆಗಿರಲಿಲ್ಲ. ಆ ಬಳಿಕ ಅಶೋಕ್ ಲಾಲ್ ಅವರು ಕೇಸ್ ದಾಖಲು ಮಾಡಿದರು.
ಎರಡು ವರ್ಷಗಳ ಶಿಕ್ಷೆ ನೀಡುವುದಕ್ಕೂ ಮುನ್ನ ಜಾಮ್ನಗರ ನ್ಯಾಯಾಲಯ ನಿರ್ದೇಶಕ ಸಂತೋಷಿ ಅವರಿಗೆ ಪ್ರತಿ ಚೆಕ್ಗೆ 15 ಸಾವಿರ ರೂಪಾಯಿನ ಪರಿಹಾರ ಹಣ ನೀಡುವಂತೆ ಆದೇಶ ನೀಡಿತ್ತು. ಅಂದರೆ ಒಂದೂವರೆ ಲಕ್ಷ ರೂಪಾಯಿ ಪರಿಹಾರ ಹಣ ನೀಡಬೇಕಿತ್ತು. ಇದಕ್ಕೆ ಕಳೆದ ಏಪ್ರಿಲ್ 15ರವರೆಗೆ ಗಡುವು ನೀಡಲಾಗಿತ್ತು. ಆದರೆ, ರಾಜ್ಕುಮಾರ್ ಸಂತೋಷಿ ಇದಕ್ಕೆ ಬೆಲೆ ನೀಡಲಿಲ್ಲ. ಈ ಕಾರಣಕ್ಕೆ ಜಾಮ್ನಗರ್ ನ್ಯಾಯಾಲಯ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ. ಜೊತೆಗೆ ಅಶೋಕ್ ಲಾಲ್ಗೆ 2 ಕೋಟಿ ರೂಪಾಯಿ ನೀಡಬೇಕೆಂದು ಸೂಚಿಸಿದೆ. ಇದನ್ನು ರಾಜ್ಕುಮಾರ್ ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ