ಸಿಟ್ಟಿನಿಂದ ಅಕ್ಕನ ಕೂದಲನ್ನು ಕಟ್ ಮಾಡಿ ಬೀಸಾಡಿದ್ದ ಅಭಿಷೇಕ್ ಬಚ್ಚನ್: ಈ ಕುರಿತು ಶ್ವೇತಾ ಹೇಳಿದ್ದೇನು?
ಬಾಲಿವುಡ್ ಜೋಡಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ ವದಂತಿಗಳು ಕೆಲ ತಿಂಗಳುಗಳಿಂದ ಸಕತ್ ಸದ್ದು ಮಾಡುತ್ತಿತ್ತು. ಸದ್ಯ ಅವರಿಬ್ಬರೂ ಚೆನ್ನಾಗಿದ್ದಾರೆ ಎಂದು ಈಗ ಸುದ್ದಿ ಹರಡಿದ್ದು, ವಿಚ್ಛೇದನದ ಮಾತಿಗೆ ತಾತ್ಕಾಲಿಕ ತೆರೆ ಬಿದ್ದಿದೆ. ಇದೇ ವೇಳೆ ಕೇಳಿ ಬಂದ ಇನ್ನೊಂದು ಹೆಸರು ಶ್ವೇತಾ ಬಚ್ಚನ್. ಅಮಿತಾಭ್ ಮತ್ತು ಜಯ ಬಾಧುರಿ ಅವರ ಮಗಳಾಗಿರುವ ಶ್ವೇತಾ ಬಚ್ಚನ್ ಅವರು ಐಶ್ವರ್ಯ ರೈ ಅವರನ್ನು ಅತ್ತಿಗೆಯಾಗಿ ಒಪ್ಪಿಕೊಂಡಿರಲಿಲ್ಲ ಎನ್ನುವ ವಿಷಯ ಬಹಿರಂಗಗೊಂಡಿತ್ತು. ಅವರಿಗೆ ಅಭಿಷೇಕ್ ಅವರ ಮಾಜಿ ಪ್ರೇಯಸಿ ಕರಿಷ್ಮಾ ಕಪೂರ್ ಅವರನ್ನು ಅತ್ತಿಗೆಯನ್ನಾಗಿ ಮಾಡಿಕೊಳ್ಳುವ ಆಸೆ ಇತ್ತು ಎನ್ನುವ ವಿಷಯವದು. ಐಶ್ವರ್ಯ ಮತ್ತು ಅಭಿಷೇಕ್ ನಡುವೆ ಬಿರುಕು ಬರಲು ಇದೂ ಒಂದು ಕಾರಣ ಎಂಬ ಸುದ್ದಿ ಹರಡಿತ್ತು.
ಡಿವೋರ್ಸ್ ಸುದ್ದಿ ತಣ್ಣಗಾಗುತ್ತಲೇ ಇದೀಗ ಶ್ವೇತಾ ಅವರು ತಮ್ಮ ಮತ್ತು ಅಭಿಷೇಕ್ ಬಾಲ್ಯದ ಕುರಿತು ಮಾತನಾಡಿದ್ದಾರೆ. ಇತರ ಒಡಹುಟ್ಟಿದವರಂತೆ, ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಕೂಡ ತಮ್ಮ ಪೋಷಕರು ಮನೆಯಿಂದ ಹೊರಗಿರುವಾಗ ಜಗಳವಾಡುತ್ತಿದ್ದರು ಎನ್ನುವ ವಿಷಯವದು. ತಮ್ಮ ತಾವು ಮತ್ತು ಅಭಿಷೇಕ್ ಜಗಳ ಆಡುತ್ತಿದ್ದ ವೇಳೆ ಅಭಿಷೇಕ್ ತಮ್ಮ ಕೂದಲನ್ನು ಕೂಡ ಕತ್ತರಿಸಿದ್ದ. ನಂತರ ಅದೇ ಕೂದಲಿನೊಂದಿಗೆ ಶಾಲೆಗೆ ಹೋಗಬೇಕಾಯಿತು ಎಂದು ಹೇಳಿದ್ದಾರೆ. ನವ್ಯಾ ನಂದಾ ನವೇಲಿಯ ಪಾಡ್‌ಕಾಸ್ಟ್ 'ವಾಟ್ ದಿ ಹೆಲ್ ನವ್ಯಾ' ನ ಸಂದರ್ಶನದಲ್ಲಿ ಈ ವಿಷಯವನ್ನು ಮಾತನಾಡಿದ್ದಾರೆ. ಅವರು ತಮ್ಮ ತಾಯಿಯ ಚಿಕ್ಕಪ್ಪ ಅಭಿಷೇಕ್ ಬಚ್ಚನ್ ತನ್ನ ಕೂದಲನ್ನು ಕತ್ತರಿಸಿದ್ದ ಕುರಿತು ಮಾತನಾಡಿದ್ದಾರೆ. ತಂದೆ-ತಾಯಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಸಾಕಷ್ಟು ಜಗಳವಾಡಿದ್ವಿ ಎಂದು ಹೇಳಿಕೊಂಡಿದ್ದಾರೆ.
ಆ ಘಟನೆಯನ್ನು ವಿವರಿಸಿದ ಶ್ವೇತಾ, ಒಂದು ರಾತ್ರಿ ಅಪ್ಪ-ಅಮ್ಮ ಹೊರಗೆ ಹೋಗಿದ್ದಾಗ ನಮ್ಮ ನಡುವೆ ಜಗಳವಾಯಿತು. ಅಭಿಷೇಕ್ ಸಿಟ್ಟಿನಿಂದ ಹಿಂದೆ ಮುಂದೆ ಯೋಚನೆ ಮಾಡದೇ ಕತ್ತರಿ ಹುಡುಕಿ ನನ್ನ ಕೂದಲನ್ನು ಕತ್ತರಿಸಿದನು. ಇದಾದ ನಂತರ ಅವರು ಇಂತಹ ವಿಚಿತ್ರ ಕಟ್ ಕೂದಲಿನೊಂದಿಗೆ ಶಾಲೆಗೆ ಹೋಗಬೇಕಾಯಿತು ಎಂದಿದ್ದಾರೆ. ಅವನಿಗೆ ಹೇಗೆ ಕತ್ತರಿ ಸಿಕ್ಕಿತೋ ಗೊತ್ತಿಲ್ಲ, ಒಟ್ಟಿನಲ್ಲಿ ಎಲ್ಲಿಂದಲೋ ಕತ್ತರಿ ತಂದು ಈ ಕೆಲಸ ಮಾಡಿದ್ದ. ಆಗ ನಾನು ಶಾಲೆಗೆ ಹೋಗಬೇಕಿತ್ತು. ಹಾಗೆಯೇ ಹೋಗಿದ್ದೆ. ಆ ನಂತರದ ದಿನಗಳಲ್ಲಿ ಕೂದಲು ಬೆಳೆಯುವವರೆಗೂ ನನ್ನ ಅಜ್ಜಿ ನನ್ನ ಕೂದಲಿಗೆ ಪಿನ್‌ಗಳನ್ನು ಹಾಕಿ ಕಳಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ಅಮ್ಮ ಜಯಾ ಬಚ್ಚನ್ ಗದರುವುದನ್ನೂ ಈ ಸಂದರ್ಭದಲ್ಲಿ ಶ್ವೇತಾ ನೆನಪಿಸಿಕೊಂಡಿದ್ದಾರೆ. ತಾಯಿ ಜಯಾ ಬಚ್ಚನ್ ಪ್ರತಿದಿನ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಕೂದಲನ್ನು ಬಾಚುತ್ತಿದ್ದರು. ಅಮ್ಮ ಕೂದಲು ಬಾಚಿಕೊಳ್ಳುವಾಗ ತಲೆ ಅಲ್ಲಾಡಿಸಿದರೆ ಗದರುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು, ಅವರು ನನ್ನ ಕೂದಲನ್ನು ಬಾಚುತ್ತಿದ್ದರು. ನನ್ನ ತಲೆಯ ಮೇಲೆ ಬಾಚಣಿಗೆಯಿಂದ ತುಂಬಾ ಹೊಡೆಯುತ್ತಿದ್ದರು. ಮತ್ತೆ ಮತ್ತೆ ನೇರವಾಗಿ ಕುಳಿತುಕೋ ಎಂದು ಹೇಳುತ್ತಿದ್ದರು. ನನ್ನ ಕೂದಲನ್ನು ಬಿಗಿಯಾಗಿ ಕಟ್ಟಿ ಕಳುಹಿಸುತ್ತಿದ್ದರು ಎಂದಿದ್ದಾರೆ.
ಭಾರತವಾಯ್ತು, ಅಮೆರಿಕದಲ್ಲೂ 'ಅನಿಮಲ್' ದಾಖಲೆ! ಹೆಣ್ಣಿನ ದೌರ್ಜನ್ಯ, ಕ್ರೌರ್ಯದ ಚಿತ್ರಕ್ಕೆ ಇನ್ನೊಂದು ಯಶಸ್ಸು