
ಚೆನ್ನೈ(ಆ.09) ದೇಶ ವಿದೇಶಗಳಲ್ಲಿ ಇದೀಗ ಜೈಲರ್ ಸಿನಿಮಾ ಕೂತೂಹಲ ಹೆಚ್ಚಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿಯನದ ಜೈಲರ್ ಸಿನಿಮಾ ನಾಳೆ(ಆ.10) ತೆರೆಗೆ ಅಪ್ಪಳಿಸುತ್ತಿದೆ. ಜೈಲರ್ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.ಕೆಲವು ಕಚೇರಿಗಳಲ್ಲಿ ಸಿನಿಮಾ ವೀಕ್ಷಣೆಗೆ ರಜೆ ಘೋಷಿಸಲಾಗಿದೆ. ಜೈಲರ್ ಸಿನಿಮಾ ಸಂಭ್ರಮ ಆರಂಭಗೊಳ್ಳುತ್ತಿದ್ದಂತೆ ಇತ್ತ ರಜನಿಕಾಂತ್ ಸದ್ದಿಲ್ಲದೆ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದ ಮೂಲಕ ರಜನಿಕಾಂತ್ ಹಿಮಾಲಯಕ್ಕೆ ತೆರಳಿದ್ದಾರೆ.
ಭಾರಿ ಕುತೂಹಲ ಕೆರಳಿಸಿರುವ ಜೈಲರ್ ಸಿನಿಮಾ ಬಹು ತಾರಾಗಣಗಳನ್ನು ಹೊಂದಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿದೆ. ಆದರೆ ಬಿಡುಗಡೆಗೂ ಒಂದು ದಿನ ಮೊದಲೇ ರಜನಿಕಾಂತ್ ಹಿಮಾಲಯ ಪ್ರವಾಸ ಮಾಡಿದ್ದಾರೆ. ಕೋವಿಡ್ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಿಂದ ರಜನಿಕಾಂತ್ ಹಿಮಾಲಯ ಪ್ರಯಾಣ ಮಾಡಿರಲಿಲ್ಲ. ಇದೀಗ ಜೈಲರ್ ಸಿನಿಮಾ ಬಿಡುಗಡೆಗೂ ಮೊದಲೇ ಹಿಮಾಲಯ ಪ್ರವಾಸ ಮಾಡಿದ್ದಾರೆ.
ತಲೈವಾ ಫ್ಯಾನ್ಸ್‌ಗೆ 10ನೇ ತಾರೀಖು ಹಬ್ಬ: ಹೇಗಿದೆ ಗೊತ್ತಾ ಜೈಲರ್ ಸಿನಿಮಾ ಟೀಸರ್..?
ಚೆನ್ನೈ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್, ಹೌದು ಹಿಮಾಲಯ ಪ್ರವಾಸ ಮಾಡುತ್ತಿದ್ದೇನೆ. ಕೋವಿಡ್ ಕಾರಣಗಳಿಂದ ಕಳೆದ ನಾಲ್ಕು ವರ್ಷ ಹಿಮಾಲಯ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೀಗ ಮಾಡುತ್ತಿದ್ದೇನೆ ಎಂದರು. ಇನ್ನು ಜೈಲರ್ ಸಿನಿಮಾ ಹೇಗಿದೆ ಅನ್ನೋ ಪ್ರಶ್ನೆಗೆ, ಅದನ್ನು ನೀವು ವೀಕ್ಷಿಸಿ ಹೇಳಬೇಕು ಎಂದು ರಜನಿಕಾಂತ್ ಹೇಳಿದ್ದಾರೆ.
ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರ ಆ.10ಕ್ಕೆ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಟಿಕೆಟ್‌ಗೆ ಬಾರಿ ಬೇಡಿಕೆ ವ್ಯಕ್ತವಾಗುತ್ತದೆ. ಕರ್ನಾಟಕದಲ್ಲಿ ಮೊದಲ ದಿನವೇ 2500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಚೆನ್ನೈಗಿಂತ ಬೆಂಗಳೂರಲ್ಲಿ ಟಿಕೆಟ್ 10 ಪಟ್ಟು ದುಬಾರಿಯಾಗಿದೆ.
'ಜೈಲರ್' ಆಡಿಯೋ ಲಾಂಚ್‌ನಲ್ಲಿ ತಮನ್ನಾ ಲುಕ್‌ಗೆ ಫ್ಯಾನ್ಸ್ ಫಿದಾ
2 ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಹೀಗಾಗಿ ಚೆನ್ನೈ ಹಾಗೂ ಬೆಂಗಳೂರಿನ ಕೆಲ ಕಚೇರಿಗಳಲ್ಲಿ ಜೈಲರ್ ಸಿನಿಮಾ ವೀಕ್ಷಣೆಗೆ ರಜೆ ಘೋಷಿಸಲಾಗಿದೆ. ಈಗಾಗಲೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್ ಬುಕಿಂಗ್ ಮಾಡಲಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಮುಂದಿನ ಚಿತ್ರ ತಲೈವರ್ 170 ಚಿತ್ರದ ಶೂಟಿಂಗ್ ತಯಾರಿ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.