ಅಬ್ಬಾ! ಉರ್ಫಿ ಜಾವೇದ್​ ನಿಜಕ್ಕೂ ಹೀಗಿದ್ರಾ? ಮೊದಲ ಆಡಿಷನ್​ ವಿಡಿಯೋ ವೈರಲ್​!

By Suvarna News  |  First Published Aug 9, 2023, 5:35 PM IST

ತಮ್ಮ ಬಟ್ಟೆಗಳಿಂದಲೇ ಟ್ರೋಲ್​ಗೆ ಒಳಗಾಗುತ್ತಿರುವ ಉರ್ಫಿ ಜಾವೇದ್​ ಅವರು ತಮ್ಮ ಹಳೆದ ಆಡಿಷನ್​ ವಿಡಿಯೋ ಒಂದನ್ನು ಶೇರ್​ ಮಾಡಿದ್ದು, ಜನರನ್ನು ಅಚ್ಚರಿಗೆ ತಳ್ಳಿದ್ದಾರೆ.
 


ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ  ಅರೆಬರೆ ಡ್ರೆಸ್​ ರುಚಿ ನೋಡಿ ಅದನ್ನು ಬಿಡುತ್ತಿಲ್ಲ.

ಆದರೆ ಕೆಲವೇ ಕೆಲವರಿಗೆ ಮಾತ್ರ ತಿಳಿದಿರುವಂತೆ ಉರ್ಫಿ ಜಾವೇದ್​ ಹಿನ್ನೆಲೆಯೂ ಅತ್ಯಂತ ನೋವುದಾಯಕವಾಗಿದೆ. ಈಕೆ  17ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಲು ನಿರ್ಧರಿಸಿದ್ದರಂತೆ. ಈ ಕುರಿತು ಉರ್ಫಿಯೇ ಒಮ್ಮೆ ಹೇಳಿಕೊಂಡಿದ್ದರು. ತಮ್ಮ ತಂದೆಯ ಕಾರಣದಿಂದ ಮನೆಬಿಡಲು ನಿರ್ಧರಿಸಿರುವುದಾಗಿ ಹೇಳಿದ್ದರು. ನನ್ನ ತಂದೆ ತನ್ನನ್ನು ತುಂಬಾ ಹೊಡೆಯುತ್ತಿದ್ದರು. ನನಗೆ ಹಾಗೂ ನನ್ನ ಸಹೋದರಿಯರಿಗೆ ತುಂಬಾ  ಕಿರುಕುಳ (Torture) ಕೊಡುತ್ತಿದ್ದರು. ಮೂರ್ಛೆ ಹೋಗುವಂತೆ  ಹೊಡೆಯುತ್ತಿದ್ದರು ಎಂದೆಲ್ಲಾ ಉರ್ಫಿ ಹೇಳಿಕೊಂಡಿದ್ದರು.  'ನಾನು 15 ವರ್ಷದವಳಿದ್ದಾಗ ನನ್ನ ಫೋಟೋವನ್ನು ಯಾರೋ ಪೋರ್ನ್ ಸೈಟ್​ಗೆ ಅಪ್ಲೋಡ್ ಮಾಡಿದ್ದರು. ನಾನು ಈ ಫೋಟೋವನ್ನು ನನ್ನ ಫೇಸ್​ಬುಕ್ ಪ್ರೊಫೈಲ್ ಚಿತ್ರವಾಗಿ ಟ್ಯೂಬ್ ಟಾಪ್ ಧರಿಸಿ ಹಾಕಿದ್ದೆ. ಯಾರೋ ಅದನ್ನು ಡೌನ್​ಲೋಡ್ ಮಾಡಿ ಯಾವುದೇ ಮಾರ್ಫಿಂಗ್ ಇಲ್ಲದೆ ಪೋರ್ನ್ ಸೈಟ್​ಗಳಲ್ಲಿ ಅಪ್ಲೋಡ್ ಮಾಡಿದ್ದರು.  ನನ್ನ ತಂದೆ ಕೂಡ ಇದರ ಪ್ರಯೋಜನ ಪಡೆಯಲು ನೋಡಿದರು ಎಂಬ ಆಘಾತಕಾರಿ ಸಂಗತಿಯನ್ನು ಉರ್ಫಿ ಹಂಚಿಕೊಂಡಿದ್ದರು.  ಇದರಿಂದ ನನ್ನ ತಂದೆ ಲಾಭ ಪಡೆಯಲು ಬಯಸಿದ್ದರು.  ಪೋರ್ನ್ ಸೈಟ್​ನಲ್ಲಿ ಹೀಗೆ ಅಪ್​ಲೋಡ್​ ಮಾಡಿದರೆ  50 ಲಕ್ಷ ರೂಪಾಯಿ ಬೇಡಿಕೆಯಿದೆ ಎಂಬ ಆಮಿಷಕ್ಕೂ ಅವರು ಒಳಗಾಗಿದ್ದರು ಎಂದಿದ್ದ ನಟಿ, ಕೊನೆಗೆ ಹಿಂಸೆ ತಾಳಲಾರದೇ ಹೇಗೆ ಮನೆ ಬಿಟ್ಟು ಬಂದಿದ್ದೆ ಎಂಬುದನ್ನೂ ತಿಳಿಸಿದ್ದರು. 

Tap to resize

Latest Videos

ನಿಜವಾಗ್ಲೂ ಇದು 21ನೇ ಶತಮಾನನಾ ಎಂದು ಕೆಂಡಾಮಂಡಲವಾದ Urfi Javed!

ಇಂಥ ಸಂದರ್ಭದಲ್ಲಿ ಮುಂಬೈನಲ್ಲಿ ಅಲೆದು ತಮ್ಮನ್ನು ತಾವು ರೂಪಿಸಿಕೊಳ್ಳಲು ಪಟ್ಟಿದ್ದ ಕಷ್ಟಗಳ ಸರಮಾಲೆಯನ್ನೂ ಉರ್ಫಿ ಹೇಳಿಕೊಂಡಿದ್ದರು. ಆದರೆ ಇಂದು ತಮ್ಮ ಬಟ್ಟೆಗಳಿಂದಾಗಿ ಹಲವರ ದೃಷ್ಟಿಯಲ್ಲಿ ಉರ್ಫಿ ತೀರಾ ಕೆಳಮಟ್ಟಕ್ಕೆ ಹೋಗಿದ್ದಾರೆ. ಕೆಲವೇ ಕೆಲವರು ಈಕೆಯ ದೇಹ, ಈಕೆಯ ಹಕ್ಕು ಎಂಬುದಾಗಿ ಮಾತನಾಡುತ್ತಿದ್ದರೂ, ಇದು ಅಶ್ಲೀಲತೆಯ ಪರಮಾವಧಿ ಎನ್ನುವವರೇ ಹೆಚ್ಚು. ಇದೀಗ ಉರ್ಫಿ,  ಮುಂಬೈನಲ್ಲಿ ತಮ್ಮ ಆಡಿಷನ್‌ನ ಹಳೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿಸುವಂತಿದೆ.

ಲಖನೌದಿಂದ  ಬಂದಿರುವ ಉರ್ಫಿ, ಮುಂಬೈನಲ್ಲಿ (Mumbai) ತಮ್ಮ ಆರಂಭಿಕ ದಿನಗಳಲ್ಲಿ ತನ್ನ ಆಡಿಷನ್‌ಗಳಲ್ಲಿ ಒಂದಾದ ವಿಡಿಯೋ ಶೇರ್​ ಮಾಡಿದ್ದಾರೆ. ಇದರಲ್ಲಿ ಸಿಂಪಲ್​ ಆಗಿ ಕಾಣಿಸುವ ಉರ್ಫಿ, ಸಂಪೂರ್ಣ ವಿಭಿನ್ನ ಗೆಟಪ್​ನಲ್ಲಿ ಕಾಣಿಸುತ್ತಾರೆ.   ಇದು ಅಕ್ಷರಶಃ ನನ್ನ ಮೊದಲ ಆಡಿಷನ್ ಆಗಿತ್ತು. ಮೊದಲ ವಾರ ಮುಂಬೈನಲ್ಲಿ ಕಳೆದ ದಿನಗಳವು ಎಂದು  ತಮ್ಮ ಪೋಸ್ಟ್​ಗೆ ಉರ್ಫಿ  ಶೀರ್ಷಿಕೆ ಕೊಟ್ಟಿದ್ದಾರೆ. ಆದರೆ ಅದ್ಯಾಕೋ ಗೊತ್ತಿಲ್ಲ,  ವೀಡಿಯೊವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಆಕೆ  ಅಧಿಕೃತ Instagram ಖಾತೆಯಿಂದ ಅದನ್ನು ಅಳಿಸಿ ಹಾಕಿದ್ದಾರೆ. ಆದರೆ  ನಿಜಕ್ಕೂ ಈಕೆ ಈಗಿನ ಉರ್ಫಿ ಜಾವೇದ್​ ಹೌದಾ ಅನ್ನುವಷ್ಟರ ಮಟ್ಟಿಗೆ ಕಾಣಿಸುತ್ತಾರೆ. ಈಗಲೂ ಹೀಗೆಯೇ ಇರಿ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. 

Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

 
 
 
 
 
 
 
 
 
 
 
 
 
 
 

A post shared by Nevanta (@nevantamedia)

click me!