ಬಹು ನಿರೀಕ್ಷಿತ ಡಾನ್-3 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನಾಯಕನನ್ನು ನೋಡಿ ಅಮಿತಾಭ್, ಶಾರುಖ್ ಫ್ಯಾನ್ಸ್ ನಿರಾಶರಾಗಿದ್ದಾರೆ.
ಬಹು ನಿರೀಕ್ಷಿತ ಡಾನ್-3 ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಆದರೆ ಅಮಿತಾಭ್ ಬಚ್ಚನ್ (Amitabh Bhchchan) ಹಾಗೂ ಶಾರುಖ್ ಖಾನ್ ಫ್ಯಾನ್ಸ್ಗೆ ಸಕತ್ ನಿರಾಸೆಯುಂಟಾಗಿದೆ. ಕಳೆದ ಕೆಲ ದಿನಗಳಿಂದ 'ಡಾನ್- 3' ಸಿನಿಮಾ ಬಗ್ಗೆ ಚರ್ಚೆ ನಡೀತಿತ್ತು. ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ಶುರುವಾಗಿತ್ತು. ಆದರೆ ಹೀರೊ ಯಾರು ಅನ್ನೋದು ಸ್ಪಷ್ಟವಾಗಿರಲಿಲ್ಲ. 70ರ ದಶಕದಲ್ಲಿ ಅಮಿತಾಭ್ ಬಚ್ಚನ್ ಡಾನ್ ಆಗಿ ತೆರೆಮೇಲೆ ದರ್ಬಾರ್ ಮಾಡಿದ್ದರು. 5 ವರ್ಷಗಳ ಬಳಿಕ ಅದರ ಸೀಕ್ವೆಲ್‌ನಲ್ಲಿ ಮತ್ತೆ ಶಾರುಖ್ ಖಾನ್ ನಟಿಸಿದ್ದರು. ಆದ್ದರಿಂದ ಇವರಿಬ್ಬರಲ್ಲಿ ಒಬ್ಬರು ಡಾನ್-3ಯಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಆಗಿರುವುದೇ ಬೇರೆ. ಅಷ್ಟಕ್ಕೂ ಡಾನ್ ಸೀಕ್ವೆಲ್‌ನಲ್ಲಿ ಶಾರುಖ್ ಖಾನ್ ಅಭಿನಯಿಸುತ್ತಿರುವಾಗಲೇ ಅಮಿತಾಭ್ ಫ್ಯಾನ್ಸ್ ಬೇಸರಿಸಿದ್ದರು. ಅವರಂತೆಯೇ ಡಾನ್ ಪಾತ್ರಕ್ಕೆ ಜೀವ ತುಂಬುವವರು ಯಾರೂ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಶಾರುಖ್ ಖಾನ್ ಅವರು ಈ ಪಾತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಜೀವ ತುಂಬಿದ್ದರು. ಈಗ ಪಾರ್ಟ್-3 ಟೀಸರ್ ನೋಡಿದಾಗ ಫ್ಯಾನ್ಸ್ ಶಾಕ್ ಆಗಿದ್ದಾರೆ. ಕೆಲವರು ತಾವು ಈ ಚಿತ್ರವನ್ನು ನೋಡುವುದಿಲ್ಲ ಎಂದೂ ಹೇಳುತ್ತಿದ್ದಾರೆ.
ಹೌದು. ಈಗ ಬಿಡುಗಡೆಯಾಗಿರುವ ಟೈಟಲ್‌ನಲ್ಲಿ ಹೇಳಿದಂತೆ ಡಾನ್ ಪಾತ್ರಕ್ಕೆ ರಣವೀರ್ ಸಿಂಗ್ (Ranveer Singh) ಆಯ್ಕೆಯಾಗಿದ್ದಾರೆ. ಯಶ್, ಹೃತಿಕ್ ರೋಷನ್, ಶಾಹಿದ್ ಕಪೂರ್ ಅವರ ಹೆಸರು ಡಾನ್ ಪಾತ್ರಕ್ಕೆ ಕೇಳಿಬರುತ್ತಿದ್ದಾದರೂ ಈಗ ರಣವೀರ್ ಸಿಂಗ್ 'ಡಾನ್' ಆಗಿ ನಟಿಸುವುದು ತಿಳಿದಿದೆ. ಟೀಸರ್ ಮೂಲಕ ಚಿತ್ರತಂಡ ಇದನ್ನು ಸ್ಪಷ್ಟಪಡಿಸಿದೆ. ಇದನ್ನು ನೋಡಿ ಹಲವರು ಬೈಕಾಟ್ ಡಾನ್-3 ಎನ್ನುತ್ತಿದ್ದಾರೆ. ಅಮಿತಾಭ್ ಮತ್ತು ಶಾರುಖ್ ಬಿಟ್ಟರೆ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಅಪ್ಪ ಶಾರುಖ್ ಜೊತೆ 120 ಕೋಟಿಯನ್ನೂ ರಿಜೆಕ್ಟ್ ಮಾಡಿದ ಪುತ್ರ ಆರ್ಯನ್ ಖಾನ್?
ಅಂದಹಾಗೆ ಡಾನ್-3 ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ. ರಿತೇಶ್ ಸಿದ್ವಾನಿ (Ritesh Sidwani) ಜೊತೆ ಸೇರಿ ತಮ್ಮದೇ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಇದರ ನಿರ್ಮಾಣ ಮಾಡುತ್ತಿದ್ದಾರೆ. 'ಡಾನ್- 2' ಬಳಿಕ ಫರ್ಹಾನ್ ಅಖ್ತರ್ ಯಾವುದೇ ಸಿನಿಮಾ ನಿರ್ದೇಶನ ಮಾಡಲಿಲ್ಲ. 'ಜೀ ಲೆ ಝಾರಾ' ಸಿನಿಮಾ ಅನೌನ್ಸ್ ಆಗಿದೆ. ಇದೀಗ 'ಡಾನ್- 3' ಸಿನಿಮಾ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 1978 ರಲ್ಲಿ ಅಮಿತಾಭ್ ಬಚ್ಚನ್ ಈ ಪಾತ್ರಕ್ಕೆ ಜೀವ ತುಂಬಿದ್ದರು. ಈ ಮೂಲಕ ಬಾಲಿವುಡ್‌ನಲ್ಲಿ ಈ ಪಾತ್ರ ಸಕ್ಸಸ್ ಆಗಿತ್ತು. ಡೈರೆಕ್ಟರ್ ಚಂದ್ರ ಬರೋಟ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಈ ಸಿನಿಮಾವನ್ನ ಸಲ್ಮಾನ್ ಖಾನ್ ತಂದೆ ಸಲೀಮ್ ಮತ್ತು ಫರ್ಹಾನ್ ಅಖ್ತರ್ ತಂದೆ ಜಾವೀದ್ ಅಖ್ತರ್ ಬರೆದಿದ್ದರು.
ಇದೀಗ ಬಿಡುಗಡೆಯಾಗಿರುವ ಟೀಸರ್ನಲ್ಲಿ, 'ಮಲಗಿರುವ ಸಿಂಹ ಯಾವಾಗ ಎಚ್ಚರಗೊಳ್ಳುತ್ತದೆ? ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ಅಂತಹವರಿಗೆ ನಾನು ಇಲ್ಲಿದ್ದೇನೆ ಅಂತ ಹೇಳು. ನಾನು ಏನನ್ನು ಮಾಡಿದ್ದೇನೆ, ನನ್ನ ತಾಕತ್ತು ಏನು ಅನ್ನೋದನ್ನು ತೋರಿಸಲು ನಾನು ವಾಪಸ್ ಬಂದಿದ್ದೇನೆ' ಎನ್ನುವ ರಣವೀರ್ ಸಿಂಗ್ ಡೈಲಾಗ್ ಇದೆ. 'ಮೆಹೂಂ ಡಾನ್' ಎಂದು ರಣ್‌ವೀರ್ ಸಿಂಗ್ ಗನ್ ಹಿಡಿದು ದರ್ಶನ ಕೊಟ್ಟಿದ್ದಾರೆ. ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಸರ್ ಏನೋ ಕಲರ್ ಫುಲ್ ಆಗಿದೆ. ಆದರೆ ಅಮಿತಾಭ್ ಬಿಟ್ಟರೆ ಡಾನ್‌ಗೆ ಇರಬೇಕಿರೋ ಗಟ್ಟಿ ಧ್ವನಿ ಯಾರಿಗೂ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಡಾನ್-3ಗೆ ನಾಯಕಿ ಯಾರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಡಾನ್- 2 ಸಿನಿಮಾ ಬಂದು 12 ವರ್ಷಗಳ ಬಳಿಕ ಹೊಸ ಡಾನ್ ಎಂಟ್ರಿಯಾಗಿದ್ದು, ಬಾಲಿವುಡ್‌ನಲ್ಲಿ ಸಹಜವಾಗಿಯೇ ನಿರೀಕ್ಷೆ ಮೂಡಿದೆ.
RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?