ʼದೇವರ ನಾಡುʼ ಕಾಪಾಡಲು ಬಂದ ಮೋಹನ್‌ಲಾಲ್!‌ ಈ ಹೊಸ ಸಿನಿಮಾ ಅಬ್ಬರಕ್ಕೆ ರಾಜಮೌಳಿ, ರಜನಿಯೇ ಶರಣು!

Mohan Lal Starrer Empuraan Movie Trailer: ನಟ ಮೋಹನ್‌ಲಾಲ್‌ ನಟನೆಯ ʼಎಂಪ್ರಾನ್ʼ‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. 

rajinikanth ss rajamouli praise mohanlal starrer empuraan movie trailer

ಮೋಹನ್‌ಲಾಲ್ ನಟನೆಯ 'ಎಂಪ್ರಾನ್' ಸಿನಿಮಾ ಮಲಯಾಳಿಗಳಷ್ಟೇ ಅಲ್ಲ, ಬೇರೆ ಭಾಷೆಯ ಸಿನಿಮಾ ಪ್ರೇಮಿಗಳ ಗಮನವನ್ನೂ ಸೆಳೆದಿದೆ. ಈ ಮೂಲಕ ದೇವರ ನಾಡನ್ನು ಕಾಪಾಡಲು ಬಂದಂತಿದೆ. ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸುವ ಎಲ್ಲ ಲಕ್ಷಣ ಕಾಣುತ್ತಿದೆ. ಮಾರ್ಚ್‌ 20ರಂದು ಮಧ್ಯರಾತ್ರಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈಗ 'ಬಾಹುಬಲಿ' ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಕೂಡ ಈ ಸಿನಿಮಾ ಟ್ರೇಲರ್ ನೋಡಿ ಪ್ರತಿಕ್ರಿಯಿಸಿದ್ದಾರೆ. 

ರಾಜಮೌಳಿ ಹೇಳಿದ್ದೇನು? 
ಈ ಸಿನಿಮಾದ ( Empuraan Movie ) ಟ್ರೇಲರ್ ನೋಡಿದ ಮೇಲೆ ಇದೊಂದು ಬ್ಲಾಕ್‌ಬಸ್ಟರ್ ಸಿನಿಮಾ ಆಗುವ ಸೂಚನೆ ಕಾಣ್ತಿದೆ ಅಂತ ರಾಜಮೌಳಿ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. 'ಎಂಪ್ರಾನ್' ಟ್ರೇಲರ್ ಮೊದಲ ಶಾಟ್‌ನಿಂದಲೇ ನನ್ನ ಗಮನ ಸೆಳೆಯಿತು. ಮೋಹನ್‌ಲಾಲ್ ಸರ್ ಅವರ ಸ್ಕ್ರೀನ್ ಪ್ರೆಸೆನ್ಸ್ ಒಂದು ರೀತಿಯ ಆಕರ್ಷಕ ಶಕ್ತಿಯಂತೆ ಇದೆ. ದೊಡ್ಡ ಮಟ್ಟದ ಮೇಕಿಂಗ್, ಅದ್ಭುತ ಆಕ್ಷನ್. ಇದು ಈಗಲೇ ಒಂದು ದೊಡ್ಡ ಹಿಟ್ ಸಿನಿಮಾ ಆಗುವ ಹಾಗೆ ಕಾಣ್ತಿದೆ ಅಂತ ಪೃಥ್ವಿರಾಜ್ ಮತ್ತು ಮೋಹನ್‌ಲಾಲ್ ಅವರನ್ನು ಟ್ಯಾಗ್ ಮಾಡಿ ರಾಜಮೌಳಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಇನ್ನು ನಟ ರಜನೀಕಾಂತ್‌, ನಿರ್ದೇಶಕ ಆರ್‌ಜಿವಿ ಕೂಡ ಈ ಸಿನಿಮಾದ ಟ್ರೇಲರ್‌ ಮೆಚ್ಚಿದ್ದಾರೆ.

Latest Videos

ʼಅವಳ ಬೂ ನನಗೆ ಇಷ್ಟʼ-ʼತುಪ್ಪ ಬೇಕಾ ತುಪ್ಪʼ ಬಳಿಕ ನಶೆ ಏರಿಸಿದ ರಾಗಿಣಿ ದ್ವಿವೇದಿ ಹೊಸ ಹಾಡು!

ಈ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ? 
ಮಾರ್ಚ್ 27ಕ್ಕೆ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ʼಆರ್‌ಆರ್‌ಆರ್ʼ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ನಾಯಕನಾಗಿದ್ದಾರೆ. ಈ ಚಿತ್ರದ ಒಡಿಶಾ ಶೆಡ್ಯೂಲ್‌ನಲ್ಲಿ ಭಾಗವಹಿಸಿದ ನಂತರ ಪೃಥ್ವಿರಾಜ್ 'ಎಂಪ್ರಾನ್' ಪ್ರಚಾರ ಕಾರ್ಯಕ್ರಮಗಳಿಗೆ ಬಂದಿದ್ದೇನೆ” ಎಂದು ಹೇಳಿದ್ದರು. 

ಕೇರಳದ ಚಿತ್ರೋತ್ಸವದಲ್ಲಿ ಸ್ಟಾರ್‌ಗಳು ಭಾಗವಹಿಸುತ್ತಾರೆ: ಮಲಯಾಳಂ ನಿರ್ದೇಶಕ ಸಜೀನ್‌ ಬಾಬು

ಎಲ್ಲೆಲ್ಲಿ ಶೂಟಿಂಗ್‌ ಆಗಿದೆ?
2023 ಅಕ್ಟೋಬರ್ 5 ರಂದು ಫರಿದಾಬಾದ್‌ನಲ್ಲಿ ಈ ಸಿನಿಮಾ ಶೂಟಿಂಗ್ ಪ್ರಾರಂಭವಾಗಿದೆ. 'ಎಂಪ್ರಾನ್' ಸಿನಿಮಾವನ್ನು ಅಮೆರಿಕ, ರಷ್ಯಾ, ಯುಎಇ, ಚೆನ್ನೈ, ಮುಂಬೈ, ಗುಜರಾತ್, ಲಡಾಖ್, ಕೇರಳ, ಹೈದರಾಬಾದ್, ಶಿಮ್ಲಾ, ಲೇ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ದೀಪಕ್ ದೇವ್ ಸಂಗೀತ ನಿರ್ದೇಶನ ಮಾಡಿದ್ದು, ಸುಜಿತ್ ವಾಸುದೇವ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಅಖಿಲೇಶ್ ಮೋಹನ್ ಸಂಕಲನ ಮಾಡಿದ್ದಾರೆ. ಮೋಹನ್‌ದಾಸ್ ಕಲಾ ನಿರ್ದೇಶನ ಮಾಡಿದ್ದು, ಸ್ಟಂಟ್ ಸಿಲ್ವಾ ಆಕ್ಷನ್ ನಿರ್ದೇಶನ ಮಾಡಿದ್ದಾರೆ. ನಿರ್ಮಲ್ ಸಹದೇವ್ ಚಿತ್ರದ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ‌

ಮೂರು ಮಿಲಿಯನ್‌ ವೀಕ್ಷಣೆ!
ಸಂಪೂರ್ಣವಾಗಿ ಅನಾಮಾರ್ಫಿಕ್ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸಲಾದ ಈ ಚಿತ್ರದ ಮೂರನೇ ಭಾಗವು ಇದೇ ಫಾರ್ಮ್ಯಾಟ್‌ನಲ್ಲಿ ಇರಲಿದೆ ಎಂದು ನಿರ್ದೇಶಕ ಪೃಥ್ವಿರಾಜ್ ಹೇಳಿದ್ದಾರೆ. ಈ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿ ಇನ್ನು ಒಂದು ದಿನವೂ ಕಳೆದಿಲ್ಲ, ಈಗಾಗಲೇ ಮೂರು ಮಿಲಿಯನ್‌ ವೀಕ್ಷಣೆ ಕಂಡಿರೋದು ಮಾತ್ರ ಅಚ್ಚರಿಯ ಸಂಗತಿ. 
 

trailer hooked me from the very first shot… sir’s commanding presence is truly magnetic! Massive scale, stunning action 👏🏻
this already feels like a blockbuster 🤗

Wishing the team a grand release on March 27!
🔗 https://t.co/U8ZAMlKPCE

— rajamouli ss (@ssrajamouli)
vuukle one pixel image
click me!