ಜಾಹ್ನವಿ ಕಪೂರ್​ ಬಾಯ್​ಫ್ರೆಂಡ್​ಗೂ ಬಿಡದ ಜಾತಿ ನಿಂದನೆ! ಸಿಎಂ ಮೊಮ್ಮಗನ ಬಗ್ಗೆ ಛೇ ಏನಿಂಥ ಕಮೆಂಟ್​?

Published : Mar 20, 2025, 12:47 PM ISTUpdated : Mar 20, 2025, 03:25 PM IST
ಜಾಹ್ನವಿ ಕಪೂರ್​ ಬಾಯ್​ಫ್ರೆಂಡ್​ಗೂ ಬಿಡದ ಜಾತಿ ನಿಂದನೆ! ಸಿಎಂ ಮೊಮ್ಮಗನ ಬಗ್ಗೆ ಛೇ ಏನಿಂಥ ಕಮೆಂಟ್​?

ಸಾರಾಂಶ

ಜಾಹ್ನವಿ ಕಪೂರ್ ಮತ್ತು ಶಿಖರ್ ಪಹರಿಯಾ ತಿರುಪತಿಗೆ ಭೇಟಿ ನೀಡಿದ್ದು, ಜಾಹ್ನವಿ ಬೆರಳಿನ ಉಂಗುರ ಗಮನ ಸೆಳೆದಿದೆ. ಶಿಖರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳ ಮೊಮ್ಮಗ. ಈ ಹಿಂದೆ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ಇತ್ತೀಚೆಗೆ, ಶಿಖರ್ ಅವರು ಜಾತಿ ನಿಂದನೆಗೆ ಒಳಗಾಗಿದ್ದು, ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಜಾಹ್ನವಿ 'ಧಡಕ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು ಮತ್ತು ಪ್ರಸ್ತುತ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್​ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಸದ್ಯ ಸದ್ದು ಮಾಡ್ತಿರೋದು ತಮ್ಮ ಬಾಯ್​ಫ್ರೆಂಡ್​ ಜೊತೆ ಆಗಾಗ್ಗೆ ತಿರುಪತಿಗೆ ಹೋಗಿ ಬರುತ್ತಿರುವುದರಿಂದ. ಚಿತ್ರತಾರೆಯರು ದೇವಾಲಯಗಳಿಗೆ ಭೇಟಿ ಕೊಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಲ್ಲಿ  ಜಾಹ್ನವಿ ಕಪೂರ್​ ತಮ್ಮ ಬಾಯ್​ಫ್ರೆಂಡ್​ ಜೊತೆಗೆ ಆಗಾಗ್ಗೆ ಹೋಗ್ತಿರೋದೂ ಅಲ್ಲದೇ ಇತ್ತೀಚಿಗೆ  ಅವರ ಬೆರಳಿನಲ್ಲಿ ವಜ್ರದ ಉಂಗುರ  ಎಲ್ಲರ ಕಣ್ಣು ಕುಕ್ಕಿಸಿದೆ. ಜಾಹ್ನವಿ ಅವರು ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುವ ಸಮಯದಲ್ಲಿ ಈ ವಜ್ರದ ಉಂಗುರ ಎಲ್ಲರ ಕಣ್ಣಿಗೆ ಬಿದ್ದಿದ್ದು, ಅದರ ಬಗ್ಗೆ ಸಕತ್​ ಸುದ್ದಿಯಾಗುತ್ತಿದೆ. ಶಿಖರ್​ ಪಹರಿಯಾ ಜೊತೆ ಗುಟ್ಟಾಗಿ ಎಂಗೇಜ್​ಮೆಂಟ್​ ಆಯ್ತಾ ಎಂದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಮೊದಲೇ ಎಂಗೇಜ್​ಮೆಂಟ್​ ಆಗಿತ್ತಾ ಅಥವಾ ತಿರುಪತಿಯಲ್ಲಿಯೇ ಆಯಿತಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಈ ಜೋಡಿ ತಿರುಪತಿಗೆ ಹೋಗುವಾಗ ಕೈಯನ್ನು ಹೆಚ್ಚು ಮಂದಿ ಗಮನಿಸದಿದ್ದ ಕಾರಣ, ಮೊದಲೇ ಎಂಗೇಜ್​ಮೆಂಟ್​ ಆಗಿತ್ತಾ ಅಥ್ವಾ ತಿರುಪತಿಯಲ್ಲಿಯೇ ಆಗಿದ್ಯಾ ಎನ್ನೋದು ಇವರ ಫ್ಯಾನ್ಸ್​ ಪ್ರಶ್ನೆ. 

ಅಂದಹಾಗೆ ಶಿಖರ್ ಪಹರಿಯಾ (Shikhar Pahariya) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಮಾರು 6-7 ವರ್ಷಗಳ ಹಿಂದೆ, ಜಾಹ್ನವಿ ಅವರೊಂದಿಗಿನ  ಅವರ ಸಂಬಂಧದ ವಿಷಯವು ಮುನ್ನೆಲೆಗೆ ಬಂದಿತ್ತು.  ಅವರ ಫೋಟೋ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ನಟಿಯನ್ನು ಚುಂಬಿಸುತ್ತಿರುವುದು ಕಂಡುಬಂದಿತ್ತು. ಇವರಿಬ್ಬರ ನಡುವೆ ನಂತರದಲ್ಲಿ ಏನೋ ಬ್ರೇಕಪ್​ ಆಗಿ ಪುನಃ ಈಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಸದ್ಯ ಇವರು ಉದ್ಯಮಿಯಾಗಿದ್ದಾರೆ.  ಆದರೆ ಇದೀಗ ವಿಷಯ ಇವರಿಬ್ಬರ ನಡುವಿನ ಸಂಬಂಧದದ್ದಲ್ಲ. ಬದಲಿಗೆ ಜಾತಿಯತೆ, ಜಾತಿ ನಿಂದನೆ ಎನ್ನುವುದು ಎಂಥವರನ್ನೂ ಬಿಡುತ್ತಿಲ್ಲ, ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಕೆಲವೊಂದು ಕೀಳು ಮನಸ್ಥಿತಿಯವರು ಎಂಥ ಮಾತುಗಳನ್ನಾಡುತ್ತಾರೆ, ಜಾತಿ ಜಾತಿ ಎಂದು ಹೇಗೆ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ ಎಂಬ ಕಾರಣಕ್ಕೆ ಶಿಖರ್​ ಪಹರಿಯಾ ಅವರಿಗೆ ಬಂದಿರುವ ಕಮೆಂಟ್​ ಸಾಕ್ಷಿಯಾಗಿದೆ. 

ಪ್ರತಿವರ್ಷ ತಿರುಪತಿ ಬೆಟ್ಟ ಮೊಣಕಾಲಲ್ಲಿ ಏರುವ ಜಾಹ್ನವಿ: ಕಾರಣ ಕೇಳಿ ಶ್ಲಾಘನೆಗಳ ಮಹಾಪೂರ
 
ಇವರಿಬ್ಬರೂ ಆಗಾಗ್ಗೆ ತಾವು ಒಟ್ಟಿಗೇ ಇರುವ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಈಗ ತಾವು ನಾಯಿಯ ಜೊತೆ ಇರುವ  ಫೋಟೋ ಶೇರ್​ ಮಾಡಿಕೊಂಡ ಸಂದರ್ಭದಲ್ಲಿ ಶಿಖರ್​ ಅವರಿಗೆ, ಅದೇನೇ ಇರಲಿ, ನೀನೊಬ್ಬ ದಲಿತ ಎಂದು ಹಾಸ್ಯದ ಎಮೋಜಿ ಹಾಕಿ ನೆಟ್ಟಿಗನೊಬ್ಬ ಕಮೆಂಟ್​ ಮಾಡಿದ್ದಾರೆ.   ಕ್ಯಾಂಡಿಬಾಬೇ ಎನ್ನುವ ಇನ್ಸ್​ಟಾಗ್ರಾಮ್​ನಿಂದ ಈ ಮೆಸೇಜ್​ ಬಂದಿದೆ. ಆದರೆ, ಇದಕ್ಕೆ ಶಿಖರ್​ ಅವರು ತಿರುಗೇಟು ನೀಡುವ ಮೂಲಕ, ದಲಿತ ಎಂದಿರುವವರ ಕೆನ್ನೆಗೆ ಬಾರಿಸಿದ್ಆರೆ.  'ಇಂದಿಗೂ ನಿಮ್ಮಂತಹ ಜನರು ಸಂಕುಚಿತ ಮತ್ತು ಹಿಂದುಳಿದ ಮನಸ್ಥಿತಿಯನ್ನು ಹೊಂದಿರುವುದು ನಿಜಕ್ಕೂ ನಿರಾಶಾದಾಯಕವಾಗಿದೆ. ದೀಪಾವಳಿಯು ಬೆಳಕು ಮತ್ತು ಏಕತೆಯ ಹಬ್ಬವಾಗಿದ್ದು, ಇದು ನಿಮ್ಮ ಕಲ್ಪನೆಗೂ ಮೀರಿದ್ದು. ಭಾರತದ ಶಕ್ತಿ ಯಾವಾಗಲೂ ಅದರ ವೈವಿಧ್ಯತೆಯಲ್ಲಿದೆ. ನೀವು ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಬಹುಶಃ ಅಜ್ಞಾನವನ್ನು ಹರಡುವ ಬದಲು ನೀವು ನಿಮ್ಮನ್ನು ಶಿಕ್ಷಣದ ಮಾರ್ಗದಲ್ಲಿ ಕೊಂಡೊಯ್ಯಬೇಕು. ನೀವು ಅತ್ತ ಗಮನಹರಿಸಬೇಕಿದೆ.  ಏಕೆಂದರೆ ಈಗ ಅಸ್ಪೃಶ್ಯ ಎಂದರೆ ಅದು ನಿಮ್ಮ ಆಲೋಚನಾ ಮಟ್ಟ' ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. 

ಜಾಹ್ನವಿಯವರ ಸಿನಿ ಪಯಣದ ಕುರಿತು ಹೇಳುವುದಾದರೆ, ಈಕೆ ಅಮ್ಮನ ಹಾದಿಯಲ್ಲಿಯೇ ಸಾಗುತ್ತಿದ್ದು, ಚಿತ್ರರಂಗದಲ್ಲಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ.  2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ 26 ವರ್ಷದ ಜಾಹ್ನವಿ ಕಪೂರ್​,  ಮಿಲಿ ಚಿತ್ರದಲ್ಲಿಯೂ  ಪ್ರಶಂಸೆ ಗಳಿಸಿದವರು.   ಇವರು,  ಇತ್ತೀಚೆಗೆ ಕರಣ್ ಜೋಹರ್ ಅವರ ‘ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ‘ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು .  ಸದ್ಯ ‘ಮಿಸ್ಟರ್ ಅಂಡ್ ಮಿಸೆಸ್ ಮಾಹಿ’, ‘ದೇವ್ರಾ’, ‘ಬಡೆ ಮಿಯಾನ್ ಚೋಟೆ ಮಿಯಾನ್ 2’ ಮತ್ತು ಉಲ್ಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  
 

ಶ್ರೀದೇವಿ ಸಾವಿಗಿಂದು 7 ವರ್ಷ: ವಾರದ ಹಿಂದೆಯೇ ನಡೆದಿತ್ತು ಸಂಚು? ನಟಿಗೆ ಮಾಮುಷಿ ವಿಷ ಕೊಟ್ಟವರಾರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?