'ಸೂಪರ್ ಸ್ಟಾರ್' ಹೆಸರು ತೆಗೆದು ಹಾಕಲು ಹೇಳಿದೆ: 'ಜೈಲರ್' ಈವೆಂಟ್‌ನಲ್ಲಿ ರಜನಿಕಾಂತ್ ಮಾತು

Published : Jul 29, 2023, 12:11 PM ISTUpdated : Jul 31, 2023, 03:25 PM IST
'ಸೂಪರ್ ಸ್ಟಾರ್' ಹೆಸರು ತೆಗೆದು ಹಾಕಲು ಹೇಳಿದೆ: 'ಜೈಲರ್' ಈವೆಂಟ್‌ನಲ್ಲಿ ರಜನಿಕಾಂತ್ ಮಾತು

ಸಾರಾಂಶ

ಜೈಲರ್ ಆಡಿಯೋ ರಿಲೀಸ್ ಈವೆಂಟ್ ನಲ್ಲಿ ರಜನಿಕಾಂತ್ ಮಾತನಾಡಿ ಸೂಪರ್ ಸ್ಟಾರ್ ಪದವನ್ನು ತೆಗೆದುಹಾಕುವಂತೆ ಹೇಳಿದ್ದೆ ಎಂದು ಹೇಳಿದ್ದಾರೆ.  

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಜೈಲರ್ ಸಿನಿಮಾದ ಆಡಿಯೋ ಅದ್ದೂರಿಯಾಗಿ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾದಿಂದ ಕಾವಾಲ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಸಿನಿಮಾದ ಸಂಪೂರ್ಣ ಆಡಿಯೋ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಚೆನ್ನೈನಲ್ಲಿ ನಡೆದ ಅದ್ದೂರಿ ಈವೆಂಟ್ ನಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಕನ್ನಡದ ಸ್ಟಾರ್ ಶಿವರಾಜ್ ಕುಮಾರ್, ತಮನ್ನಾ, ನೆಲ್ಸನ್ ದಿಲೀಪ್ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. 

ಅದ್ದೂರಿ ಈವೆಂಟ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮಾತುಗಳು ವೈರಲ್ ಆಗಿವೆ. ರಜವನಿಕಾಂತ್ ಸುಮಾರು ಒಂದು ಗಂಟೆ ವೇದಿಕೆ ಮೇಲೆ ಮಾತನಾಡಿದ್ದಾರೆ. ಅಣ್ಣಾತೆ ಸಿನಿಮಾ ಬಳಿಕ ಅನೇಕ ಸ್ಕ್ರಿಪ್ಟ್‌ಗಳನ್ನು ರಿಜೆಕ್ಟ್ ಮಾಡಿದೆ ಎಂದು ಹೇಳಿದ್ದಾರೆ. ಎಲ್ಲಾ ಸ್ಕ್ರಿಪ್ಟ್‌ಗಳು ಹಳೆಯ ಸಿನಿಮಾಗಳಾದ ಬಾಷಾ ಮತ್ತು ಅಣ್ಣಮಲೈ ಹಾಗೆ ಇರುತ್ತಿತ್ತು. ಹಾಗಾಗಿ ಅನೇಕ ಕಥೆಗಳನ್ನು ರಿಜೆಕ್ಟ್ ಮಾಡಿದ್ದೆ ಎಂದು ಹೇಳಿದರು. ರಜನಿಕಾಂತ್ ಸ್ಕ್ರಿಪ್ಟ್ ಕೇಳುವುದನ್ನೇ ನಿಲ್ಲಿಸಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು. 

ನಿರ್ದೇಶಕರನ್ನು ಬದಲಾಯಿಸುವಂತೆ ಒತ್ತಡ

ನಿರ್ದೇಶಕ ನೆಲ್ಸನ್ ಬಗ್ಗೆ ಮಾತನಾಡಿ, 'ಬಿಸ್ಟ್ ಸಿನಿಮಾ ಬಳಿಕ ನೆಲ್ಸನ್ ಜೊತೆ ಜೈಲರ್ ಸಿನಿಮಾ ಅನೌನ್ಸ್ ಮಾಡಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನೆಲ್ಸನ್ ಅವರನ್ನು ಬದಲಾಯಿಸುವಂತೆ ಅನೇಕರು ಒತ್ತಡ ಹಾಕಿದರು. ನಿಂದನೆ ಎದುರಿಸಿದರು. ಆದರೆ ನಾನು ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೆ. ಬಳಿಕ ಟ್ವಿಟ್ಟರ್ ನಲ್ಲಿ ಜೈಲರ್ ಪೋಸ್ಟರ್ ಅನ್ನು ಡಿಪಿ ಹಾಕಿದೆ' ಎಂದು ಹೇಳಿದರು. 

ಸೂಪರ್ ಸ್ಟಾರ್ ಹೆಸರು ತೆಗೆದು ಹಾಕಲು ಹೇಳಿದ್ದೆ

ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಆದರೆ ಈ ಹೆಸರು ರಜನಿಕಾಂತ್ ಅವವರಿಗೆ ಯಾಕೋ ಇಷ್ಟವಾಗುತ್ತಿಲ್ಲ. ಈ ಹೆಸರನ್ನು ತೆಗೆದುಹಾಕುವಂತೆ ಸಿನಿಮಾತಂಡಕ್ಕೆ ತಲೈವಾ ಒತ್ತಾಯ ಮಾಡಿದ್ದರು. ಜೈಲರ್ ಸಿನಿಮಾದ ಹುಕುಂ ಮತ್ತು ಜುಜುಬಿ ಹಾಡನ್ನು ಬರೆದಿರುವ ಗೀತರಚನೆಕಾರ ಸೂಪರ್ ಸುಬು ಅವರನ್ನು ರಜನಿಕಾಂತ್ ಹೊಗಳಿದರು. ಅವರಿಗೆ ಹಾಡಿನ ಸಾಲಿನಲ್ಲಿದ್ದ ಸೂಪರ್ ಸ್ಟಾರ್ ಪದವನ್ನು ತೆಗೆದು ಹಾಕುವಂತೆ ಹೇಳಿದ್ದೆ. ಯಾಕೆಂದರೆ ಸೂಪರ್ ಸ್ಟಾರ್ ಪದ ಯಾವಾಗಲೂ ಸಮಸ್ಯೆಯಾಗಿದೆ ಎಂದು ಹೇಳಿದರು. 

Jailer Audio Launch:ನಾನು ಹುಟ್ಟಿದ್ದು ಚೆನ್ನೈನಲ್ಲಿ, ಧನುಷ್ ತುಂಬಾ ಇಷ್ಟ- ಜೈಲರ್ ಈವೆಂಟ್‌ನಲ್ಲಿ ಶಿವಣ್ಣ ಮಾತು

ಜೈಲರ್ ಸಿನಿಮಾ ಬಗ್ಗೆ 

ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿ ಜೊತೆ ಶಿವಣ್ಣ ಆಕ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ನಟಿಸಿರುವುದರಿಂದ  ಕನ್ನಡಿಗರಿಗೂ ಈ ಕೂಡ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.

ರಜನಿಕಾಂತ್ 'ಜೈಲರ್' ಕರ್ನಾಟಕ ವಿತರಣೆ ಹಕ್ಕು ಸೋಲ್ಡ್ ಔಟ್: ಮತ್ತೆ ಜಯಣ್ಣ ಪಾಲಿನ ಆಪದ್ಬಾಂಧವ ಆಗ್ತಾರಾ ಶಿವಣ್ಣ?

ಜೈಲರ್ ಸಿನಿಮಾ ಬಗ್ಗೆ ಹೇಳುವುದಾದರೆ ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು, ಮಲಯಾಳಂ ಸ್ಟಾರ್ ಮೋಹನ್ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಜೈಲರ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?