ಲವ್ ವಿಷಯದಲ್ಲಿ ತಮಗೆ ಎಲ್ಲರೂ ಕೈಕೊಟ್ಟವರೇ ಎಂದಿರುವ ನಟಿ ಕಂಗನಾ ಅವರಿಗೆ ಮನದಲ್ಲಿ ಪ್ರೀತಿ ವಿಷಯವಾಗಿ ಒಂದು ವಿಚಿತ್ರ ಕೋರಿಕೆ ಇದೆಯಂತೆ. ಏನದು?
ಕಾಂಟ್ರೋವರ್ಸಿ ಕ್ವೀನ್ ಎಂದೇ ಖ್ಯಾತರಾದವರು ನಟಿ ಕಂಗನಾ ರಣಾವತ್. ಇವರ ಪ್ರೀತಿಯ ಜೀವನವು ಕೂಡ ವಿವಾದದ ಸುಳಿಯಲ್ಲಿಯೇ ಸಿಲುಕಿರುವಂಥದ್ದು. ನಟಿ ಯಾರ ಜೊತೆ ಪ್ರೀತಿಗೆ ಬಿದ್ದಿದ್ದರೂ ಅವರು ನಟಿಗೆ ಕೈಕೊಟ್ಟು ಹೋದವರೇ. ಅವರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದವರು ಹೃತಿಕ್ ರೋಷನ್. ಕಂಗನಾ ರಣಾವತ್ (Kangana Ranaut) ಮತ್ತು ನಟ ಹೃತಿಕ್ ರೋಷನ್ ಅವರ ನಡುವಿನ ಲವ್ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್ ರೋಷನ್ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್ ರೋಷನ್ (Hrithik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್ ರೋಷನ್ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು. ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರಣಾವತ್ ನಡುವೆ ನಂತರ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಕಿತ್ತಾಟದ ಬಳಿಕವಷ್ಟೇ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು.
ಇದಾದ ಬಳಿಕ ಕಂಗನಾಗೆ ಲವ್ ವಿಷಯದಲ್ಲಿ ಮೇಲಿಂದ ಮೇಲೆ ಸೋಲುಂಟಾಯಿತು. ಇವರ ಹೆಸರು ಹೆಚ್ಚಾಗಿ ಕೇಳಿಬಂದದ್ದು ಖ್ಯಾತ ಕಿರುತೆರೆ ನಿರೂಪಕ ಶೇಖರ್ ಸುಮನ್ (Shekhar Suman) ಪುತ್ರ ಅಧ್ಯಯನ್ ಸುಮನ್ (Adhyayan Suman) ಅವರ ಜೊತೆ. ಇವರಿಬ್ಬರ ಅಫೇರ್ ಮತ್ತು ಅವರ ವಿವಾದದ ಕಥೆ ತುಂಬಾ ಹಳೆಯದು. 2008 ಮತ್ತು 2009ರಲ್ಲಿ ಅಧ್ಯಯನ್ ಮತ್ತು ಕಂಗನಾ ಇಬ್ಬರು ತುಂಬಾ ಸ್ನೇಹಿತರಾಗಿದ್ದರು. ಇವರ ಸದಾ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರಿಂದ ಡೇಟಿಂಗ್ನಲ್ಲಿ ಇದ್ದಾರೆ ಎನ್ನುವ ಸುದ್ದಿಯಾಗಿತ್ತು, ಜೊತೆಗೆ ಅವರಿಬ್ಬರ ನಡುವೆ ಇದ್ದ ಪ್ರೀತಿಯ ಬಗ್ಗೆ ಅನೇಕ ಮಾತುಗಳು ಕೇಳಿ ಬಂದಿದ್ದವು. ನಂತರ ಇವರಿಬ್ಬರ ಸಂಬಂಧ ಬ್ರೇಕ್ ಆಗಿರುವ ಬಗ್ಗೆ ಸುದ್ದಿಯಾಗಿದ್ದರೂ ಇವರಿಬ್ಬರ ನಡುವೆ ಏನಾಯಿತು ಎನ್ನುವುದು ಸೀಕ್ರೆಟ್ ಆಗಿಯೇ ಉಳಿದಿತ್ತು. ಆದರೆ 2016ರಲ್ಲಿ ನಟ ಅಧ್ಯಯನ್ ಕಂಗನಾ ಬಗ್ಗೆ ಸ್ಫೋಟಕ ಮಾಹಿತಿ ತಿಳಿಸಿದ್ದರು. ಅದೇನೆಂದರೆ, ಕಂಗನಾ ಮಾದಕ ದ್ರವ್ಯವನ್ನು ಸೇವಿಸುತ್ತಾರೆ ಎಂದು ಹೇಳಿದ್ದರು. ಆದ್ದರಿಂದ ತಾವು ಬ್ರೇಕ್ ಮಾಡಿಕೊಂಡಿರುವುದಾಗಿ ಹೇಳಿದ್ದರು. ಕೊನೆಗೆ ತಾವು ಹೇಳಿದ್ದು ನಿಜವಾದ ಮಾತಲ್ಲ ಎಂದೂ ಸಮಜಾಯಿಷಿ ಕೊಟ್ಟಿದ್ದರು.
ಬಾಲಿವುಡ್ ಕಂಗನಾ ಮಾದಕ ದ್ರವ್ಯ ವ್ಯಸನಿಯೇ? Ex ಹೇಳಿದ್ದಿಷ್ಟು
ಹೀಗೆ ನಟಿಯ ಲವ್ ಲೈಫ್ ತುಂಬಾ ನೋವಿನಿಂದಲೇ ಕೂಡಿದೆ. ಈ ಬಗ್ಗೆ ಈಗ ಖುದ್ದು ನಟಿ ಕಂಗನಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಪ್ರೀತಿಯ ಕುರಿತು ಮನಸ್ಸಿನಲ್ಲಿ ಅಪಾರ ನೋವು ಇಟ್ಟುಕೊಂಡಿರೋ ಕಂಗನಾ ಹೊರಗೆ ಮಾತ್ರ ಹಾಸ್ಯದ ರೂಪದಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರೀತಿಯ ವಿಷಯಕ್ಕೆ ಬಂದಾಗ 16 ರಿಂದ 31ನೇ ವಯಸ್ಸಿನವರೆಗೆ ಎಲ್ಲರೂ ನನಗೆ ಕೈಕೊಟ್ಟವರೇ ಎಂದಿದ್ದಾರೆ ಕಂಗನಾ. ಪ್ರೀತಿ, (Love Matter)ರಿಲೇಷನ್ಶಿಪ್ ವಿಚಾರ ಬಂದರೆ ನಾನು ಯಾರನ್ನೂ ಡಂಪ್ ಮಾಡಿಲ್ಲ. ನಾನು ಪ್ರೀತಿಸಿದವರೇ ನನಗೆ ಮೋಸ ಮಾಡಿ ಹೋಗಿದ್ದಾರೆ ಎಂದಿದ್ದಾರೆ.ಪ್ರತಿಸಲವೂ ನನ್ನನ್ನು ಬಿಟ್ಟು ಹೋಗಿದ್ದಾರೆ. ಎಲ್ಲ ರಿಲೇಷನ್ಶಿಪ್ನಲ್ಲಿಯೂ ನನ್ನನ್ನು ಕೈಬಿಟ್ಟು ಹೋಗಿದ್ದಾರೆ. ನನಗೆ ಮೋಸ ಮಾಡಿ ಹೋಗಿದ್ದಾರೆ ಎಂದು ಹಾಸ್ಯ ಮಿಶ್ರಿತ ಧಾಟಿಯಲ್ಲಿಯೇ ನೋವು ತೋಡಿಕೊಂಡಿದ್ದಾರೆ ನಟಿ. ನಂತರ ಅದೇ ಹಾಸ್ಯದೊಂದಿಗೆ ಮಾತನಾಡಿದ ಅವರು, ನನ್ನನ್ನು ಬಿಟ್ಟು ಹೋದವರೆಲ್ಲಾ ಮರಳಿ ನನ್ನ ಬಳಿಗೆ ಬಂದೇ ಬರುತ್ತಿದ್ದರು. ಆದರೆ ಅವರನ್ನು ನಾನು ಹತ್ತಿರಕ್ಕೆ ಸೇರಿಸಿಕೊಳ್ಳಲೇ ಇಲ್ಲ. ಏಕೆಂದರೆ ಇನ್ನೊಬ್ಬ ಮೋಸ ಮಾಡುವವರ ಪ್ರೀತಿಗೆ ನಾನು ಬಿದ್ದಿರುತ್ತಿದ್ದೆ. ಅವರೂ ಮೋಸ ಮಾಡಿ ಹೋಗಿ ಮರಳಿ ಬರುವಷ್ಟರಲ್ಲಿ ಇನ್ನೊಬ್ಬರ ಪ್ರೀತಿಯಲ್ಲಿ ಬಿದ್ದಿರುತ್ತಿದ್ದೆ ಎಂದೂ ತಪ್ಪೊಪ್ಪಿಕೊಂಡಿದ್ದಾರೆ.
ಇದೇ ವೇಳೆ ನಟಿ, ತಮ್ಮ ಮನಸ್ಸಿನ ವಿಚಿತ್ರ ಕೋರಿಕೆಯನ್ನೂ ಮುಂದಿಟ್ಟಿದ್ದಾರೆ. ಅದೇನೆಂದರೆ, ನಟಿ ಕಂಗನಾ ಅವರಿಗೆ ಒಂದು ಆಸೆ ಇದೆಯಂತೆ. ಅದೇನೆಂದರೆ ಇಲ್ಲಿಯವರೆಗೆ ಎಲ್ಲರೂ ಅವರನ್ನು ಮೋಸ ಮಾಡಿದವರೇ. ಅದಕ್ಕಾಗಿ ತಾವೂ ಯಾರನ್ನಾದರೂ ಪ್ರೀತಿಸಿ ಮೋಸ (Fraud) ಮಾಡಬೇಕು ಎಂಬ ಇಚ್ಛೆ ಇದೆ ಎಂದಿದ್ದಾರೆ. ನಾನು ಯಾರನ್ನಾದರೂ ಪ್ರೀತಿಸಿ ನಂತರ ಕೈಕೊಡಬೇಕು. ಅವರಿಗೆ ಲೇ... ಇಲ್ಲಿಂದ ಮೊದಲು ತೊಲಗು... ಇವತ್ತಿನಿಂದ ನಿನ್ನ ಮುಖ ತೋರಿಸಬೇಡ... ಎಂದು ಯಾರಿಗಾದರೂ ಹೇಳುವ ಆಸೆ ಇದೆ. ಆದರೆ ಇಲ್ಲಿಯವರೆಗೆ ಯಾರೂ ಸಿಗಲಿಲ್ಲ ಎಂದು ನಟಿ ಮನಸ್ಸಿನ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿದ ಈಕೆಯ ಫ್ಯಾನ್ಸ್ ಅಬ್ಬಾ! ಯಾರಿಗೆ ಕಾದಿದ್ಯೋ, ಯಾರಪ್ಪಾ ಆ ಬಕರಾ ಅಂತಿದ್ದಾರೆ.
ಕಂಗನಾ, ಹೃತಿಕ್ ರೋಷನ್ ಲವ್ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್ ಮಸ್ಕ್ ಟ್ವೀಟ್!