ಎರಡನೇ ಮದುವೆ ವಿಚಾರವಾಗಿ ಮಗಳ ಜೊತೆ ರಜನಿಕಾಂತ್ ಜಗಳ; ಬಾಂಬ್‌ ಸಿಡಿಸಿದ ಯುಟ್ಯೂಬರ್!

Published : Aug 01, 2023, 12:48 PM IST
ಎರಡನೇ ಮದುವೆ ವಿಚಾರವಾಗಿ ಮಗಳ ಜೊತೆ ರಜನಿಕಾಂತ್ ಜಗಳ; ಬಾಂಬ್‌ ಸಿಡಿಸಿದ ಯುಟ್ಯೂಬರ್!

ಸಾರಾಂಶ

ಯುವ ನಿರ್ದೇಶಕನ ಜೊತೆ ಐಶ್ವರ್ಯ ಎರಡನೇ ಮದುವೆ. ಬಿಲ್‌ಕುಲ್ ಬೇಡ ಎನ್ನುತ್ತಿರುವ ರಜನಿಕಾಂತ್. ಕಾರಣವೇನು?

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅದೆಷ್ಟೇ ಸಿನಿಮಾ ಮಾಡಿದರೂ ಅದೆಷ್ಟೇ ಹಣ ಸಂಪಾದನೆ ಮಾಡಿದರೂ ವೃತ್ತಿ ಬದುಕು ಕಲರ್‌ಫುಲ್ ಆಗಿರುವಷ್ಟು ವೈಯಕ್ತಿಕ ಬದುಕು ಇಲ್ಲ. ಇಬ್ಬರು ಹೆಣ್ಣು ಮಕ್ಕಳ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ತಮ್ಮ ತಮ್ಮ ಲೈಫ್‌ ಸೆಟಲ್ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಕೊಂಚ ಬೇಸರ ವ್ಯಕ್ತಿ ಪಡಿಸದಿದ್ದರೂ ಅವರ ಮುಖದಲ್ಲಿ ಕಾಣಿಸುತ್ತದೆ. ಅಲ್ಲದೆ ಇತ್ತೀಚಿಗೆ ಐಶ್ವರ್ಯ ಯುವ ನಿರ್ದೇಶನ ಜೊತೆ ಕಾಣಿಸಿಕೊಳ್ಳುತ್ತಿರುವುದು ವಿವಾದ ಸೃಷ್ಟಿ ಮಾಡುತ್ತಿದೆ ಎನ್ನಬಹುದು. ಇದೇ ಕಾರಣಕ್ಕೆ ರಜನಿ ಒಂಟಿ ಪ್ರಯಾಣ ಕೂಡ ಮಾಡಿರಬಹುದು....

ಹೌದು! ಧನುಷ್‌ ಜೊತೆ ವಿಚ್ಛೇದನ ಪಡೆದ ಬಳಿಕ ಐಶ್ವರ್ಯ ಯುವ ನಿರ್ದೇಶನ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಇವರಿಬ್ಬರು ಮದುವೆ ಆಗಲಿದ್ದಾರೆ ಹಾಗೆ ಹೀಗೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ತಲೈವಾ ಆಗಲಿ ಐಶ್ವರ್ಯ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ ಆದರೆ ರಜನಿಕಾಂತ್‌ಗೆ ಮಗಳ ಮದುವೆ ಇಷ್ಟವಿಲ್ಲ ಧನುಷ್ ಸೂಕ್ತವಾದ ವ್ಯಕ್ತಿ ಎರಡನೇ ಮದುವೆ ಬೇಡ ಎಂದು ಹೇಳಿದಕ್ಕೆ ಐಶ್ವರ್ಯ ಮುನಿಸಿಕೊಂಡಿದ್ದಾರೆ ಅಂತ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತರು ಹೊಸ ಬಾಂಬ್ ಸಿಡಿಸಿದದ್ದರು. ಈ ಬೇಸರದಿಂದ ತಲೈವಾ ಒಂಟಿಯಾಗಿ ಪ್ರಯಾಣ ಕೂಡ ಮಾಡಿದ್ದರಂತೆ. 

30-72 ವಯಸ್ಸಾದರೇನು?; ಜೈಲರ್‌ನಲ್ಲಿ ರಜನಿಕಾಂತ್ ಜೊತೆ ವಯಸ್ಸಿನ ಟೀಕೆಗಳು: ಖಡಕ್ ಉತ್ತರ ಕೊಟ್ಟ ತಮನ್ನಾ!

ಕೆಲವು ದಿನಗಳ ಹಿಂದೆ ಜೈಲರ್ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ರಜನಿಕಾಂತ್ ಮಾಲ್ಡೀವ್ಸ್ ಟ್ರಿಪ್ ಮಾಡಿದ್ದರು. ಯಾಕೆ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿತ್ತು ಆದರೆ ಉತ್ತರ ಸಿಗಲಿಲ್ಲ. ಬೇಸರದಲ್ಲಿ ಅನ್ನೋ ವಿಚಾರ ಈಗ ತಿಳಿದು ಬರುತ್ತಿದೆ. ಮನಸ್ತಾಪ ವಿಚಾರ ಸುದ್ದಿಯಾಗುತ್ತಿದ್ದಂತೆ ಐಶ್ವರ್ಯ ಮದುವೆ ವಿಚಾರವಾಗಿ ಏನೂ ಹೇಳಿಲ್ಲ ಬದಲಿಗೆ ತಂದೆ ಜೊತೆ ಫೋಟೋ ಹಾಕಿದ್ದಾರೆ. ಜೈಲರ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ತಂದೆಯನ್ನು ತಬ್ಬಿಕೊಂಡಿರುವ ಫೋಟೋ ಅಪ್ಲೋಡ್ಮ ಮಾಡುವ ಮೂಲಕ ನಮ್ಮಿಬ್ಬರ ನಡುವೆ ಯಾವ ಬೇಸರವಿಲ್ಲ ಜಗಳವಿಲ್ಲ ಎಂದು ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. 

ಅತ್ತೆ ಸ್ಟ್ರಿಕ್ಟ್‌ ಆಗಿದ್ದರು ಬಜೆಟ್‌ ಹಿಡಿತದಲ್ಲಿರುತ್ತಿತ್ತು, ನಾನು ಅಪ್ಪು ತರ ಫುಲ್ ಫ್ರೀ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಮೂಲಹಳ ಪ್ರಕಾರ ಐಶ್ವರ್ಯಾ ರಜನಿಕಾಂತ್‌ ಇತ್ತೀಚೆಗೆ ಯುವ ನಟನೊಂದಿಗೆ ಜೊತೆಯಾಗಿ ಚೆನ್ನೈನ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ವರದಿಗಳಿವೆ. ತಮಿಳುನಾಡು ಸಿನಿಮಾ ಮೂಲಗಳ ವರದಿಯ ಪ್ರಕಾರ, ಐಶ್ವರ್ಯಾ ರಜನಿಕಾಂತ್‌ 2ನೇ ಮದುವೆಯಾಗಲು ನಿರ್ಧಾರ ಮಾಡಿದ್ದು, ಅದೇ ಯುವ ನಟನೊಂದಿಗೆ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.ಇಂಗ್ಲೀಷ್‌ ಡಿಜಿಟಲ್ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯಾ ರಜನಿಕಾಂತ್ ಅವರ ಆಪ್ತ ಮೂಲಗಳು ಇದನ್ನು ಬಹಿರಂಗಪಡಿಸಿದ್ದಾರೆ. "ಐಶ್ವರ್ಯಾ ಅವರ 2ನೇ ಮದುವೆಯ ಎಲ್ಲಾ ವದಂತಿಗಳು ಸುಳ್ಳು. ಅವುಗಳಲ್ಲಿ ಯಾವುದೇ ಸತ್ಯವಿಲ್ಲ. ಅವರು ಎರಡನೇ ಮದುವೆಯನ್ನು ಮಾಡಿಕೊಂಡಿಲ್ಲ. ಅಥವಾ ಈ ಕುರಿತಾದ ಯಾವುದೇ ಯೋಜನೆಗಳಿಲ್ಲ" ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?