ನಟ ರಾಜೀವ್ ಖಂಡೇಲ್ವಾಲ್ ತಮಗೆ ಇಂಡಸ್ಟ್ರಿಯಲ್ಲಿ ಆಗಿರುವ ಭಯಾನಕ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವರು ಹೇಳಿದ್ದೇನು?
ಕಾಸ್ಟಿಂಗ್ ಕೌಚ್ (cast couching) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದರ ಬಗ್ಗೆ ಒಂದೆಡೆ ಟೀಕೆ ಟಿಪ್ಪಣೆಗಳೂ ಕೇಳಿ ಬರತೊಡಗಿದವು. ಕ್ರಮೇಣ ಈಗ ಈ ಸುದ್ದಿ ತಣ್ಣಗಾಗುತ್ತಾ ಬಂದಿದೆ. ಆದರೆ ಕಾಸ್ಟಿಂಗ್ ಕೌಚ್ ಅಥವಾ ಮೀ ಟೂ (Me too) ಎಂದಾಕ್ಷಣ ನೆನಪಾಗುವುದು ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಎಂದೇ. ಆದರೆ ಅಸಲಿಗೆ ಹಾಗಲ್ಲ. ಪುರುಷರ ಮೇಲೂ ಇಂಥ ಘಟನೆಗಳು ನಡೆದಿರುವುದು ಅಲ್ಲಲ್ಲಿ ವರದಿಯಾಗಿದೆ. ಇತ್ತೀಚೆಗೆ ಖ್ಯಾತ ನಟ, 'ಉದರಿಯಾನ್' ಹಿಂದಿ ಧಾರಾವಾಹಿ ಮೂಲಕ, ಸೂಪರ್ ಹೀರೋ (Hero) ಎನಿಸಿಕೊಂಡಿರುವ ನಟ ಅಂಕಿತ್ ಗುಪ್ತಾ ಈಗ ತಮಗಾಗಿರುವ ಕಹಿ ಅನುಭವಗಳನ್ನು ತೆರೆದಿಟ್ಟಿದ್ದರು. ಹಿಂದಿಯ 'ಬಿಗ್ ಬಾಸ್ 16' (Bigg Boss 16) ರ ಸ್ಪರ್ಧಿಯಾಗಿದ್ದ ಅಂಕಿತ್ ಅವರು ಮಹಿಳೆಯೊಬ್ಬರಿಂದ ಆಗಿರುವ ಕಹಿ ಅನುಭವ ಹಂಚಿಕೊಂಡಿದ್ದರು.
ಇದೀಗ ಅಂಥದ್ದೇ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ನಿರ್ದೇಶಕರೊಬ್ಬರು ತಮ್ಮನ್ನು ಮಂಚಕ್ಕೆ ಕರೆದಿದ್ದು, ಅದರಿಂದ ತಾವು ಹೇಗೆ ತಪ್ಪಿಸಿಕೊಂಡು ಬಂದೆ ಎಂಬುದನ್ನು ವಿವರಿಸಿದ್ದಾರೆ ನಟ ರಾಜೀವ್ ಖಂಡೇಲ್ವಾಲ್ ತಾನು ಕೂಡ ಕಾಸ್ಟಿಂಗ್ ಕೌಚ್ ಸಂತ್ರಸ್ತ ಎಂದಿದ್ದಾರೆ. ಇದೇ ವೇಳೆ ಪುರುಷರಿಗೇ ಹೀಗಾದರೆ ಇನ್ನು ನಟಿಯರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ. ಅಂದಹಾಗೆ, ರಾಜೀವ್ ಖಂಡೇಲ್ವಾಲ್ (Rajeev Khandelwal) ಅವರು, ಬಾಲಿವುಡ್ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ, ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಆಮೀರ್, ಸೈತಾನ್, ವಿಲ್ ಯು ಮ್ಯಾರಿ, ಫೀವರ್, ಪ್ರಣಾಮ್, ಸಲಾಂ ವೆಂಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಗೆ ಸಚ್‌ಕೆ ಸಾಮ್ನಾ, ಸೂಪರ್ ಕಾರ್ಸ್, ಝಜ್‌ಬಾತ್ ರೀತಿಯ ಟಾಕ್‌ಶೋ, ರಿಯಾಲಿಟಿ ಶೋಗಳ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಇವರು ಗಾಯಕನಾಗಿಯೂ ಗುರುತಿಸಿಕೊಂಡವರು.
undefined
ಕಾಫಿ ಕುಡಿಯೋಕೆ ರಾತ್ರಿ ಕರೆಯೋದಾ? ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ 'ಹೆಬ್ಬುಲಿ' ನಟ
ಅಂದು ನಿರ್ದೇಶಕರೊಬ್ಬರು ಮಂಚಕ್ಕೆ ಕರೆದಿದ್ದರು, ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ಅವರ ಹೆಸರು ಹೇಳದೇ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ರಾಜೀವ್ ಮಾತನಾಡಿದ್ದಾರೆ. ನಾನು ಅಲ್ಲಿಂದ ಬೈದು ಹೊರಕ್ಕೆ ಬಂದೆ ಎಂದಿರುವ ಅವರು, ನನಗೆ ಅದೊಂದು ಕೆಟ್ಟ ಅನುಭವ. ಆದರೆ ಅವರನ್ನು ಬೈದು ಹೊರಕ್ಕೆ ಬರುವಲ್ಲಿ ಯಾವುದೇ ಹಿಂಜರಿಕೆ ಇರಲಿಲ್ಲ ಎಂದಿದ್ದಾರೆ. ಸಾರಿ ಬಾಸ್, ನೀವು ಹೇಳಿದ ಹಾಗೆ ನಾನು ಮಾಡಲಾರೆ ಎಂದು ಹೊರಕ್ಕೆ ಬಂದೆ ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿರುವ ನಟ ರಾಜೀವ್, ಮಹಿಳೆಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರು ಅಂತಹ ಸಂದರ್ಭಗಳನ್ನು ಪುರುಷರಂತೆ ನಿಭಾಯಿಸಲು ಸಾಧ್ಯವಿಲ್ಲ. ಪುರುಷರು ಇದನ್ನು ಧೈರ್ಯದಿಂದ ಎದುರಿಸಬಹುದು. ಆದರೆ ಮಹಿಳೆಯರಿಗೆ (Ladies) ಆ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎನ್ನುವುದು ರಾಜೀವ್ ಅವರ ಅಭಿಮಯ. 'ಕೆಲವೊಮ್ಮೆ ಹುಡುಗಿಯರು ಅದರಲ್ಲಿಯೂ ನಟಿಯರು ಅಂಥ ಸಂದರ್ಭಗಳಿಗೆ ಮಣಿಯಲೇ ಬೆಕಾಗುತ್ತದೆ. ಅವರಿಗೆ ಬೇರೆ ವಿಧಿ ಇರುವುದಿಲ್ಲ. ಆದರೆ ಅಂತಹ ವಿಷಯಗಳನ್ನು ಹೊರಗೆ ಹೇಳುವುದಿಲ್ಲ. ಆದರೆ ಚಿತ್ರರಂಗದಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆಯೇ ಸದಾ ಮಾತನಾಡುತ್ತಾರೆ. ಪುರುಷರ ರಕ್ಷಣೆಯ ಬಗ್ಗೆ ಯಾರಿಗೂ ಕಾಳಜಿಯಿಲ್ಲ ಎಂದೂ ರಾಜೀವ್ ಹೇಳಿದ್ದಾರೆ.
ಸದ್ಯ ಪರಿಸ್ಥಿತಿ ಬದಲಾಗಿದೆ. ಹಿಂದಿನಂತೆ ಇಲ್ಲ. ಸದ್ಯ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಒಂದಾನೊಂದು ಕಾಲದಲ್ಲಿ ಚಿತ್ರರಂಗದಲ್ಲಿ ಪುರುಷರ ಪ್ರಾಬಲ್ಯದಿಂದ ಹುಡುಗಿಯರು ತೊಂದರೆ ಅನುಭವಿಸುತ್ತಿದ್ದರು. ಅವರ ರಕ್ಷಣೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದಿದ್ದಾರೆ.
Priyanka Chopra: ಅಂಡರ್ವೇರ್ ಕಳಚಿ ಎಂದಿದ್ದ ಆ ನಿರ್ದೇಶಕ: ಕರಾಳ ದಿನದ ಕುರಿತು ಮೌನ ಮುರಿದ ನಟಿ