ಮತ್ತೆ ಸದ್ದು ಮಾಡುತ್ತಿದೆ ಡ್ರಗ್ಸ್ ದಂಧೆ; ನಿರ್ಮಾಪಕ ಅರೆಸ್ಟ್ ಬಳಿಕ ಬಿಗ್ ಬಾಸ್ ಸ್ಪರ್ಧಿಯ ಹೆಸರು ರಿವೀಲ್

By Shruthi Krishna  |  First Published Jun 24, 2023, 10:48 AM IST

ಡ್ರಗ್ಸ್ ಪ್ರಕರಣದಲ್ಲಿ ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ತೆಲುಗು ನಿರ್ಮಾಪಕ ಕೆ.ಪಿ.ಚೌಧರಿ ಅರೆಸ್ಟ್ ಬಳಿಕ ವಿಚಾರಣೆಯಲ್ಲಿ ಅನೇಕರ ಹೆಸರು ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಬಿಗ್ ಸ್ಪರ್ಧಿ ಅಶು ರೆಡ್ಡಿ ಹೆಸರು ಈಗ ಸಂಚಲನ ಮೂಡಿಸಿದೆ. 


ಚಿತ್ರರಂಗದಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ಸದ್ದು ಮಾಡುತ್ತಿದೆ. ಕಳೆದ ವರ್ಷಗಳ ಹಿಂದೆ ಭಾರತೀಯ ಸಿನಿಮಾರಂಗದಲ್ಲಿ ಡ್ರಗ್ಸ್ ದಂಧೆ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಅನೇಕ ಸ್ಟಾರ್ ಕಲಾವಿದರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿತ್ತು. ಅನೇಕ ಕಲಾವಿದರನ್ನು ವಿಚಾರಣೆ ಮಾಡಲಾಗಿತ್ತು. ಕೊಂಚ ತಣ್ಣಗಾಗಿದ್ದ ಪ್ರಕರಣ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಡ್ರಗ್ಸ್ ದಂಧೆ ಆರೋಪದ ಮೇಲೆ ಟಾಲಿವುಡ್‌ ನಿರ್ಮಾಪಕ ಕೆ.ಪಿ ಚೌಧರಿ ಅರೆಸ್ಟ್ ಆದ ಬಳಿಕ ಉಳಿದವರಿಗೆ ಭಯ ಶುರುವಾಗಿದೆ. ವಿಚಾರಣೆಯಲ್ಲಿ ಅನೇಕ ಹೆಸರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. 

ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ತೆಲುಗು ನಿರ್ಮಾಪಕ ಕೆ.ಪಿ.ಚೌಧರಿಯನ್ನು ಪೊಲೀಸರ ಇತ್ತೀಚೆಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೀಡಿರುವ ಮಾಹಿತಿಗಳು ಟಾಲಿವುಡ್​​ನಲ್ಲಿ ಸಂಚಲನ ಮೂಡಿಸಿವೆ. ನಿರ್ಮಾಪಕ ಚೌದರಿ ಜೊತೆ ನಂಟು ಹೊಂದಿದ ಸುಮಾರು 12 ಮಂದಿಯ ಹೆಸರುಗಳು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದರಲ್ಲಿ  ‘ಬಿಗ್ ಬಾಸ್ ತೆಲುಗು’ಖ್ಯಾತಿಯ ನಟಿ ಅಶು ರೆಡ್ಡಿ ಹೆಸರು ವರೈಲ್ ಆಗಿದೆ. ಕೆ.ಪಿ.ಚೌದರಿ ಜೊತೆ ಅಶು ರೆಡ್ಡಿ ನೂರಾರು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

Tap to resize

Latest Videos

ಮೂಲಗಳ ಪ್ರಕಾರ ನಿರ್ಮಾಪಕರು ಅನೇಕ ಕಲಾವಿದರಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ವಿಚಾರವನ್ನು ತನಿಖೆ ವೇಳೆ ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ. ಕೆಪಿ ಚೌಧರಿ ಅವರ ಫೋನ್‌ನಿಂದ ಸಾಕಷ್ಟು ಪುರಾವೆ ಸಿಕ್ಕಿವೆ ಎನ್ನಲಾಗಿದೆ. ತನಿಖೆಯಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಹನ್ನೊಂದು ಅನುಮಾನಾಸ್ಪದ ವಹಿವಾಟುಗಳು ಬಹಿರಂಗವಾಗಿವೆ ಎನ್ನಲಾಗಿದೆ.

ಭಾರ್ತಿ ಸಿಂಗ್-ಹರ್ಷ್ ಲಿಂಬಾಚಿಯಾ ಡ್ರಗ್ಸ್ ಕೇಸ್: ಅಪ್‌ಡೇಟ್ಸ್ ಇಲ್ಲಿದೆ!

ಜೂನ್ 14 ರಂದು ರಾಜೇಂದ್ರನಗರ ಪೊಲೀಸರು ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕೆಪಿ ಚೌಧರಿ ಅವರನ್ನು ಬಂಧಿಸಿದ್ದರು. ಚೌಧರಿ ಬಳಿ ಡ್ರಗ್ಸ್ ಕೂಡ ಪತ್ತೆ ಆಗಿತ್ತು. ಈ ಕಾರಣದಿಂದ ಚೌದರಿಯನ್ನು ಪೊಲೀಸರು ನ್ಯಾಯಾಲಯದ ಎದುರು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಪಡೆದಿದ್ದರು. ಸುಮಾರು 12 ವ್ಯಕ್ತಿಗಳ ಮೇಲೆ ಅನುಮಾನ ಮೂಡಿದೆ. ರಘು ತೇಜ, ಸುಶಾಂತ್ ರೆಡ್ಡಿ, ಸನಾ ಮಿಶ್ರಾ, ಶ್ವೇತಾ, ಟಾಗೋರ್ ಪ್ರಸಾದ್ ಸೇರಿದಂತೆ ಕೆಲವರ ಹೆಸರು ಕೆ.ಪಿ.ಚೌದರಿ ಅವರ ಡ್ರಗ್ಸ್ ಗ್ರಾಹಕರ ಪಟ್ಟಿಯಲ್ಲಿ ಇರುವುದು ಗೊತ್ತಾಗಿದೆ. 

ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!

ಅಶು ರೆಡ್ಡಿ ಪ್ರತಿಕ್ರಿಯೆ 

ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Ashu Reddy (@ashu_uuu)

click me!