
80-90ರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಖುಷ್ಬೂ ಸುಂದರ್. ಕನ್ನಡಿಗರು ಇವರನ್ನು ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವುದು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಜೊತೆ ನಟಿಸಿದ ಸಿನಿಮಾಗಳ ಮೂಲಕ. ಈ ಜೋಡಿಯ ರಣಧೀರ, ಅಂಜದ ಗಂಡು ಮತ್ತು ಯುಗ ಪುರುಷ ಚಿತ್ರಗಳಲ್ಲಿ ರವಿಚಂದ್ರನ್-ಖುಷ್ಬೂ ಜೋಡಿ ಕೆಲಸ ಮಾಡಿತ್ತು. ರವಿಚಂದ್ರನ್ ನಿರ್ದೇಶನದ ಶಾಂತಿ ಕ್ರಾಂತಿ ಚಿತ್ರ ಸಕತ್ ಹಿಟ್ ಆಗಿತ್ತು. ಈಗ ಪುನಃ ಈ ಜೋಡಿ ಥ್ರಿಲ್ಲರ್ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಈ ಸಿನಿಮಾವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಕ ಮಾಡಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ ಖುಷ್ಬೂ ಸುಂದರ್ ಸಾಕಷ್ಟು ಹೆಸರು ಮಾಡುತ್ತಿದ್ದು ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಇದೀಗ ಖುಷ್ಬೂ ಅವರಿಗೆ 53 ವರ್ಷ ವಯಸ್ಸು. ಅವರು ಮಾಡಿರುವ ಟ್ವೀಟ್ ಒಂದರಲ್ಲಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಟ್ವೀಟ್ನಲ್ಲಿ ಖುಷ್ಬೂ ಅವರು ತಾವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಬರೆದುಕೊಂಡಿದ್ದಾರೆ. ಟೇಲ್ ಬೋನ್ ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ತಿಳಿಸಿದ್ದಾರೆ. 'ನನ್ನ ಕೋಕ್ಸಿಕ್ಸ್ ಮೂಳೆಯ ಚಿಕಿತ್ಸೆಗಾಗಿ ನಾನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಬೇಗ ಗುಣಮುಖಳಾಗುವ ವಿಶ್ವಾಸವಿದೆ' ಎಂದು ಟ್ವೀಟ್ನಲ್ಲಿ ನಟಿ ತಿಳಿಸಿದ್ದಾರೆ. ಇದರ ಜೊತೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ನಿನ್ನೆ ಅಂದರೆ ಜೂನ್ 23ರ ಸಂಜೆ 5.23ಕ್ಕೆ ಶೇರ್ ಮಾಡಲಾಗಿದ್ದು, ನಿನ್ನೆ ಆಸ್ಪತ್ರೆಗೆ ದಾಖಲಾಗಿರಬಹುದು ಎನ್ನಲಾಗಿದೆ. ನಟಿಯ ಟ್ವೀಟ್ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳು ಹಾಗೂ ನೆಟ್ಟಿಗರು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.
ಮದ್ವೆ ಆದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಹನ್ಸಿಕಾ?
ಅಂದಹಾಗೆ, ನಟಿ ಇತ್ತೀಚೆಗೆ ಮತಾಂತರದ ವಿಷಯದಿಂದ ಸಕತ್ ಸುದ್ದಿಯಾಗಿದ್ದರು. ಹಲವರು ನಟಿಯನ್ನು ಟ್ರೋಲ್ ಕೂಡ ಮಾಡಿದ್ದರು. ಇದಕ್ಕೆ ಕಾರಣ, ಖುಷ್ಬೂ ಮುಂಬೈನ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದವರು. ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರಿಂದ ದಕ್ಷಿಣ ಭಾರತದ ಕಡೆಗೆ ಪ್ರಯಾಣ ಬೆಳೆಸಿದ್ದರು. 1991ರಲ್ಲಿ 'ಚಿನ್ನತಂಬಿ' ಅನ್ನೋ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಖುಷ್ಬೂ ಮತ್ತೆಂದೂ ತಿರುಗಿ ನೋಡಿಲ್ಲ. ಇವರು ತಮಿಳು ನಿರ್ದೇಶಕ ಸುಂದರ್ ಸಿ. ಅವರನ್ನು ಮದುವೆಯಾದರು. ಈ ದಾಂಪತ್ಯ ಜೀವನಕ್ಕೆ 23 ವರ್ಷಗಳೇ ಕಳೆದಿವೆ. ಆದರೆ ದಿ ಕೇರಳ ಸ್ಟೋರಿ ಬಳಿಕ ನಟಿಗೆ ಮತಾಂತರ ಕುರಿತು ಪ್ರಶ್ನೆ ಕೇಳಿ ಕೆರಳಿಸಲಾಗಿತ್ತು. ಸಿನಿಮಾರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಖುಷ್ಬೂ ಸುಂದರ್ ಸಿ (Suner C) ಅವರನ್ನು ವಿವಾಹವಾದರು. ಮುಸ್ಲಿಂ ಧರ್ಮದವರಾದ ಖುಷ್ಬೂ ಸುಂದರ್ ಅವರನ್ನು ಮದುವೆ ಆಗುವುದಕ್ಕಾಗಿ ಮತಾಂತರಗೊಂಡಿದ್ದಾರೆ ಎಂದು ಟೀಕೆ ಮಾಡಲಾಗಿತ್ತು.
ಆದರೆ ಈ ಟೀಕೆ ಖುಷ್ಬೂ (Khushboo) ಖಾರಾವಾಗಿ ಪ್ರತಿಕ್ರಿಯಿಸಿದ್ದರು. ಯಾರು ನಮ್ಮ ಮದುವೆಯನ್ನು ಪ್ರಶ್ನೆ ಮಾಡುತ್ತಿದ್ದಾರೋ ಅಥವಾ ಸುಂದರ್ ಅವರನ್ನು ಮದುವೆಯಾಗಲು ಮತಾಂತರಗೊಂಡ ಎನ್ನುತ್ತಿದ್ದಾರೋ ಅವರು ಸ್ವಲ್ಪ ಇಲ್ಲಿ ಕಿವಿಕೊಟ್ಟು ಕೇಳಿ. ನಾನು ಮತಾಂತರಗೊಂಡಿಲ್ಲ. ಅಥವಾ ಯಾರೂ ಮತಾಂತರವಾಗು ಅಂತ ಒತ್ತಡ ಹೇರಿಲ್ಲ. ಅವರಿಗೆ ಸ್ವಲ್ಪನಾದರೂ ಕಾನೂನಿನ ಅರಿವು ಇರಬೇಕು. ನಮ್ಮ ದೇಶದಲ್ಲಿ ವಿಶೇಷ ವಿವಾಹ ಕಾಯ್ದೆ ಇದೆ ಅನ್ನೋದು ನಿಮಗೆಲ್ಲಾ ಗೊತ್ತಿಲ್ಲದೆ ಇರೋ ಬೇಸರದ ಸಂಗತಿ. ನನ್ನ ದಾಂಪತ್ಯಕ್ಕೆ 23 ವರ್ಷ ಮುಗಿದಿದೆ. ನಮ್ಮ ಸುಂದರ ವೈವಾಹಿಕ (Married life) ಜೀವನವು ನಂಬಿಕೆ, ಗೌರವ, ಸಮಾನತೆ ಮತ್ತು ಪ್ರೀತಿಯ ತಳಪಾಯದ ಮೇಲೆ ನಿಂತಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಫ್ಯಾನ್ಸ್ ಕೂಡ ಸಾಥ್ ನೀಡಿದ್ದರು. ಇದೀಗ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಶಾಕ್ ಆಗಿದ್ದು, ಶೀಘ್ರದಲ್ಲಿ ಗುಣಮುಖರಾಗಿ ಎನ್ನುತ್ತಿದ್ದಾರೆ.
Gehana Vasisth: ಮುಸ್ಲಿಂ ಯುವಕನ ಜೊತೆ ಪೋರ್ನ್ ಕೇಸ್ ನಟಿ ಮದ್ವೆ: ಇಸ್ಲಾಂಗೆ ಮತಾಂತರ?
ಖುಷ್ಬೂ ನಟ, ನಿರ್ದೇಶಕ ಸಿ ಸುಂದರ್ ಅವರನ್ನು ಮದುವೆ ಆಗುವುದಕ್ಕೂ ಮುನ್ನ ಪ್ರಭು ಗಣೇಶನ್ ಅವರನ್ನು ಪ್ರೀತಿಸುತ್ತಿದ್ದರು. 1993ರಲ್ಲಿ ಖುಷ್ಬೂ ಹಾಗೂ ಪ್ರಭು ಮದುವೆಯಾದರು. ಆದರೆ, ಪ್ರಭು ತಂದೆ ಶಿವಾಜಿ ಗಣೇಶನ್ ಇವರಿಬ್ಬರ ಮದುವೆಯನ್ನು ಒಪ್ಪಲಿಲ್ಲ. ಈ ಕಾರಣಕ್ಕೆ ನಾಲ್ಕು ತಿಂಗಳ ಬಳಿಕ ಇಬ್ಬರು ಬೇರೆಯಾದರು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.