ರಜನಿಕಾಂತ್ '2.0' ಸಿನಿಮಾ ಹಿಂದಿಕ್ಕಿದ 'RRR'; ಭಾರತದ ಟಾಪ್ 6 ಸಿನಿಮಾಗಳಲ್ಲಿ RRR

By Shruiti G Krishna  |  First Published Apr 4, 2022, 12:09 PM IST

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಈಗಾಗಲೇ ಅನೇಕ ಸಿನಿಮಾಗಳ ದಾಖಲೆ ಮುರಿದು ಮುನ್ನುಗ್ಗುತ್ತಿದೆ. ಇದೀಗ ರಜನಿಕಾಂತ್ ನಟನೆಯ 2.0 ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುವ ಮೂಲಕ ಭಾರತದ ಅತೀ ಹೆಚ್ಚು ಗಳಿಕೆ ಮಾಡಿದ 6ನೇ ಸಿನಿಮಾ ಆರ್ ಆರ್ ಆರ್ ಎನ್ನುವ ಹೆಗ್ಗಳಿಗೆ ಪಾತ್ರವಾಗಿದೆ. 


ಎಸ್ ಎಸ್ ರಾಜಮೌಳಿ(SS Rajamouli) ನಿರ್ದೇಶನದ ಆರ್ ಆರ್ ಆರ್(RRR) ಸಿನಿಮಾ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದು ಅನೇಕ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಗಂಗೂಬಾಯಿ ಕಾಠಿಯಾವಾಡಿ, ಕಾಶ್ಮೀರ್ ಫೈಲ್ಸ್(Kashmir Files), ಬಾಹುಬಲಿ(Bahubali) ಸಿನಿಮಾಗಳ ಹಿಂದಿ ರೆಕಾರ್ಡ್ ಬ್ರೇಕ್ ಮಾಡಿದ ಆರ್ ಆರ್ ಆರ್ ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 2.0 ಸಿನಿಮಾದ ಲೈಫ್ ಟೈಂ ಕಲೆಕ್ಷನ್ ಹಿಂದಿಕ್ಕಿದೆ. ತಲೈವಾ ನಟನೆಯ 2.0 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 10 ದಿನಕ್ಕೆ 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಸೂಪರ್ ಸ್ಟಾರ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡುವ ಮೂಲಕ ಆರ್ ಆರ್ ಆರ್ ಭಾರತದ ಹೆಚ್ಚು ಗಳಿಕೆ ಸಿನಿಮಾಗಳಲ್ಲಿ 6ನೇ ಸ್ಥಾನದಲ್ಲಿದೆ.

ಮಾರ್ಚ್ 25ರಂದು ಬಿಡುಗಡೆಯಾದ ಆರ್ ಆರ್ ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ. ಈಗಾಗಲೇ ವಿಶ್ವದಾದ್ಯಂತ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹೀಗೆ ಮುನ್ನುಗ್ಗಿದ್ದರೆ ಸದ್ಯದಲ್ಲೇ 1000ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

RRR Collection; 8ನೇ ದಿನ ರಾಮ್ ಚರಣ್ - ಜೂ.ಎನ್ ಟಿ ಆರ್ ಸಿನಿಮಾ ಗಳಿಸಿದೆಷ್ಟು?

Tap to resize

Latest Videos

ಆರ್ ಆರ್ ಆರ್ ಕಲೆಕ್ಷನ್ ಬಗ್ಗೆ ಸಿನಿಮಾ ವಿಶ್ಲೇಷಕ ಮನೋಬಾಲ್ ವಿಜಯ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಆರ್ ಆರ್ ಆರ್ 819.06 ಕೋಟಿ ಕಲೆಕ್ಷನ್ ಮಾಡಿದೆ. ರಜನಿಕಾಂತ್ ಅವರ 2.0 ಸಿನಿಮಾ ಲೈಫ್ ಟೈಂ ಕಲೆಕ್ಷನ್ ಬೀಟ್ ಮಾಡಿದ್ದು ಭಾರತದ ಅತೀ ಹೆಚ್ಚು ಗಳಿಕೆಯ 6ನೇ ಸಿನಿಮಾವಾಗಿದೆ' ಎಂದು ಹೇಳಿದ್ದಾರೆ.

ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ ಟಾಪ್ 5 ಸಿನಿಮಾಗಳೆಂದರೆ ದಂಗಲ್, ಬಾಹುಬಲಿ ಕನ್ ಕ್ಲೂಷನ್, ಬಜರಂಗಿ ಭಾಯಿಜಾನ್, ಸೀಕ್ರೆಟ್ ಸೂಪರ್ ಸ್ಟಾರ್ ಮತ್ತು ಪಿಕೆ ಸಿನಿಮಾಗಳು. ಇದೀಗ 6ನೇ ಸಿನಿಮಾ ಆರ್ ಆರ್ ಆರ್ ಆಗಿದೆ.

ಸೂಪರ್ ಸ್ಟಾರ್ ರಜನಿಕಾಂತ್(Rajinikanth) ನಟನೆಯ 2.0 ಸಿನಿಮಾದ ಬಗ್ಗೆ ಹೇಳುವುದಾದರೆ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಬಂದ ಸಿನಿಮಾವಾಗಿದೆ. ಸೈನ್ಸ್ ಫಿಕ್ಷನ್ ಸಿನಿಮಾವಾಗುದ್ದು ಚಿತ್ರದಲ್ಲಿ ರಜನಿಕಾಂತ್ ಜೊತೆ ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ನಟಿಸಿದ್ದಾರೆ. ಲೈಕಾ ಸಂಸ್ಥೆ ನಿರ್ಮಾಣ ಮಾಡಿದ್ದು, ಆರ್ ಆರ್ ಆರ್ ಸಿನಿಮಾದ ಹಾಗೆ 450 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ.

'ನಾಟು ನಾಟು...'ಹಾಡು ಹೇಳಿ 'RRR' ಸಿನಿಮಾವನ್ನು ಹೊಗಳಿದ ರಣವೀರ್ ಸಿಂಗ್

ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

click me!