
ಕಾಮಿಡಿ ಕ್ವೀನ್, ಡಾನ್ಸರ್ ಭಾರತಿ ಸಿಂಗ್(Bharti Singh) ಮತ್ತು ಹರ್ಷ್ ಲಿಂಬಾಚಿಯಾ(Haarsh) ದಂಪತಿ ಗಂಡು ಮಗುವನ್ನು(baby boy) ಸ್ವಾಗತಿಸಿದ್ದಾರೆ. ಭಾರತಿ ಸಿಂಗ್ ಏಪ್ರಿಲ್ 3 ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗಂಡು ಮಗು ಎಂದು ಹೇಳಿದ್ದಾರೆ. ಭಾರತಿ ಸಿಂಗ್ ಹರ್ಷ್ ದಂಪತಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ಅಂದಹಾಗೆ ಭಾರತಿ ಸಿಂಗ್ ಇತ್ತೀಚಿಗಷ್ಟೆ ಪ್ರೆಗ್ನೆನ್ಸಿ ಫೋಟೋಶೂಟ್(Photoshoot) ಮೂಲಕ ಮಿಂಚಿದ್ದರು. ಭಾರತಿ ಸಿಂಗ್ ಬೇಬಿ ಬಂಪ್ ಫೋಟೋಗಳು ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿತ್ತು ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ವಿಶೇಷ ಎಂದರೆ ಭಾರತಿ ಸಿಂಗ್ ಮಗುವಿಗೆ ಜನ್ಮ ನೀಡುವ ವರೆಗೂ ಕೆಲಸದಲ್ಲಿ ತೊಡಗಿಕೊಂಡಿದ್ದರು. ಭಾರತಿ ಸಿಂಗ್ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಭಾರತಿ ಸಿಂಗ್ ಹಿಂದಿ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಭಾರತಿ ಸಿಂಗ್ ನಿರೂಪಣೆ ಮಾಡುತ್ತಿದ್ದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅತ್ಯಂತ ಜನಪ್ರಿಯ ಶೋಗಳನ್ನು ತುಂಬಾ ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಹೆರಿಗೆ ಆಗುವ ವರೆಗೂ ಕೆಲಸ ಮಾಡುತ್ತಾ ಸಖತ್ ಆಕ್ಟೀವ್ ಆಗಿದ್ದ ಭಾರತಿ ಸಿಂಗ್, ಖತ್ರಾ ಖತ್ರಾ ರಿಯಾಲಿಟಿ ಶೋ ನಡೆಸಿಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕಾಮಿಡಿಯನ್ Bharti Singh ಬೇಬಿಬಂಪ್ ಫೋಟೋಶೂಟ್ ವೈರಲ್
ಕಳೆದ ಕೆಲವು ದಿನಗಳ ಹಿಂದೆ ಭಾರತಿ ಸಿಂಗ್ ಮತ್ತು ಹರ್ಷ್ ದಂಪತಿ ಹೆಣ್ಣು ಅವಳಿಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬು ವದಂತಿ ಹಬ್ಬಿತ್ತು. ಆದರೆ ಭಾರತಿ ಸಿಂಗ್ ದಂಪತಿ ಆ ವದಂತಿಯನ್ನು ತಳ್ಳಿ ಹಾಕಿದ್ದರು. ತಾವಾಗಿಯೇ ಮಾಹಿತಿ ಹಂಚಿಕೊಳ್ಳುವ ವರೆಗೂ ಯಾವುದೇ ವದಂತಿಯನ್ನು ನಂಬಬೇಡಿ ಎಂದು ಹೇಳಿದ್ದರು.
ಭಾರತಿ ಸಿಂಗ್ ಮತ್ತು ಹರ್ಷ್ ಇಬ್ಬರು ಮದುವೆಗೆ ಮೊದಲು ಸುಮಾರು 7 ವರ್ಷಗಳ ಕಾಲ ಪರಸ್ಪರ ಡೇಟ್ ಮಾಡುತ್ತಿದ್ದರು. ಮೊದಲು ಸ್ನೇಹಿತರಾಗಿದ್ದ ಇವರ ಸಂಬಂಧ ನಂತರ ಅದು ಪ್ರೀತಿಗೆ ತಿರುಗಿತು. ರಿಯಾಲಿಟಿ ಶೋ ಕಾಮಿಡಿ ಸರ್ಕಸ್‌ನಲ್ಲಿ ಇಬ್ಬರೂ ಮೊದಲು ಭೇಟಿಯಾದರು. ಭಾರತಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಸೇರಿದರು, ಹರ್ಷ್ ಚಿತ್ರಕಥೆಗಾರರಾಗಿದ್ದರು. ಈ ಕಾರ್ಯಕ್ರಮದ ವೇಳೆ ಇಬ್ಬರೂ ಸ್ನೇಹಿತರಾದರು.
ಒಂದು ವರ್ಷದ ಗೆಳೆತನದ ನಂತರ ಹರ್ಷ್ ಭಾರತಿಯನ್ನು ಇಷ್ಟಪಡಲಾರಂಭಿಸಿದರು. ಒಂದು ದಿನ ಹರ್ಷ ಭಾರತಿಗೆ ಪ್ರಪೋಸ್ ಮಾಡಿದರು. ಆದರೆ, ಅದು ನಿಜವೋ ಅಥವಾ ತಮಾಷೆಯೋ ಎಂದು ಭಾರತಿಗೆ ಅರ್ಥವಾಗಿರಲಿಲ್ಲವಂತೆ. ದಪ್ಪಗಿದ್ದ ಭಾರತಿ ಹರ್ಷ್ ಅಂತ ವ್ಯಕ್ತಿ ಪ್ರಪೋಸ್ ಮಾಡ್ತಾರೆ, ತೆಳ್ಳಗಿರುವ ವ್ಯಕ್ತಿಯನ್ನು ಮದುವೆ ಆಗುತ್ತೇನೆ ಎಂದು ಯಾವಾಗಲು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದರು.
ಪತಿ ಸ್ಟಡಿ ರೂಮ್ ಮಗುವಿಗೆ ನರ್ಸರಿಯಾಗಿ ಬದಲಿಸಿದ ಭಾರತಿ ಸಿಂಗ್; ಶಾಕ್ ಆದ ಹರ್ಷ ಲಿಂಬಾಚಿಯಾ
ಭಾರತ್ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡಿದ್ದರು. ಅವರು ಗೋವಾದಲ್ಲಿ 5 ದಿನಗಳ ಮದುವೆಯ ಸಮಾರಂಭ ನಡೆದಿತ್ತು. ಅನೇಕ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.