Urfi Javed ಮೈ ತೋರಿಸ್ತಿಯಾ ಟೈಟ್ ಬಟ್ಟೆ ಹಾಕ್ತೀಯಾ ಈಗ ನಡೆಯೋಕೂ ಕಷ್ಟನಾ: ಉರ್ಫಿ ಟ್ರೋಲ್

By Vaishnavi ChandrashekarFirst Published Oct 14, 2022, 1:20 PM IST
Highlights

ಬರ್ತ ಡೇ ದಿನವೂ ಉರ್ಫಿ ಜಾವೇದ್ ಟ್ರೋಲ್. ಫ್ಯಾಷನ್ ಡಿಸೈನರ್ ಮತ್ತು ಅಸಿಸ್ಟೆಂಗ್‌ನ ತರಾಟೆಗೆ ತೆಗೆದುಕೊಂಡ ನೆಟ್ಟಿಗರು...

ಹಿಂದಿ ಕಿರುತೆರೆ ಜನಪ್ರಿಯ ನಟಿ, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್‌ ಯೂನಿಕ್ ಸ್ಟೈಲ್‌ ಸೆನ್ಸಸ್‌ನಿಂದಾ ಸದಾ ಸುದ್ದಿಯಲ್ಲಿರುತ್ತಾರೆ. ಅಕ್ಟೋಬರ್ 15ರಂದು 25ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸುಂದರಿ ಸ್ನೇಹಿತರ ಜೊತೆ ಪ್ರೀ- ಬರ್ತಡೇ ಸೆಲೆಬ್ರೆಷನ್ ಆರಂಭಿಸಿದ್ದಾರೆ. ವಿಭಿನ್ನವಾಗಿರುವ ಉಡುಪು ಧರಿಸಿ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ಪಿಂಕ್ ಲುಕ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ.

ಮೈ ಕಾಣುವಂತೆ ಪಿಂಕ್ ಬಣ್ಣದ ಡಿಸೈನರ್ ಡ್ರೆಸ್ ಧರಿಸಿರುವ ಉರ್ಫಿ ಕಾರಿನಿಂದ ಇಳಿದು ನಡೆಯುವುದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ. ತಕ್ಷಣವೇ ಮಹಿಳೆಯೊಬ್ಬರು ಓಡಿ ಬಂದು ಉರ್ಫಿಗೆ ಸಹಾಯ ಮಾಡುತ್ತಾರೆ. ಒಂದು ಹೆಜ್ಜೆ ಇಡುವುದಕ್ಕೂ ಕಷ್ಟ ಪಡುವ ಉರ್ಫಿ ಅವಸ್ಥೆ ನೋಡಿ ನೆಟ್ಟಿಗರು ಹಾಸ್ಯ ಮಾಡಿದ್ದಾರೆ. ನೆಗೆಟಿವ್ ಕಾಮೆಂಟ್ಸ್ ಉರ್ಫಿಗೆ ತುಂಬಾನೇ ಕಾಮನ್ ಆದರೆ ಈ ಹುಚ್ಚಾಟಕ್ಕೆ ಪಾಸಿಟಿವ್ ಕಾಮೆಂಟ್‌ ಕೂಡ ಹರಿದು ಬರುತ್ತಿದೆ.

ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅನ್ನೋ ವಿಚಾರನ ಉರ್ಫಿ ಸೀರಿಯಸ್ ಅಗಿ ತೆಗೆದುಕೊಂಡಿರಬೇಕು. ಪ್ರೈವೇಟ್‌ ಪಾರ್ಟ್‌ಗಳಿಗೆ ಪಿಂಕ್ ಸ್ಯಾಟಿನ್ ಬಟ್ಟೆಯಿಂದ ಕವರ್ ಮಾಡಿ ಅದಕ್ಕೆ ಡಿಸೈನ್ ಆಗಿ ಬೀಡ್ಸ್‌ ಅಥವಾ ಮಣಿಗಳು ತುಂಬಿಕೊಂಡಿದೆ. ಸಿಂಪಲ್ ಮೇಕಪ್‌ ಮತ್ತು ಕ್ರೇಜಿ ಬನ್ ಹೇರ್‌ ಸ್ಟೈಲ್ ಮಾಡಿಕೊಂಡಿರುವ ಉರ್ಫಿ 5 ಇಂಚು ಹೀಲ್ಸ್‌ ಧರಿಸಿದ್ದಾರೆ.

ನೆಟ್ಟಿಗರ ಕಾಮೆಂಟ್:

ಮುಂಬೈ ಗಲ್ಲಿಗೂ ಹಾಟ್ ಧರಿಸುವ ಉರ್ಫಿನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಲೆಬ್ರಿಟಿಗಳಲ್ಲಿ ಕ್ಲಾಸ್ ಮತ್ತು ಗ್ರಾಸ್‌ಗೆ ವ್ಯತ್ಯಾಸ ಈ ವಿಡಿಯೋ ನೋಡಿದ್ದರೆ ಸಾಕು, ಇಷ್ಟೊಂದು ಕಷ್ಟ ಪಟ್ಟು ಡ್ರೆಸ್ ಧರಿಸಬೇಕಾ? ಒಂದು ಹೆಜ್ಜೆ ಇಡುವುದಕ್ಕೂ ಕಷ್ಟ ಪಡುತ್ತಿದ್ದಾಳೆ ಅಂದ್ಮೇಲೆ ಯಾಕೆ ಬೇಕು ಈ ರೀತಿ ಡ್ರೆಸ್?, ಇವಳನ್ನು ನೋಡಿ ಇನ್ನು ಮುಂದೆ ಹೆಣ್ಣು ಮಕ್ಕಳು ಈ ರೀತಿ ಬರ್ತಡೇ ಬಟ್ಟೆ ಬೇಕು ಅಂದ್ರೆ ಏನ್ ಮಾಡ್ಬೇಕು?ಮೈ ತೋರಿಸ್ತಿಯಾ ಟೈಟ್ ಬಟ್ಟೆ ಹಾಕ್ತೀಯಾ ಈಗ ನಡೆಯೋಕೂ ಕಷ್ಟನಾ' ಎಂದು ಲಕ್ಷಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿದೆ.

ಚಿಟ್ಟೆ ರೀತಿ ಹಾರಿ ಬಂದ ಉರ್ಫಿ; ಕಾಫಿ ಹಿಡ್ಕೊಳ್ಳುವ ಶೋಕಿ ಬೇಕಾ ಎಂದ ನೆಟ್ಟಿಗರು

 

ಇಂಟ್ರೆಸ್ಟಿಂಗ್ ಉರ್ಫಿ:

ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ಸಿನಿ ಜರ್ನಿ ಆರಂಭಿಸಿದ್ದವರು ಇದ್ದಾರೆ. ಆದರೆ ಉರ್ಫಿ ಪದವಿ ಪಡೆದ ನಂತರ ಟಿವಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮಾಸ್ ಕಮ್ಯೂನಿಕೇಷನ್‌ನಲ್ಲಿ ಪದವಿ ಪಡೆದು ಟಿವಿ ನಿರೂಪಕಿ ಅಥವಾ ನ್ಯೂಸ್ ರೀಡರ್ ಆಗುವ ಕನಸು ಕಟ್ಟಿಕೊಂಡಿದ್ದರಂತೆ. 

ಉರ್ಫಿ ಬಗ್ಗೆ ನೆಗೆಟಿವ್ ಕಾಮೆಂಟ್ ಓದಿ ಓದಿ ಆಕೆಯ ಅವಿದ್ಯಾವಂತ ಅನ್ನೋ ಮಾತುಗಳು ಸೃಷ್ಟಿ ಆಗಿತ್ತು. ಆದರೆ ಯಾರಿಗೂ ಗೊತ್ತಿಲ್ಲ ಬಿಡುವಿನ ಸಮಯದಲ್ಲಿ ಉರ್ಫಿ ಎಂದೂ ಮೊಬೈಲ್ ನೋಡುವುದಿಲ್ಲ ಬದಲಿಗೆ ಪುಸ್ತಗಳನ್ನು ಓದುತ್ತಾರಂತೆ.ಅದರಲ್ಲೂ ಚೇತನ್ ಭಗಟ್ 2 ಸ್ಟೇಟ್ಸ್‌ ಬುಕ್ ಫೆವರೆಟ್ ಅಂದಿದ್ದಾರೆ.

ವಿಚಿತ್ರ ಡ್ರೆಸ್‌ ಧರಿಸಿ ಗಮನ ಸೆಳೆಯುತ್ತಿದ್ದ ನಟಿ ಉರ್ಫಿ ಆಸ್ಪತ್ರೆಗೆ ದಾಖಲು

ಟಿವಿ ಜರ್ನಿಗೂ ಮುನ್ನ ಮುಂಬೈನಲ್ಲಿ ಅಸಿಸ್ಟೆಂಟ್‌ ಫ್ಯಾಷನ್ ಡಿಸೈನರ್ ಆಗಿ ಉರ್ಫಿ ಕೆಲಸ ಮಾಡಿದ್ದಾರೆ. ಕೆಲವು ವರ್ಷಗಳ ಕಾಲ ಧಾರಾವಾಹಿಗಳಿಗೆ ತಮ್ಮ ಡ್ರೆಸ್ ತಾವೇ ಡಿಸೈನ್‌ ಮಾಡಿಕೊಳ್ಳುತ್ತಿದ್ದೆ ಎಂದು ಈ ಹಿಂದೆ ಹೇಳಿದ್ದರು. ಈಗ ಉರ್ಫಿಗೆ ಡಿಸೈನ್ ಮಾಡಲು ವಿಶ್ವಾದ್ಯಂತ ಡಿಸೈನರ್‌ಗಳು ಕಾಯುತ್ತಾರೆ.

 

click me!