ಮಾಲಿವುಡ್ ಆಯ್ತು, ಇದೀಗ ಬಾಲಿವುಡ್‌ಗೆ ಕಾಲಿಟ್ಟ ರಾಜ್‌ ಬಿ ಶೆಟ್ಟಿ: ಬಾಬಿ ಡಿಯೋಲ್ ಜೊತೆ ಅಬ್ಬರಿಸುತ್ತಾರಾ?

By Kannadaprabha News  |  First Published Aug 14, 2024, 6:04 PM IST

ಅನುರಾಗ್‌ ಕಶ್ಯಪ್‌ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ನನಗೆ ಅವರ ಸಿನಿಮಾಗಳು ಇಷ್ಟ. ಅವು ನನ್ನ ಆಪ್ತರು ಕೂಡ. ಕ್ಯಾಮಿಯೋ ಪಾತ್ರದಲ್ಲಿ ನಟಿಸುತ್ತೀಯಾ ಎಂದು ಕೇಳಿದರು. ನಾನು ಒಪ್ಪಿದೆ. ಮುಂದಿನ ವಿವರಗಳನ್ನು ಅವರೇ ಅಧಿಕೃತವಾಗಿ ತಿಳಿಸುತ್ತಾರೆ.


ಅನುರಾಗ್‌ ಕಶ್ಯಪ್‌ ನಿರ್ದೇಶನದ ಹಿಂದಿ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಕ್ಯಾಮಿಯೋ ಪಾತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂನ ಖ್ಯಾತ ನಟ ಜೋಜು ಜಾರ್ಜ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಥ್ರಿಲ್ಲರ್‌ ಸಿನಿಮಾದಲ್ಲಿ ಬಾಬಿ ಡಿಯೋಲ್ ಕೂಡ ಇದ್ದಾರೆ.

ಈ ಕುರಿತು ರಾಜ್‌ ಬಿ ಶೆಟ್ಟಿ, ‘ಅನುರಾಗ್‌ ಕಶ್ಯಪ್‌ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ನನಗೆ ಅವರ ಸಿನಿಮಾಗಳು ಇಷ್ಟ. ಅವು ನನ್ನ ಆಪ್ತರು ಕೂಡ. ಕ್ಯಾಮಿಯೋ ಪಾತ್ರದಲ್ಲಿ ನಟಿಸುತ್ತೀಯಾ ಎಂದು ಕೇಳಿದರು. ನಾನು ಒಪ್ಪಿದೆ. ಮುಂದಿನ ವಿವರಗಳನ್ನು ಅವರೇ ಅಧಿಕೃತವಾಗಿ ತಿಳಿಸುತ್ತಾರೆ’ ಎನ್ನುತ್ತಾರೆ. ಹೊಸ ಸಿನಿಮಾದ ಶೀರ್ಷಿಕೆ ಮತ್ತಿತರ ವಿವರಗಳನ್ನು ಅನುರಾಗ್‌ ಕಶ್ಯಪ್‌ ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

Tap to resize

Latest Videos

ವಿಜಯ್‌ ನಟನೆಯ ವಿಕೆ 29ನಲ್ಲೂ ಶೆಟ್ರು ನಟನೆ: ವಿಜಯ್‌ ಕುಮಾರ್‌ ನಟನೆಯ ‘ವಿಕೆ 29’ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ನಟಿಸುವುದು ಬಹುತೇಕ ಖಚಿತವಾಗಿದೆ. ಜಡೇಶ್ ಹಂಪಿ ನಿರ್ದೇಶನದ ಈ ಸಿನಿಮಾ ಶಿವರಾಮ ಕಾರಂತರ ‘ಚೋಮನ ದುಡಿ’ಯಿಂದ ಪ್ರೇರಣೆ ಪಡೆದಿದೆ ‘ರಾಜ್‌ ಬಿ ಶೆಟ್ಟಿ ಅವರನ್ನು ಸಂಪರ್ಕಿಸಿದ್ದೇವೆ. ಅವರಿಗೆ ಈ ಪಾತ್ರ ಚಿತ್ರಣ ಬಹಳ ಇಷ್ಟವಾಗಿದೆ. ಆದರೆ ಸದ್ಯ ಅವರು ಮಲಯಾಳಂ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಾರಣ ಉಳಿದ ಮಾತುಕತೆಗಳು ನಡೆದಿಲ್ಲ. ಸದ್ಯದಲ್ಲೇ ಅವರ ಎಂಟ್ರಿ ಬಗ್ಗೆ ಖಚಿತ ಪಡಿಸುವೆ’ ಎಂದಿದ್ದಾರೆ ಜಡೇಶ್ ಹಂಪಿ.

ಮಟನ್‌ ಬಿರಿಯಾನಿ ಬೇಕೆಂದಾಗ ಮೊಸರನ್ನ ಅಂಗಡಿ ತೆಗೆಯಬಾರದು: ನಟ ರಾಜ್‌ ಬಿ ಶೆಟ್ಟಿ

‘ಮಂಗಳೂರು ಮೂಲದ ನಟ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಅವರ ಪಾತ್ರಕ್ಕೆ ಒಂದು ಪ್ರಬಲ ಸಿದ್ಧಾಂತವಿದೆ. ಬಹಳ ಸ್ಟ್ರಾಂಗ್‌ ಆಗಿರುವ ವಿಭಿನ್ನ, ವಿಲಕ್ಷಣ ವ್ಯಕ್ತಿತ್ವ ಸಿನಿಮಾದಲ್ಲಿ ತನ್ನ ಅನನ್ಯತೆಯ ಕಾರಣಕ್ಕೇ ಗುರುತಿಸಿಕೊಳ್ಳಲಿದೆ. ಇದು ವಿಲನ್‌ ಪಾತ್ರವಲ್ಲ, ತನ್ನದೇ ಪ್ರಬಲ ಐಡೆಂಟಿಟಿ ಇರುವ ಪಾತ್ರ’ ಎಂದೂ ಜಡೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರ ಹಾಗೂ ಗುಡಿಬಂಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ರಚಿತಾ ರಾಮ್ ನಾಯಕಿ. ವಿಜಯ್‌ ಕುಮಾರ್‌ ಮಗಳು ರಿತನ್ಯಾ ಹಾಗೂ ಶಿಶಿರ್‌ ಮುಖ್ಯಪಾತ್ರಗಳಲ್ಲಿದ್ದಾರೆ.

click me!