ನಿಮ್ಮ ಬಯೋಪಿಕ್‌ ಮಾಡಿದ್ರೆ ಯಾವ ಹೀರೋ ಬಯಸುವಿರಿ ಕೇಳಿದ್ರಿ ರಾಹುಲ್ ದ್ರಾವಿಡ್‌ ಹೀಗೆ ಹೇಳೋದಾ?

By Suchethana D  |  First Published Aug 24, 2024, 1:44 PM IST

ನಿಮ್ಮ ಬಯೋಪಿಕ್‌ ಮಾಡಿದ್ರೆ ಯಾವ ಹೀರೋ ಬಯಸುವಿರಿ  ರಾಹುಲ್ ದ್ರಾವಿಡ್‌ ಹೇಳಿದ್ದೇನು? ಕ್ರಿಕೆಟಿಗನ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದೇಕೆ? 
 


ಸೆಲೆಬ್ರಿಟಿಗಳ ಜೀವನವನ್ನು ಆಧರಿಸಿ ಬಯೋಪಿಕ್‌ ತಯಾರಿಸುವುದು ಬಹಳ ಹಿಂದಿನಿಂದಲೂ ನಡೆದಿದೆ. ಅದರಲ್ಲಿಯೂ ಕ್ರಿಕೆಟ್‌ ತಾರೆಯರ ಬಯೋಪಿಕ್‌ ಇದಾಗಲೇ ಬಂದು ಹೋಗಿದೆ. ಕ್ರಿಕೆಟ್‌ ಮಾಂತ್ರಿಕ ಸಚಿನ್ ತೆಂಡೂಲ್ಕರ್‌, ಎಂ.ಎಸ್ ಧೋನಿ, , ಮೊಹಮ್ಮದ್ ಅಜರುದ್ದೀನ್  ಅವರ ಜೀವನಾಧಾರಿತ ಬಯೋಪಿಕ್‌ ಇದಾಗಲೇ ಬಂದಿದ್ದು, ಇದೀಗ  ಕ್ರಿಕೆಟಿಗ ಯುವರಾಜ್‌ ಸಿಂಗ್ ಬಯೋಪಿಕ್‌ ಆಗಲು ಸಿದ್ಧತೆ ನಡೆದಿದೆ. ಇದರ ನಡುವೆಯೇ ಈಗ ರಾಹುಲ್‌ ದ್ರಾವಿಡ್‌ ಅವರ ಬಯೋಪಿಕ್‌ ಕುರಿತು ಚರ್ಚೆ ನಡೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಒಂದು ವೇಳೆ ನಿಮ್ಮ ಬಯೋಪಿಕ್‌ ಮಾಡುವುದಿದ್ದರೆ, ಯಾವ ಹೀರೋ ನಿಮ್ಮ ರೋಲ್‌ ಮಾಡಲು ಬಯಸುತ್ತೀರಿ ಎಂದು.

ಇದಕ್ಕೆ ನಗುತ್ತಲೇ, ರಾಹುಲ್‌ ಅವರು ಕೊಟ್ಟಿರುವ ಉತ್ತರ ಎಲ್ಲರನ್ನೂ ನಕ್ಕಿ ನಗಿಸುತ್ತಿದೆ. ಅಷ್ಟಕ್ಕೂ, ಟೀಮ್ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇವರ ಕೋಚಿಂಗ್‌ ಸ್ಕಿಲ್‌ಗೆ ವಿಶ್ವವೇ ತಲೆ ಬಾಗಿದೆ. ಕ್ರಿಕೆಟ್‌ ಅಂಗಳದಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಸದ್ದು ಮಾಡಿದ್ದ, ಗೋಡೆ ಖ್ಯಾತಿಯ ರಾಹುಲ್‌ ದ್ರಾವಿಡ್‌ ಬಳಿಕ ಕೋಚ್‌ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ದ್ರಾವಿಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಭಾರತದ ಪರ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿರುವ ಅವರು, 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಮುಖ್ಯ ಕೋಚ್​ ಆಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ.

Tap to resize

Latest Videos

undefined

ಅಪ್ಪು ಸರ್​ ಸಾಯೋ ಎರಡು ದಿನ ಮುಂಚೆ ನನಗೆ ಮೆಸೇಜ್​ ಕಳಿಸಿದ್ರು... ನಟ ಪ್ರಥಮ್ ಹೇಳಿದ್ದೇನು?

ಇವರ ಬಯೋಪಿಕ್‌ ಕುರಿತು ಅವರಿಗೆ ಪ್ರಶ್ನೆ ಕೇಳಿದಾಗ, ರಾಹುಲ್‌ ಅವರು ನಗುತ್ತಾ,   ‘ಸಾಕಷ್ಟು ಹಣ ಕೊಟ್ಟರೇ ಈ ಪಾತ್ರವನ್ನು ನಾನೇ ನಿರ್ವಹಿಸುತ್ತೇನೆ’ ಎಂದಿದ್ದಾರೆ! ಇದರ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಕತ್‌ ಸೌಂಡ್‌ ಮಾಡುತ್ತಿದೆ. ರಾಹುಲ್‌ ದ್ರಾವಿಡ್‌ ಅವರಿಗೆ ಅವರೇ ಸಾಟಿ. ಯಾವ ನಟರೂ ಅವರ ರೋಲ್‌ ಮಾಡಲು ಸಾಧ್ಯವಿಲ್ಲ. ಅವರು ಹೇಳ್ತಿರೋದು ನಿಜವಿದೆ. ಅವರೇ ಈ ರೋಲ್‌ಗೆ ಬೆಸ್ಟ್‌ ಎಂದು ಹಲವರು ಕಮೆಂಟ್‌ ಮೂಲಕ ಹೇಳುತ್ತಿದ್ದಾರೆ. ಇನ್ನ ಕೆಲವರು ತಮ್ಮ ತಮ್ಮ ಇಷ್ಟದ ಹೀರೋ ಹೆಸರುಗಳನ್ನು ಹೇಳುತ್ತಿದ್ದಾರೆ.  

ಇನ್ನು ಇದಾಗಲೇ  ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಬಯೋಪಿಕ್​ ಸಿದ್ಧವಾಗುತ್ತಿದೆ. ಇವರ ಪಾತ್ರ ಯಾರು ಮಾಡಲಿದ್ದಾರೆ ಎನ್ನುವುದು ಇದುವರೆಗೆ ಬಹಿರಂಗಗೊಳ್ಳಲಿಲ್ಲ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಬಯೋಪಿಕ್ ಅನ್ನು ಭೂಷಣ್ ಕುಮಾರ್ ಅವರ ಟಿ-ಸೀರೀಸ್ ನಿರ್ಮಿಸಲಿದೆ.  ರವಿ ಭಾಗ್ಚಂಡ್ಕಾ ಸಹ-ನಿರ್ಮಾಣ ಮಾಡಲಿದ್ದಾರೆ.  

ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು! ಅಂಥದ್ದೇನಿದೆ ನೋಡಿ...

click me!